Udupi: ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು; ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಉಡುಪಿ ನಗರದ ಜಾಮಿಯ ಮಸೀದಿ ಬಳಿ ನಡೆದ ಕಾರು ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಿವರ್ಸ್ ತೆಗೆಯುವ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನಗಳು ಸೇರಿ ಪಾದಚಾರಿಗೆ ಡಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡ ದ್ವಿಚಕ್ರ ವಾಹನ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಚಾಲಕ ಮತ್ತು ಪಾದಚಾರಿ ಸಣ್ಣಪುಟ್ಟ ಗಾಗಳೊಂದಿಗೆ ಪಾರಾಗಿದ್ದಾರೆ.
ಉಡುಪಿ, ಜನವರಿ 02: ರಿವರ್ಸ್ ತೆಗೆಯುವ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನಗಳು ಸೇರಿ ಪಾದಚಾರಿಗೆ ಡಿಕ್ಕಿಯಾಗಿರುವ ಘಟನೆ ಉಡುಪಿ ನಗರದ ಜಾಮಿಯ ಮಸೀದಿ ಬಳಿ ನಡೆದಿದೆ. ಕಟ್ಟಡವೊಂದರ ಮುಂಭಾಗ ಕಾರನ್ನು ಪಾರ್ಕ್ ಮಾಡಲಾಗಿತ್ತು. ಕಾರು ಮಾಲಿಕ ಹೊರಡುವ ಸಿದ್ಧತೆಯಲ್ಲಿ ಕಾರಿನೊಳಗೆ ಬಂದು ಕುಳಿತಾಗ ಆಟೋಮೆಟಿಕ್ ಕಾರು ನಿಯಂತ್ರಣ ತಪ್ಪಿ ಏಕಾಏಕಿ ಹಿಮ್ಮುಖವಾಗಿ ಚಲಿಸಿದೆ. ಈ ವೇಳೆ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್, ಅಟೋ ಸೇರಿ ಪಾದಚಾರಿಗೂ ಗುದ್ದಿದ್ದು, ಗಂಭೀರ ಗಾಯಗೊಂಡ ದ್ವಿಚಕ್ರ ವಾಹನ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಚಾಲಕ ಮತ್ತು ಪಾದಚಾರಿ ಸಣ್ಣಪುಟ್ಟ ಗಾಗಳೊಂದಿಗೆ ಪಾರಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
