AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಿಜರ್ಲೆಂಡ್​ ಬಾರ್​​ನಲ್ಲಿ ಬೆಂಕಿ ಅವಘಡ; ಸಾವಿನ ಸಂಖ್ಯೆ 40ಕ್ಕೆ ಏರಿಕೆ

ಸ್ವಿಜರ್ಲೆಂಡ್​​ನ ಕ್ರಾನ್ಸ್-ಮೊಂಟಾನಾ ಬಾರ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 40 ಮಂದಿ ಸಾವನ್ನಪ್ಪಿದ್ದಾರೆ. ಹೊಸ ವರ್ಷದ ಮುನ್ನಾದಿನದಂದು ಸ್ವಿಟ್ಜರ್ಲೆಂಡ್ ಬಾರ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವಿನ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಯಾವ ಕಾರಣದಿಂದ ಸ್ಫೋಟ ಸಂಭವಿಸಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಹೊಸ ವರ್ಷದ ಆಚರಣೆಯ ಸಮಯದಲ್ಲಿ ಆಲ್ಪ್ಸ್‌ನ ಜನದಟ್ಟಣೆಯ ಬಾರ್‌ನಲ್ಲಿ ಸಂಭವಿಸಿದ ಮಾರಕ ಸ್ಫೋಟ ಭಯೋತ್ಪಾದಕ ದಾಳಿಯಲ್ಲ ಎಂದು ಸ್ವಿಸ್ ಪೊಲೀಸರು ಖಚಿತಪಡಿಸಿದ್ದಾರೆ.

ಸ್ವಿಜರ್ಲೆಂಡ್​ ಬಾರ್​​ನಲ್ಲಿ ಬೆಂಕಿ ಅವಘಡ; ಸಾವಿನ ಸಂಖ್ಯೆ 40ಕ್ಕೆ ಏರಿಕೆ
Switzerland Blast
ಸುಷ್ಮಾ ಚಕ್ರೆ
|

Updated on: Jan 01, 2026 | 10:05 PM

Share

ಬರ್ನ್ (ಸ್ವಿಟ್ಜರ್ಲೆಂಡ್), ಜನವರಿ 1: ಸ್ವಿಜರ್ಲೆಂಡ್‌ನ ಐಷಾರಾಮಿ ಬಾರ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ 40 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಜನರು ಗಾಯಗೊಂಡಿದ್ದಾರೆ ಎಂದು ಸ್ವಿಸ್ ಪೊಲೀಸರು ಖಚಿತಪಡಿಸಿದ್ದಾರೆ. ಇದಲ್ಲದೆ, ಸ್ಕೀ ರೆಸಾರ್ಟ್ ಪಟ್ಟಣವಾದ ಕ್ರಾನ್ಸ್-ಮೊಂಟಾನಾದಲ್ಲಿರುವ ಲೆ ಕಾನ್ಸ್ಟೆಲೇಷನ್ ಬಾರ್ ಮತ್ತು ಲೌಂಜ್‌ನ ನೆಲಮಾಳಿಗೆಯಲ್ಲಿ ಸಂಭವಿಸಿದ ಸ್ಫೋಟವನ್ನು ಬೆಂಕಿ ಅವಘಡ ಎಂದು ಊಹಿಸಲಾಗಿದೆ, ಇದು ಭಯೋತ್ಪಾದಕ ದಾಳಿಯಲ್ಲ ಎಂದು ಸ್ವಿಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ಸಮಯದಲ್ಲಿ 150ಕ್ಕೂ ಹೆಚ್ಚು ಜನರು ಬಾರ್‌ನಲ್ಲಿದ್ದರು.

ಐಷಾರಾಮಿ ಸ್ಕೀ ರೆಸಾರ್ಟ್ ಪಟ್ಟಣವಾದ ಕ್ರಾನ್ಸ್-ಮೊಂಟಾನಾದಲ್ಲಿರುವ ಲೆ ಕಾನ್ಸ್ಟೆಲೇಷನ್ ಬಾರ್‌ನಲ್ಲಿ ಮಧ್ಯರಾತ್ರಿಯ ನಂತರ ಬೆಂಕಿ ಕಾಣಿಸಿಕೊಂಡಿತ್ತು. ಅಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಅನೇಕ ಜನರು ಸೇರಿದ್ದರು. ಬೆಂಕಿಯ ನಿಖರವಾದ ಕಾರಣವನ್ನು ನಿರ್ಧರಿಸಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆದರೆ ಇದು ಭಯೋತ್ಪಾದನಾ ಕೃತ್ಯವಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Video: ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ, ಹಲವು ಮಂದಿ ಸಾವು

ಕ್ರಾನ್ಸ್-ಮೊಂಟಾನಾ ರೆಸಾರ್ಟ್ ಅಂತಾರಾಷ್ಟ್ರೀಯ ಸ್ಕೀ ಮತ್ತು ಗಾಲ್ಫ್ ಸ್ಥಳವೆಂದು ಪ್ರಸಿದ್ಧವಾಗಿದೆ. ರಾತ್ರೋರಾತ್ರಿ ಅದರ ಜನದಟ್ಟಣೆಯ ಲೆ ಕಾನ್ಸ್ಟೆಲೇಷನ್ ಬಾರ್ ಮೋಜು ಮಸ್ತಿಯಿಂದ ಸ್ವಿಜರ್ಲೆಂಡ್‌ನ ಅತ್ಯಂತ ಕೆಟ್ಟ ದುರಂತಗಳಲ್ಲಿ ಒಂದಾಗಿ ಮಾರ್ಪಟ್ಟಿದೆ. ಮೃತರಾದ 40 ಜನರನ್ನು ಗುರುತಿಸಲು ಮತ್ತು ಅವರ ಕುಟುಂಬಗಳಿಗೆ ತಿಳಿಸಲು ಕೆಲಸ ನಡೆಯುತ್ತಿದೆ.

ಈ ಘಟನೆ ನಡೆಯುತ್ತಿದ್ದಂತೆ ವಿವಿಧ ದೇಶಗಳ ಕೆಲವರು ಸೇರಿದಂತೆ ಮೃತರಿಗೆ ಸಹಾಯ ಮಾಡಲು ಹೆಲಿಕಾಪ್ಟರ್‌ಗಳು ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಬಾರ್‌ಮೇಡ್ ಬಾಟಲಿಯಲ್ಲಿ ಮೇಣದಬತ್ತಿಯನ್ನು ಹೊತ್ತಿಸಿ ಇಟ್ಟಿದ್ದರು, ಅದರಿಂದ ಮರದ ಸೀಲಿಂಗ್‌ಗೆ ಬೆಂಕಿ ಹೊತ್ತಿತು. ಬೆಂಕಿಯ ಜ್ವಾಲೆಗಳು ಬೇಗನೆ ಹರಡಿ ಸೀಲಿಂಗ್ ಅನ್ನು ಆವರಿಸಿದವು ಎನ್ನಲಾಗಿದೆ. ಆದರೆ, ಈ ಬಗ್ಗೆ ತನಿಖೆ ನಡೆಯುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ