ಶರಣಾಗತಿ ಬಿಟ್ಟರೆ ಯಾವುದೇ ಒಪ್ಪಂದದ ಆಯ್ಕೆಯಿಲ್ಲ; ಇರಾನ್​ಗೆ ಟ್ರಂಪ್ ಖಡಕ್ ಎಚ್ಚರಿಕೆ

'ಇರಾನ್ ನಮ್ಮೆದುರು ಬೇಷರತ್ತಾಗಿ ಶರಣಾಗುವುದನ್ನು ಹೊರತುಪಡಿಸಿ ಆ ದೇಶದೊಂದಿಗೆ ಯಾವುದೇ ಒಪ್ಪಂದವಿಲ್ಲ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ಟ್ರೂತ್ ಸೋಷಿಯಲ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಟ್ರಂಪ್, ಇರಾನ್‌ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ನಾನು ಸಹಾಯ ಮಾಡುತ್ತೇನೆ. ಆದರೆ, ಇರಾನ್ ನಮ್ಮ ಮುಂದೆ ಮಂಡಿಯೂರಬೇಕು ಎಂದು ಹೇಳಿದ್ದಾರೆ.

ಶರಣಾಗತಿ ಬಿಟ್ಟರೆ ಯಾವುದೇ ಒಪ್ಪಂದದ ಆಯ್ಕೆಯಿಲ್ಲ; ಇರಾನ್​ಗೆ ಟ್ರಂಪ್ ಖಡಕ್ ಎಚ್ಚರಿಕೆ
Trump

Updated on: Mar 06, 2026 | 8:31 PM

ವಾಷಿಂಗ್ಟನ್, ಮಾರ್ಚ್ 6: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ಇರಾನ್ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. “ಇರಾನ್ ಮುಂದೆ ಇರುವುದು ಬೇಷರತ್ತಾದ ಶರಣಾಗತಿಯ ಮಾರ್ಗವೊಂದೇ. ಇರಾನ್ ಜೊತೆ ಬೇರಾವುದೇ ಒಪ್ಪಂದ ಸಾಧ್ಯವಿಲ್ಲ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಟೆಹ್ರಾನ್ ಜೊತೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ, ಶರಣಾಗತಿ ಮಾತ್ರ ಅವರ ಮುಂದೆ ಉಳಿದಿರುವ ಆಯ್ಕೆಯಾಗಿದೆ” ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ಸಂಘರ್ಷ ಪೀಡಿತ ದೇಶದಲ್ಲಿ ಮುನ್ನಡೆಸಲು ಅಮೆರಿಕ ಮತ್ತು ಅದರ ಮಿತ್ರಪಕ್ಷಗಳು ಉತ್ತಮ ನಾಯಕನನ್ನು ಆಯ್ಕೆ ಮಾಡುತ್ತವೆ. ನಾವು ಇರಾನ್ ಅನ್ನು ವಿನಾಶದ ಅಂಚಿನಿಂದ ಮರಳಿ ತರಲು ಅವಿಶ್ರಾಂತವಾಗಿ ಕೆಲಸ ಮಾಡುತ್ತೇವೆ. ಅದನ್ನು ಆರ್ಥಿಕವಾಗಿ ಹಿಂದೆಂದಿಗಿಂತಲೂ ದೊಡ್ಡದಾಗಿ, ಉತ್ತಮ ಮತ್ತು ಬಲಶಾಲಿಯಾಗಿ ಮಾಡುತ್ತೇವೆ. ಇರಾನ್ ಉತ್ತಮ ಭವಿಷ್ಯವನ್ನು ಹೊಂದುವುದರಲ್ಲಿ ಅನುಮಾನವಿಲ್ಲ” ಎಂದು ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ನಿಮ್ಮ ಮೇಲೆ ದಾಳಿ ನಿಲ್ಲಬೇಕಾದರೆ ಅಮೆರಿಕನ್ನರನ್ನು ಹೊರಹಾಕಿ; ಗಲ್ಫ್ ದೇಶಗಳಿಗೆ ಇರಾನ್ ಎಚ್ಚರಿಕೆ

ಕಳೆದ ವಾರದಲ್ಲಿ, ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಇರಾನ್‌ನಲ್ಲಿ ನಿರಂತರ ಮಿಲಿಟರಿ ದಾಳಿಗಳನ್ನು ನಡೆಸಿವೆ. ಈ ದಾಳಿಗಳಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಕೊಲ್ಲಲ್ಪಟ್ಟರು. ಇದು ಇನ್ನೂ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಇದಕ್ಕೆ ಪ್ರತಿಕಾರವಾಗಿ, ಇರಾನ್ ಇಸ್ರೇಲ್ ಮತ್ತು ಗಲ್ಫ್ ಪ್ರದೇಶದಾದ್ಯಂತ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಪ್ರಾರಂಭಿಸಿತು. ಇರಾನ್‌ನಲ್ಲಿ ಯುದ್ಧದಿಂದಾಗಿ ಇದುವರೆಗೂ 1,200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us