New Zealand Earthquake: ನ್ಯೂಜಿಲೆಂಡ್​ನಲ್ಲಿ ಪ್ರಬಲ ಭೂಕಂಪ, 7.2 ತೀವ್ರತೆ ದಾಖಲು

ನ್ಯೂಜಿಲೆಂಡ್​ನ ಕೆರ್ಮಾಡೆಕ್ ದ್ವೀಪದ ಬಳಿ ಪ್ರಬಲ ಭೂಕಂಪ(Earthquake) ಸಂಭವಿಸಿದೆ, ರಿಕ್ಟರ್ ಮಾಪಕದಲ್ಲಿ 7.2 ತೀವ್ರತೆ ದಾಖಲಾಗಿದೆ

New Zealand Earthquake: ನ್ಯೂಜಿಲೆಂಡ್​ನಲ್ಲಿ ಪ್ರಬಲ ಭೂಕಂಪ, 7.2 ತೀವ್ರತೆ ದಾಖಲು
ಭೂಕಂಪ

Updated on: Apr 24, 2023 | 8:46 AM

ನ್ಯೂಜಿಲೆಂಡ್​ನ ಕೆರ್ಮಾಡೆಕ್ ದ್ವೀಪದ ಬಳಿ ಪ್ರಬಲ ಭೂಕಂಪ(Earthquake) ಸಂಭವಿಸಿದೆ, ರಿಕ್ಟರ್ ಮಾಪಕದಲ್ಲಿ 7.2 ತೀವ್ರತೆ ದಾಖಲಾಗಿದೆ. ಭೂಕಂಪವು ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 6.11ಕ್ಕೆ ಸಂಭವಿಸಿದೆ. ಪ್ರಾಣಹಾನಿ ಸಂಭವಿಸಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನ್ಯೂಜಿಲೆಂಡ್​ನಲ್ಲಿ ಮಾರ್ಚ್​ 16 ರಂದು 7.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಜಿಲೆಂಡ್‌ನ ಉತ್ತರ ಭಾಗದಲ್ಲಿರುವ ಕೆರ್ಮಾಡೆಕ್ ದ್ವೀಪಗಳಲ್ಲಿ ಗುರುವಾರ ಭೂಕಂಪ ಸಂಭವಿಸಿದೆ.

ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 7.1 ಎಂದು ಅಳೆಯಲಾಗಿತ್ತು. ಭೂಕಂಪವು 10 ಕಿಮೀ ಆಳವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿತ್ತು.

ಮತ್ತಷ್ಟು ಓದಿ: New Zealand Earthquake: ನ್ಯೂಜಿಲೆಂಡ್​ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

ನ್ಯೂಜಿಲೆಂಡ್ ಪ್ರಪಂಚದ ಎರಡು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ – ಪೆಸಿಫಿಕ್ ಪ್ಲೇಟ್ ಮತ್ತು ಆಸ್ಟ್ರೇಲಿಯನ್ ಪ್ಲೇಟ್‌ಗಳ ಗಡಿಯಲ್ಲಿ ನೆಲೆಗೊಂಡಿರುವುದರಿಂದ ಭೂಕಂಪಗಳಿಗೆ ಗುರಿಯಾಗುತ್ತದೆ. ಇದು ರಿಂಗ್ ಆಫ್ ಫೈರ್ ಎಂದು ಕರೆಯಲ್ಪಡುವ ತೀವ್ರವಾದ ಭೂಕಂಪನ ಚಟುವಟಿಕೆಯ ವಲಯದ ಅಂಚಿನಲ್ಲಿದೆ. ನ್ಯೂಜಿಲೆಂಡ್‌ನಲ್ಲಿ ಪ್ರತಿ ವರ್ಷ ಸಾವಿರಾರು ಭೂಕಂಪಗಳು ಸಂಭವಿಸುತ್ತವೆ.