Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತಿನಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆಯೇ?; ತೋರು ಬೆರಳು ತೋರಿಸಿ ಖಡಕ್ ಉತ್ತರ ಕೊಟ್ಟ ಸಚಿವ ಜೈಶಂಕರ್

'ಲಿವ್ ಟು ವೋಟ್ ಅನದರ್ ಡೇ: ಫೋರ್ಟಿಫೈಯಿಂಗ್ ಡೆಮಾಕ್ರಟಿಕ್ ರೆಸಿಲಿಯನ್ಸ್' ಕುರಿತ ಪ್ಯಾನಲ್ ಚರ್ಚೆಯ ಸಂದರ್ಭದಲ್ಲಿ ಕೇಂದ್ರ ಸಚಿವ ಎಸ್​. ಜೈಶಂಕರ್ ಮಾತನಾಡಿದ್ದಾರೆ. ನಾರ್ವೆಯ ಪ್ರಧಾನಿ ಜೋನಾಸ್ ಗಹರ್ ಸ್ಟೋರ್, ಯುಎಸ್ ಸೆನೆಟರ್ ಎಲಿಸಾ ಸ್ಲಾಟ್ಕಿನ್ ಮತ್ತು ವಾರ್ಸಾ ಮೇಯರ್ ರಾಫಲ್ ಟ್ರಜಾಸ್ಕೋವ್ಸ್ಕ್ ಕೂಡ ಪ್ಯಾನಲ್‌ ಚರ್ಚೆಯಲ್ಲಿದ್ದರು. ಈ ವೇಳೆ ಭಾರತದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಚುನಾವಣೆಯ ಬಗ್ಗೆ ಸಚಿವ ಜೈಶಂಕರ್ ಮಾತನಾಡಿದ್ದಾರೆ.

ಜಗತ್ತಿನಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆಯೇ?; ತೋರು ಬೆರಳು ತೋರಿಸಿ ಖಡಕ್ ಉತ್ತರ ಕೊಟ್ಟ ಸಚಿವ ಜೈಶಂಕರ್
Jaishankar
Follow us
ಸುಷ್ಮಾ ಚಕ್ರೆ
|

Updated on: Feb 15, 2025 | 4:06 PM

ಮ್ಯೂನಿಕ್: ಮ್ಯೂನಿಕ್ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ವಿಶ್ವಾದ್ಯಂತ ಪ್ರಜಾಪ್ರಭುತ್ವ ತೊಂದರೆಯಲ್ಲಿದೆಯೇ? ಎಂಬ ಪ್ರಶ್ನೆಗೆ ತಮ್ಮ ತೋರುಬೆರಳನ್ನು ತೋರಿಸಿದ್ದಾರೆ. ಮತದಾನದ ನೀಲಿ ಶಾಹಿ ಇರುವ ತಮ್ಮ ಬೆರಳನ್ನು ತೋರಿಸಿದ ಜೈಶಂಕರ್ ಪಾಶ್ಚಿಮಾತ್ಯ ದೇಶಗಳನ್ನು ಟೀಕಿಸಿದ್ದಾರೆ. ಪಶ್ಚಿಮದ ದೇಶಗಳು ಪ್ರಜಾಪ್ರಭುತ್ವವನ್ನು ಪಾಶ್ಚಿಮಾತ್ಯ ಲಕ್ಷಣವಾಗಿ ಪರಿಗಣಿಸಿದೆ. ಜಗತ್ತಿನಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಪಾಶ್ಚಿಮಾತ್ಯ ಲಕ್ಷಣಗಳನ್ನು ಮಾತ್ರ ಹೊಂದಿದೆ, ಈ ಪ್ರಜಾಪ್ರಭುತ್ವ ವ್ಯವಸ್ಥೆ ಪಶ್ಚಿಮದ ಕೊಡುಗೆ ಎಂಬ ಭಾವನೆ ಮತ್ತು ಧೋರಣೆ ಸಂಪೂರ್ಣವಾಗಿ ತಪ್ಪು” ಎಂದು ಸಚಿವ ಜೈಶಂಕರ್ ಹೇಳಿದ್ದಾರೆ.

ಜರ್ಮನಿಯ ಮ್ಯೂನಿಕ್ ನಗರದಲ್ಲಿ ನಡೆದ ‘ಲಿವ್ ಟು ವೋಟ್ ಅನದರ್ ಡೇ: ಫೋರ್ಟಿಫೈಯಿಂಗ್ ಡೆಮಾಕ್ರಟಿಕ್ ರೆಸಿಲಿಯನ್ಸ್’ ಕುರಿತ ಪ್ಯಾನಲ್ ಚರ್ಚೆಯಲ್ಲಿ ಹಲವು ದೇಶಗಳ ಪ್ರತಿನಿಧಿಗಳ ಜೊತೆ ಚರ್ಚೆಯಲ್ಲಿ ಭಾಗವಹಿಸಿದ ಕೇಂದ್ರ ಸಚಿವ ಜೈಶಂಕರ್, ಜಾಗತಿಕವಾಗಿ ಪ್ರಜಾಪ್ರಭುತ್ವ ತೊಂದರೆಯಲ್ಲಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ನಾವು ಚೆನ್ನಾಗಿ ಮತ ಚಲಾಯಿಸುತ್ತಿದ್ದೇವೆ, ನಾವು ಪ್ರಜಾಪ್ರಭುತ್ವದ ಬಗ್ಗೆ ಆಶಾವಾದಿಗಳಾಗಿದ್ದೇವೆ ಮತ್ತು ನಮಗೆ, ಪ್ರಜಾಪ್ರಭುತ್ವವು ನಿಜವಾಗಿಯೂ ಫಲ ನೀಡಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕದಿಂದ ಭಾರತೀಯರ ಗಡಿಪಾರು: ಪ್ರಧಾನಿ ಮೋದಿಯನ್ನು ಭೇಟಿಯಾದ ಜೈಶಂಕರ್

ಈ ವೇಳೆ ಪಶ್ಚಿಮದ ದೇಶಗಳ ಪ್ರಜಾಪ್ರಭುತ್ವದ ‘ಡಬಲ್ ಸ್ಟ್ಯಾಂಡರ್ಡ್ಸ್’ ಅನ್ನು ಸಚಿವ ಜೈಶಂಕರ್ ಟೀಕಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಭಾರತವಂತೂ ಬಹಳ ಆಶಾವಾದಿಯಾಗಿದೆ. ಆದರೆ, ಇಲ್ಲಿರುವವರು ಯಾಕೋ ನಿರಾಶಾವಾದಿಗಳಾಗಿರುವಂತೆ ನನಗೆ ಅನಿಸುತ್ತಿದೆ. ಅದಕ್ಕಾಗಿಯೇ ನಾನು ನನ್ನ ತೋರುಬೆರಳನ್ನು ತೋರಿಸಿಯೇ ಮಾತು ಆರಂಭಿಸುತ್ತೇನೆ. ಯಾರೂ ತಪ್ಪು ತಿಳಿಯಬೇಡಿ. ನನ್ನ ಈ ಬೆರಳಿನಲ್ಲಿ ಕಾಣುತ್ತಿರುವ ನೀಲಿ ಗುರುತು ಇತ್ತೀಚಿನ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಾನು ಮತ ಚಲಾಯಿಸಿದ್ದರ ಸಂಕೇತ. ಭಾರತದಲ್ಲಿ ಪ್ರಜಾಪ್ರಭುತ್ವ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಇದು ಉದಾಹರಣೆ ಎಂದು ಸಚಿವ ಜೈಶಂಕರ್ ಹೇಳಿದ್ದಾರೆ.

ಮ್ಯೂನಿಕ್ ಭದ್ರತಾ ಸಮ್ಮೇಳನದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಶ್ಚಿಮದ ಪ್ರಜಾಪ್ರಭುತ್ವದ ವಿಧಾನದ ವಿರುದ್ಧ ದೃಢವಾದ ನಿಲುವನ್ನು ತೆಗೆದುಕೊಂಡಿದ್ದಾರೆ. ಜಾಗತಿಕವಾಗಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ನಿಭಾಯಿಸುವಲ್ಲಿ ಪಾಶ್ಚಿಮಾತ್ಯ ದೇಶಗಳ “ಡಬಲ್ ಸ್ಟ್ಯಾಂಡರ್ಡ್ಸ್” ವಿರುದ್ಧ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: Video: ಗಡಿಪಾರು ಹೊಸದಲ್ಲ, ಅಕ್ರಮ ವಲಸೆಯನ್ನು ತಡೆಯುವ ಅಗತ್ಯವಿದೆ: ಎಸ್ ಜೈಶಂಕರ್

ಭಾರತವು ಹಲವಾರು ಸವಾಲುಗಳ ನಡುವೆಯೂ ಪ್ರಜಾಪ್ರಭುತ್ವವನ್ನು ನಿರಂತರವಾಗಿ ಎತ್ತಿಹಿಡಿದಿದೆ. ಇದು ಇತರ ರಾಷ್ಟ್ರಗಳಿಗೆ ಒಂದು ಪ್ರಮುಖ ಮಾದರಿಯಾಗಿದೆ. ಪ್ರಜಾಪ್ರಭುತ್ವವು ಸ್ಪಷ್ಟ ಪ್ರಯೋಜನಗಳನ್ನು ನೀಡುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, “ಪ್ರಜಾಪ್ರಭುತ್ವವು ಆಹಾರವನ್ನು ಮೇಜಿನ ಮೇಲೆ ಇಡುವುದಿಲ್ಲ” ಎಂಬ ಯುಎಸ್ ಸೆನೆಟರ್ ಸ್ಲಾಟ್ಕಿನ್ ಅವರ ಹೇಳಿಕೆಯನ್ನು ವಿರೋಧಿಸಿದರು. ಭಾರತದ ಪ್ರಜಾಪ್ರಭುತ್ವ ಆಡಳಿತವು 800 ಮಿಲಿಯನ್ ಜನರಿಗೆ ಪೌಷ್ಠಿಕಾಂಶ ಬೆಂಬಲವನ್ನು ಒದಗಿಸುತ್ತದೆ ಎಂದ ಅವರು, ಪ್ರಜಾಪ್ರಭುತ್ವವು ಜನರ ಯೋಗಕ್ಷೇಮದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ