AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?

ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?

ಸುರೇಶ ನಾಯಕ
| Edited By: |

Updated on: Jan 02, 2026 | 5:01 PM

Share

ಬೀದರ್ ತಾಲ್ಲೂಕಿನ ರಂಜೋಳಖೇಣಿ ಸರ್ಕಾರಿ ಶಾಲೆಯ ಮಕ್ಕಳಿಗೆ ಹೊಸ ವರ್ಷದ ಅಂಗವಾಗಿ ಶಿಕ್ಷಕರು ವಿಶೇಷ ಬಜ್ಜಿ ಕಟಕ್ ರೊಟ್ಟಿ ಊಟದ ವ್ಯವಸ್ಥೆ ಮಾಡಿದರು. ಬೀದರ್‌ನ ಈ ಸಾಂಪ್ರದಾಯಿಕ ಊಟವನ್ನು ಸವಿದು ಮಕ್ಕಳು ಅತೀವ ಸಂತಸಗೊಂಡರು. ವಿವಿಧ ಬಗೆಯ ತರಕಾರಿಗಳಿಂದ ತಯಾರಿಸಿದ ಬಜ್ಜಿ ಮತ್ತು ಕಟಕ್ ರೊಟ್ಟಿ ಮಕ್ಕಳ ಪಾಲಿಗೆ ಹೊಸ ವರ್ಷದ ಸಿಹಿ ಉಡುಗೊರೆಯಾಯಿತು.

ಬೀದರ್​, ಜನವರಿ 02: ಹೊಸ ವರ್ಷ ಹಿನ್ನೆಲೆ ಬೀದರ್ ತಾಲ್ಲೂಕಿನ ರಂಜೋಳಖೇಣಿ ಗ್ರಾಮದ ಸರ್ಕಾರ ಶಾಲಾ ಮಕ್ಕಳು ವಿಶೇಷ ಬಜ್ಜಿ ಮತ್ತು ಕಟಕ್ ರೊಟ್ಟಿ ಊಟ ಸವಿದರು. ಮುಖ್ಯೋಪಾಧ್ಯಾಯ ಮಂಜುನಾಥ್​,​ ಶಿಕ್ಷಕರಾದ ಚಂದ್ರಕಾಂತ್ ಹಿಂದೊಡ್ಡಿ, ವಿಷ್ಣು ಕಾಂತ್ ಠಾಕೂರ್​​ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಕಾರಹುಣ್ಣಿಮೆ‌ಯ ದಿನ ರೈತರು ಹೊಲಕ್ಕೆ ಹೋಗಿ ಭೂತಾಯಿಗೆ ಪೂಜೆ ಮಾಡಿ ಬಜ್ಜಿ ಊಟ ಸವಿಯುವುದು ಇಲ್ಲಿನ‌ ವಾಡಿಕೆ. ಹೀಗಾಗಿ ಈ ಹೊಸ ವರ್ಷದಂದು ಹೊಸತನದಿಂದ ಕೂಡಿರಲೆಂದು ಬಜ್ಜಿ ಊಟದ ವ್ಯವಸ್ಥೆ ಮಾಡಲಾಗಿದೆ. ಅವರೆಕಾಯಿ, ಕಡಲೆ, ತೊಗರೆ, ಶೇಂಗಾ ಹೀಗೆ ವಿವಿಧ ಬಗೆಯ ತರಕಾರಿ ಸೇರಿಸಿ ಬಜ್ಜಿ ತಯಾರಿಸಲಾಗಿದ್ದು, ಮಕ್ಕಳು ಚಪ್ಪರಿಸಿ ತಿಂದರು. ಶಿಕ್ಷಕರ ಈ ಕಾರ್ಯಕ್ಕೆ‌ ಮಕ್ಕಳು ‌ಫುಲ್ ಖುಷಿ ಪಟ್ಟರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.