ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಶಾಸಕರಾದ ಜನಾರ್ದನ ರೆಡ್ಡಿ ಹಾಗೂ ಭರತ್ ರೆಡ್ಡಿ ಬೆಂಬಲಿಗರ ನಡುವೆ ಬಳ್ಳಾರಿಯಲ್ಲಿ ಭೀಕರ ಸಂಘರ್ಷವೇ ನಡೆದುಹೋಗಿದೆ. ಈ ಸಂಘರ್ಷದ ನಡುವೆ ಅಚಾನಕ್ಕಾಗಿ ಸಿಡಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ. ರೆಡ್ಡಿ ಮನೆ ಎದುರು ಕಟ್ಟಿದ್ದ ಬ್ಯಾನರ್ ಅನ್ನ ಜಮಾಯಿಸಿದ್ದವರು ಹರಿದುಬಿಸಾಡಿದ್ರು. ಈ ವೇಳೆ ಜನಾರ್ದನ ರೆಡ್ಡಿ ಹಾಗೂ ಭರತ್ ರೆಡ್ಡಿ ಬೆಂಬಲಿಗರ ನಡುವೆ ಗಲಾಟೆ ಶುರುವಾಯ್ತು. ಗಲಾಟೆ ಜಾಗಕ್ಕೆ ಮಾಜಿ ಸಚಿವ ಶ್ರೀರಾಮುಲು ಕೂಡ ಭೇಟಿ ನೀಡಿದ್ದಾರೆ. ಆಗ ತಳ್ಳಾಟ-ನೂಕಾಟ ಆಗಿದೆ. ಪರಸ್ಪರ ಕಲ್ಲು ತೂರಾಡಿಕೊಂಡಿದ್ದು, ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ. ಆಗ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್ಮ್ಯಾನ್ಗಳು, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಬಳ್ಳಾರಿ, (ಜನವರಿ 02): ಶಾಸಕರಾದ ಜನಾರ್ದನ ರೆಡ್ಡಿ ಹಾಗೂ ಭರತ್ ರೆಡ್ಡಿ ಬೆಂಬಲಿಗರ ನಡುವೆ ಬಳ್ಳಾರಿಯಲ್ಲಿ ಭೀಕರ ಸಂಘರ್ಷವೇ ನಡೆದುಹೋಗಿದೆ. ಈ ಸಂಘರ್ಷದ ನಡುವೆ ಅಚಾನಕ್ಕಾಗಿ ಸಿಡಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ. ರೆಡ್ಡಿ ಮನೆ ಎದುರು ಕಟ್ಟಿದ್ದ ಬ್ಯಾನರ್ ಅನ್ನ ಜಮಾಯಿಸಿದ್ದವರು ಹರಿದುಬಿಸಾಡಿದ್ರು. ಈ ವೇಳೆ ಜನಾರ್ದನ ರೆಡ್ಡಿ ಹಾಗೂ ಭರತ್ ರೆಡ್ಡಿ ಬೆಂಬಲಿಗರ ನಡುವೆ ಗಲಾಟೆ ಶುರುವಾಯ್ತು. ಗಲಾಟೆ ಜಾಗಕ್ಕೆ ಮಾಜಿ ಸಚಿವ ಶ್ರೀರಾಮುಲು ಕೂಡ ಭೇಟಿ ನೀಡಿದ್ದಾರೆ. ಆಗ ತಳ್ಳಾಟ-ನೂಕಾಟ ಆಗಿದೆ. ಪರಸ್ಪರ ಕಲ್ಲು ತೂರಾಡಿಕೊಂಡಿದ್ದು, ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ. ಆಗ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್ಮ್ಯಾನ್ಗಳು, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಯಾವಾಗ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ವೋ ಆಗ ಪೊಲೀಸರೂ ಟಿಯರ್ ಗನ್ ಫೈರ್ ಮಾಡಿದ್ದಾರೆ. ಆದ್ರೆ ಅದೊಂದು ಗುಂಡು ಕಾಂಗ್ರೆಸ್ ಕಾರ್ಯಕರ್ತನ ಜೀವ ತೆಗೆದಿದೆ. ಹಾಗಿದ್ರೆ ಗಲಾಟೆ ಶುರುವಾಗಿದ್ದು ಹೇಗೆ? ಈ ಕುರಿತ ರಿಪೋರ್ಟ್ ಇಲ್ಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

