AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಿಂದ ಭಾರತೀಯರ ಗಡಿಪಾರು: ಪ್ರಧಾನಿ ಮೋದಿಯನ್ನು ಭೇಟಿಯಾದ ಜೈಶಂಕರ್

ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ಗಡಿಪಾರು ಮಾಡಿರುವ ವಿಚಾರದ ಕುರಿತಾಗಿ ವಿದೇಶಾಂಗ ಸಚಿವ ಎಸ್​ ಜೈಶಂಕರ್ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಕೇವಲ ಗಡಿಪಾರು ಮಾಡಿದ್ದಷ್ಟೇ ಅಲ್ಲದೆ ಅವರ ಕಾಲುಗಳಿಗೆ ಸರಪಳಿ ಹಾಗೂ ಕೈಗಳಿಗೆ ಕೋಳ ಹಾಕಲಾಗಿತ್ತು. ಇದು ಆತಂಕವನ್ನು ಹೆಚ್ಚಿದೆ. 104 ಭಾರತೀಯರನ್ನು ಅಮೆರಿಕ ಸೇನಾ ವಿಮಾನದಲ್ಲಿ ಭಾರತಕ್ಕೆ ಕಳುಹಿಸಲಾಗಿದೆ

ಅಮೆರಿಕದಿಂದ ಭಾರತೀಯರ ಗಡಿಪಾರು: ಪ್ರಧಾನಿ ಮೋದಿಯನ್ನು ಭೇಟಿಯಾದ ಜೈಶಂಕರ್
ನರೇಂದ್ರ ಮೋದಿImage Credit source: DNA
ನಯನಾ ರಾಜೀವ್
|

Updated on: Feb 06, 2025 | 12:35 PM

Share

ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ಗಡಿಪಾರು ಮಾಡಿರುವ ವಿಚಾರದ ಕುರಿತಾಗಿ ವಿದೇಶಾಂಗ ಸಚಿವ ಎಸ್​ ಜೈಶಂಕರ್ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಕೇವಲ ಗಡಿಪಾರು ಮಾಡಿದ್ದಷ್ಟೇ ಅಲ್ಲದೆ ಅವರ ಕಾಲುಗಳಿಗೆ ಸರಪಳಿ ಹಾಗೂ ಕೈಗಳಿಗೆ ಕೋಳ ಹಾಕಲಾಗಿತ್ತು. ಇದು ಆತಂಕವನ್ನು ಹೆಚ್ಚಿದೆ. 104 ಭಾರತೀಯರನ್ನು ಅಮೆರಿಕ ಸೇನಾ ವಿಮಾನದಲ್ಲಿ ಭಾರತಕ್ಕೆ ಕಳುಹಿಸಲಾಗಿದೆ.

ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಹಕ್ಕನ್ನು ಅಮೆರಿಕ ಹೊಂದಿದೆ, ಹಾಗೆಯೇ ಅವರ ಗುರುತನ್ನು ಪರಿಶೀಲಿಸಿ ಅವರನ್ನು ಸ್ವೀಕರಿಸಲು ಭಾರತವೂ ಕೂಡ ಸಿದ್ಧವಿದೆ. ಆದರೆ ಅವರನ್ನು ಕಳುಹಿಸಿರುವ ವಿಧಾನಕ್ಕೆ ಟೀಕೆಗಳು ವ್ಯಕ್ತವಾಗಿವೆ. ಅಮೆರಿಕದಿಂದ ಗಡೀಪಾರು ಮಾಡಲಾದ 104 ಅಕ್ರಮ ಭಾರತೀಯ ವಲಸಿಗರು ಬುಧವಾರ ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಮಿಲಿಟರಿ ಸಿ -17 ಸಾರಿಗೆ ವಿಮಾನದಲ್ಲಿ ಬಂದಿಳಿದರು.

ಇವರಲ್ಲಿ 30 ಮಂದಿ ಪಂಜಾಬ್‌ನವರು, ತಲಾ 33 ಮಂದಿ ಹರ್ಯಾಣ ಮತ್ತು ಗುಜರಾತ್‌ನವರು, ತಲಾ ಮೂವರು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದವರು ಮತ್ತು ಇಬ್ಬರು ಚಂಡೀಗಢದವರು ಎಂದು ಮೂಲಗಳು ತಿಳಿಸಿವೆ. ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡ ಬೃಹತ್ ಕ್ರಮಗಳ ಅಡಿಯಲ್ಲಿ ಭಾರತಕ್ಕೆ ಗಡೀಪಾರು ಮಾಡಲಾಗುತ್ತಿರುವ ಮೊದಲ ಪ್ರಕರಣ ಇದಾಗಿದೆ.

ಮತ್ತಷ್ಟು ಓದಿ: ಕಾಲುಗಳಿಗೆ ಸರಪಳಿ, ಕೈಗಳಿಗೆ ಕೋಳ, ಅಕ್ರಮ ವಲಸಿಗರನ್ನು ಭಾರತಕ್ಕೆ ಅಮೆರಿಕ ಗಡಿಪಾರು ಮಾಡಿದ್ದು ಹೀಗೆ

ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಿಂದ ಹೊರಟ ಅಮೆರಿಕದ ಮಿಲಿಟರಿ ವಿಮಾನವು ಮಧ್ಯಾಹ್ನ 1.55 ರ ಸುಮಾರಿಗೆ ಅಮೃತಸರದ ಶ್ರೀ ಗುರು ರಾಮದಾಸ್ ಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಆಡಳಿತವು ಗಡೀಪಾರು ಮಾಡಲ್ಪಟ್ಟವರನ್ನು ಆರಂಭಿಕ ವಿಚಾರಣೆ ನಡೆಸಿ, ಅವರನ್ನು ಅವರವರ ಮನೆಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಿತು.

ಗಡಿಪಾರು ಮಾಡಿದವರ ಯಾವುದೇ ಕುಟುಂಬ ಸದಸ್ಯರು ಅವರನ್ನು ಸ್ವೀಕರಿಸಲು ವಿಮಾನ ನಿಲ್ದಾಣಕ್ಕೆ ತಲುಪಲಿಲ್ಲ ಎಂದು ಹೇಳಲಾಗಿದೆ. ಗಡೀಪಾರು ಮಾಡಿದವರನ್ನು ಮನೆಗೆ ಕರೆತರಲು ಸಂಬಂಧಪಟ್ಟ ರಾಜ್ಯ ಸರ್ಕಾರಗಳು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿವೆ ಮತ್ತು ಅವರ ಭದ್ರತೆಗಾಗಿ ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ಸಹ ಬಸ್‌ನಲ್ಲಿ ನಿಯೋಜಿಸಿವೆ ಎಂದು ಅವರು ಹೇಳಿದರು.

ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ ಬಂದಿರುವ ಭಾರತೀಯ ವಲಸಿಗರನ್ನು ವಿಮಾನದ ಮೂಲಕ ಅವರ ಮನೆಗಳಿಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಜನವರಿ 20 ರಂದು ಅಧ್ಯಕ್ಷರು ಶ್ವೇತಭವನದ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ, ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು