ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಶ್ರೀನಗರ-ಬಾರಾಮುಲ್ಲಾ-ಉರಿ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಭಾರಿ ಭೂಕುಸಿತ ಸಂಭವಿಸಿದೆ. ಈ ಭಯಾನಕ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೈವೇಗೆ ದೊಡ್ಡ ಪರ್ವತದ ಅರ್ಧ ಭಾಗ ಉರುಳಿಬಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ವಾಹನ ಸವಾರರು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದರು. ಸದ್ಯಕ್ಕೆ ಯಾವುದೇ ಸಾವುಗಳು ಸಂಭವಿಸಿಲ್ಲ. ಈ ಘಟನೆಯಿಂದ ಜನಪ್ರಿಯ ಪ್ರವಾಸಿ ಕೇಂದ್ರಗಳಾದ ಗುಲ್ಮಾರ್ಗ್, ಪಹಲ್ಗಾಮ್ ಮತ್ತು ಸೋನಾಮಾರ್ಗ್ ಸೇರಿದಂತೆ ಎತ್ತರದ ಪ್ರದೇಶಗಳತ್ತ ಸಾಗುತ್ತಿದ್ದ ಪ್ರವಾಸಿಗರು ಮುಂದೆ ಹೋಗಲು ಸಾಧ್ಯವಾಗಲಿಲ್ಲ.
ಶ್ರೀನಗರ, ಜನವರಿ 2: ಕಾಶ್ಮೀರದ ಶ್ರೀನಗರ-ಬಾರಾಮುಲ್ಲಾ-ಉರಿ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಭಾರಿ ಭೂಕುಸಿತ (Landslide) ಸಂಭವಿಸಿದೆ. ಈ ಭಯಾನಕ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೈವೇಗೆ ದೊಡ್ಡ ಪರ್ವತದ ಅರ್ಧ ಭಾಗ ಉರುಳಿಬಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ವಾಹನ ಸವಾರರು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದರು. ಸದ್ಯಕ್ಕೆ ಯಾವುದೇ ಸಾವುಗಳು ಸಂಭವಿಸಿಲ್ಲ. ಈ ಘಟನೆಯಿಂದ ಜನಪ್ರಿಯ ಪ್ರವಾಸಿ ಕೇಂದ್ರಗಳಾದ ಗುಲ್ಮಾರ್ಗ್, ಪಹಲ್ಗಾಮ್ ಮತ್ತು ಸೋನಾಮಾರ್ಗ್ ಸೇರಿದಂತೆ ಎತ್ತರದ ಪ್ರದೇಶಗಳತ್ತ ಸಾಗುತ್ತಿದ್ದ ಪ್ರವಾಸಿಗರು ಮುಂದೆ ಹೋಗಲು ಸಾಧ್ಯವಾಗಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

