ವೆಲ್ಲಿಂಗ್ಟನ್ ಅಕ್ಟೋಬರ್ 13: ಪ್ರತಿ 100 ನ್ಯೂಜಿಲೆಂಡ್ (New zealand) ನಿವಾಸಿಗಳಲ್ಲಿ ಸುಮಾರು ಐದು ಮಂದಿ ಭಾರತೀಯರಾಗಿದ್ದಾರೆ. ದಶಕಗಳಿಂದ ಭಾರತೀಯರಲ್ಲಿ ವಲಸೆಯ ನೆಚ್ಚಿನ ಆಸ್ಟ್ರೇಲಿಯಾ ಪಕ್ಕದಲ್ಲಿಯೇ ಇರುವ ನ್ಯೂಜಿಲೆಂಡ್ನಲ್ಲಿ ಭಾರತೀಯ ವಲಸಿಗರ ಸಂಖ್ಯೆ ವೇಗವಾಗಿ ಬೆಳೆಯುತ್ತಿದ. ಅದೇ ವೇಳೆ ದೇಶದ ಶಾಸಕಾಂಗದಲ್ಲಿ ನ್ಯೂಜಿಲೆಂಡ್ ಅನ್ನು ಪ್ರತಿನಿಧಿಸುವ ಭಾರತೀಯ ಮೂಲದ ರಾಜಕಾರಣಿಗಳಲ್ಲಿ ಏರಿಕೆ ಕಂಡುಬಂದಿದೆ. ಅಕ್ಟೋಬರ್ 14 ರಂದು ನ್ಯೂಜಿಲೆಂಡ್ನಲ್ಲಿ ಚುನಾವಣೆ ನಡೆಯಲಿದ್ದು, ಭಾರತೀಯ ಮೂಲದ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನ್ಯಾಷನಲ್ ಅಥವಾ ನ್ಯೂಜಿಲೆಂಡ್ ನ್ಯಾಷನಲ್ ಪಾರ್ಟಿ (New Zealand National Party), ಚುನಾವಣೆಯಲ್ಲಿ ಐದು ಭಾರತೀಯ ಮೂಲದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ತನ್ನನ್ನು ಲಿಬರಲ್ ಪಾರ್ಟಿ ಆಫ್ ನ್ಯೂಜಿಲೆಂಡ್ ಎಂದು ವ್ಯಾಖ್ಯಾನಿಸಿಕೊಳ್ಳುವ ಎಸಿಟಿ ಪಕ್ಷವು ಭಾರತೀಯ ಮೂಲದ ನಾಲ್ವರು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ.
ಲೇಬರ್ ಮತ್ತು ಗ್ರೀನ್ಸ್ ತಲಾ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿವೆ ಎಂದು ಆರ್ ಎನ್ ಜೆಡ್ ವರದಿ ಮಾಡಿದೆ. ನ್ಯಾಷನಲ್‌ನಲ್ಲಿ, ಐದು ಭಾರತೀಯ ಮೂಲದ ಅಭ್ಯರ್ಥಿಗಳು- ಮಹೇಶ್ ಮುರಳೀಧರ್, ನವತೇಜ್ ಸಿಂಗ್ ರಾಧಾವಾ, ಕರುಣಾ ಮುತ್ತು ಮತ್ತು ಶಿವ ಕಿಲಾರಿ. ಈ ಎಲ್ಲಾ ಐದು ಅಭ್ಯರ್ಥಿಗಳ ಉದ್ದೇಶವು ಆರ್ಥಿಕತೆಯನ್ನು ಪುನರ್ನಿರ್ಮಾಣ ಮಾಡುವುದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿಸುವುದು ಮತ್ತು ಆರೋಗ್ಯ ಮತ್ತು ಶಿಕ್ಷಣದ ಫಲಿತಾಂಶಗಳನ್ನು ಸುಧಾರಿಸುವುದು ಆಗಿದೆ. ನ್ಯಾಷನಲ್ ಪಕ್ಷದಲ್ಲಿ ಕಣಕ್ಕಿಳಿದಿರುವ 30ರ ಹರೆಯದ ಶಿವ ಕಿಲಾರಿ, ನನ್ನ ಮತದಾರರಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಪ್ರಮುಖ ವಿಷಯವಾಗಿದೆ. ಲೇಬರ್ ಪಕ್ಷ ಅಪರಾಧದ ಬಗ್ಗೆ ಮೃದು ಧೋರಣೆ ತಳೆದುಕೊಂಡಿರುವುದನ್ನು ನಾವು ಕಾಣುತ್ತಿದೇವೆ ಎಂದು ಹೇಳಿದ್ದಾರೆ. ಮಹೇಶ್ ಮುರಳೀಧರ್ ಅವರು , ತಾವು ಹೆಚ್ಚುತ್ತಿರುವ ನಿರಾಶ್ರಿತತೆ ಮತ್ತು ಆಕ್ಲೆಂಡ್‌ನ ಟ್ರಾಫಿಕ್ ಅಸಮರ್ಥತೆಗಳ ಬಗ್ಗೆ ಗಮನ ಹರಿಸುವುದಾಗಿ ಹೇಳಿದ್ದಾರೆ. ಅಷ್ಟೇ ಅವ್ವ ನಾನು ಭಾರತದೊಂದಿಗೆ ನ್ಯೂಜಿಲೆಂಡ್‌ನ ಬಾಂಧವ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್‌ನಲ್ಲಿರುವ ಭಾರತೀಯ ವಲಸಿಗರನ್ನು ಅವರ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮುದಾಯ ಸಂಸ್ಥೆಗಳು ಮತ್ತು ವಿಭಿನ್ನ ಸವಾಲುಗಳನ್ನು ಪರಿಹರಿಸುವುದು ಮುಖ್ಯವಾಗಿದೆ ಎಂದು ಅವರು ಆರ್ಎನ್ ಜೆಡ್ ಗೆ ತಿಳಿಸಿದ್ದಾರೆ. ನವತೇಜ್ ಸಿಂಗ್ ರಾಂಧವಾ ಅವರು, ತಾನು ಸರ್ಕಾರದಲ್ಲಿ ವೈವಿಧ್ಯತೆಯನ್ನು ಹೆಚ್ಚಿಸುವತ್ತ ಗಮನ ಹರಿಸುವುದಾಗಿ ಹೇಳಿದ್ದು, ಕರುಣಾ ಮುತ್ತು ಹಣದುಬ್ಬರ ಮತ್ತು ಅಂಕಿತ್ ಬನ್ಸಾಲ್, “ವೈಯಕ್ತಿಕ ಜವಾಬ್ದಾರಿಯನ್ನು ತೆಗೆದುಕೊಳ್ಳುವ, ಕಠಿಣ ಪರಿಶ್ರಮಕ್ಕೆ ಪ್ರತಿಫಲ ನೀಡುವ ಮತ್ತು ಎಲ್ಲಾ ನ್ಯೂಜಿಲೆಂಡ್‌ನವರಿಗೆ ಸಮಾನ ಅವಕಾಶಗಳನ್ನು ಒದಗಿಸುವ ನನ್ನ ಮೌಲ್ಯಗಳೊಂದಿಗೆ ನಿಕಟವಾಗಿ ಹೊಂದಾಣಿಕೆ ಮಾಡುವ ಏಕೈಕ ಪಕ್ಷವಾಗಿದೆ ನ್ಯಾಷನಲ್ ಎಂದು ಹೇಳಿದ್ದಾರೆ.
ಎಸಿಟಯಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಮೂಲದ ಅಭ್ಯರ್ಥಿ ಪರಮ್‌ಜೀತ್ ಪರ್ಮಾರ್, ನಾನು ಎಸಿಟಿಯನ್ನು ಆಯ್ಕೆ ಮಾಡಿದ್ದೇನೆ ಏಕೆಂದರೆ ಇದು ನೀತಿ ನಿರೂಪಣೆಗೆ ಸಾಕ್ಷಿ ಆಧಾರಿತ ವಿಧಾನವನ್ನು ಸ್ಥಿರವಾಗಿ ಅಳವಡಿಸಿಕೊಳ್ಳುವ ಏಕೈಕ ರಾಜಕೀಯ ಪಕ್ಷವಾಗಿದೆ ಎಂದು ಹೇಳಿದ್ದಾರೆ. ಹ್ಯಾಮಿಲ್ಟನ್, ಪೂರ್ವದ ಅಭ್ಯರ್ಥಿ ಹಿಮಾಂಶು ಪರ್ಮಾರ್ ಅವರು ಜೀವನ ವೆಚ್ಚ, ಅಪರಾಧ ಮತ್ತು ಸಹ-ಆಡಳಿತವು ನಿರ್ಣಾಯಕ ಕಾಳಜಿಯಾಗಿದೆ ಎಂದು ಹೇಳಿದ್ದಾರೆ.
ಎಸಿಟಿ ಅಭ್ಯರ್ಥಿ ರಾಹುಲ್ ಚೋಪ್ರಾ “ಈ ಬಾರಿ ನಿಜವಾದ ಬದಲಾವಣೆಯನ್ನು” ಮಾಡಲು ತಾನು ಬಯಸುತ್ತಿದ್ದೇನೆ ಎಂದು ಹೇಳಿದ್ದಾರೆ. ಎರಡೂ ಪ್ರಮುಖ ರಾಜಕೀಯ ಪಕ್ಷಗಳ ನೀತಿಗಳು ಮಹತ್ವಾಕಾಂಕ್ಷೆ ಮತ್ತು ಸಾಧನೆಯ ಬದಲಿಗೆ ಸಾಧಾರಣತೆ ಮತ್ತು ಆತ್ಮತೃಪ್ತಿಯ ಸಂಸ್ಕೃತಿಯನ್ನು ಬೆಳೆಸಿದೆ ಎಂದಿದ್ದಾರೆ. ಇನ್ನೋರ್ವ ಅಭ್ಯರ್ಥಿ ಪೋಥೆನ್ ಜೋಸೆಫ್, ಶಿಕ್ಷಣ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವತ್ತ ಗಮನ ಹರಿಸಿದ್ದಾರೆ.
ನಮ್ಮ ಪ್ರಸ್ತುತ ವ್ಯವಸ್ಥೆಯು ಮೂಲಭೂತ ಅಂತರಾಷ್ಟ್ರೀಯ ಮಾನದಂಡಗಳನ್ನು ಪೂರೈಸಲು ಗಮನಾರ್ಹ ಸುಧಾರಣೆಯ ಅಗತ್ಯವಿದೆ ಮತ್ತು ಹೆಚ್ಚು ಕೈಗೆಟುಕುವಂತಿದೆ ಎಂದು ಲೇಬರ್ ಪಾರ್ಟಿಯ ಇಬ್ಬರು ಭಾರತೀಯ ಮೂಲದ ಅಭ್ಯರ್ಥಿಗಳು ಪ್ರಿಯಾಂಕಾ ರಾಧಾಕೃಷ್ಣನ್ ಮತ್ತು ಖರಗ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಗಾಜಾದಲ್ಲಿ ಹಮಾಸ್ನ ಅಡಗುತಾಣಗಳ ಮೇಲೆ ದಾಳಿ ನಡೆಸಿ ಒತ್ತೆಯಾಳುಗಳನ್ನು ರಕ್ಷಿಸಿದ ಇಸ್ರೇಲ್ ಸೈನಿಕರು
ಮೌಂಗುಕೇಕಿ ಅಭ್ಯರ್ಥಿಯಾಗಿರುವ ರಾಧಾಕೃಷ್ಣನ್, ಸ್ಥಳೀಯ ಶಾಲೆಗಳು, ಸಮುದಾಯ ಸಂಸ್ಥೆಗಳನ್ನು ಬೆಂಬಲಿಸುವುದು ಮತ್ತು “ಸೈಕಲ್‌ವೇಗಳು ಮತ್ತು ವಾಕಿಂಗ್ ಲೇನ್‌ಗಳ ನೆಟ್‌ವರ್ಕ್ ಅನ್ನು ಸುಧಾರಿಸುವುದು ಮತ್ತು ಸಾರ್ವಜನಿಕ ಸಾರಿಗೆಯ ಪ್ರವೇಶದ ಬಗ್ಗೆ ಗಮನ ಹರಿಸುವುದಾಗಿ ಹೇಳಿದ್ದಾರೆ. ಖರಗ್ ಸಿಂಗ್ ಅವರು ಶಿಕ್ಷಣ ಮತ್ತು ಸಾಂಸ್ಕೃತಿಕ ಒಳಗೊಳ್ಳುವಿಕೆ ತಮ್ಮ ಆದ್ಯತೆಗಳಾಗಿರುತ್ತದೆ ಎಂದು ಹೇಳುತ್ತಾರೆ.
ಗ್ರೀನ್ ಪಾರ್ಟಿಯ ಇಬ್ಬರು ಭಾರತೀಯ ಮೂಲದ ಅಭ್ಯರ್ಥಿಗಳು ನೀಲು ಜೆನ್ನಿಂಗ್ಸ್ ಮತ್ತು ಸಪ್ನಾ ಸಮಂತ್. ಜೆನ್ನಿಂಗ್ಸ್‌ಗೆ, ಪ್ರತಿಯೊಬ್ಬರಿಗೂ ವಾರಕ್ಕೆ $385 ಖಾತರಿಯ ಆದಾಯವನ್ನು ಖಚಿತಪಡಿಸಿಕೊಳ್ಳುವುದು, 35,000 ಹೊಸ ಮನೆಗಳನ್ನು ನಿರ್ಮಿಸುವುದು ಮತ್ತು ಅಂಗವೈಕಲ್ಯ ಶಾಸನವನ್ನು ರಚಿಸುವುದು ಆದ್ಯತೆಯಾಗಿದೆ. ಸಮಂತ್ ಅವರು ಸಮಾನ, ಉಚಿತ, ಅಂತರ್ಗತ, ಸುಸ್ಥಿರ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಬಯಸುತ್ತಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:16 pm, Fri, 13 October 23