AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆನಡಾದ ಖ್ಯಾತ ಲೇಖಕಿ ಆನ್ ಕಾರ್ಸನ್‌ಗೆ 2026ರ ಸಾಹಿತ್ಯ ನೊಬೆಲ್ ಪ್ರಶಸ್ತಿ ಘೋಷಣೆ

2026ನೇ ಸಾಲಿನ ಪ್ರತಿಷ್ಠಿತ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಯು ಕೆನಡಾದ ಪ್ರಸಿದ್ಧ ಕವಿ, ಪ್ರಬಂಧಕಿ ಹಾಗೂ ಭಾಷಾಂತರಕಾರ್ತಿ ಆನ್ ಕಾರ್ಸನ್ ಅವರಿಗೆ ಒಲಿದಿದೆ ಎಂದು ಸ್ವೀಡಿಷ್ ಅಕಾಡೆಮಿ ಇಂದು ಪ್ರಕಟಿಸಿದೆ. ಕಾರ್ಸನ್ ಅವರ ವಿಶಿಷ್ಟ ಸಾಹಿತ್ಯ ಕೃಷಿ ಹಾಗೂ ಸೃಜನಶೀಲತೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ. ಆನ್ ಕಾರ್ಸನ್ ಅವರು ಕವಿತೆ, ಪ್ರಬಂಧ, ನಾಟಕ ಮತ್ತು ಅನುವಾದಗಳನ್ನು ಮೀರಿ ಹೊಸ ಸಾಹಿತ್ಯ ಪ್ರಕಾರವನ್ನು ರೂಪಿಸಿದವರು. ಪ್ರಾಚೀನ ಗ್ರೀಕ್ ಸಾಹಿತ್ಯ ಮತ್ತು ಗ್ರೀಕ್ ಪುರಾಣಗಳನ್ನು ಆಧುನಿಕ ಕಾವ್ಯದೊಂದಿಗೆ ಸಂಯೋಜಿಸುವಲ್ಲಿ ಅವರು ಸಿದ್ಧಹಸ್ತರು.

ಕೆನಡಾದ ಖ್ಯಾತ ಲೇಖಕಿ ಆನ್ ಕಾರ್ಸನ್‌ಗೆ 2026ರ ಸಾಹಿತ್ಯ ನೊಬೆಲ್ ಪ್ರಶಸ್ತಿ ಘೋಷಣೆ
Anne Carson
ಸುಷ್ಮಾ ಚಕ್ರೆ
|

Updated on: Oct 08, 2026 | 5:16 PM

Share

ಸ್ಟಾಕ್‌ಹೋಮ್, ಅಕ್ಟೋಬರ್ 8: 2026ನೇ ಸಾಲಿನ ಪ್ರತಿಷ್ಠಿತ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಯು ಕೆನಡಾದ ಲೇಖಕಿ ಆನ್ ಕಾರ್ಸನ್ ಅವರಿಗೆ ಒಲಿದಿದೆ. ಸಾಂಪ್ರದಾಯಿಕ ಸಾಹಿತ್ಯ ಪರಂಪರೆಯೊಂದಿಗೆ ರೋಚಕ ಸಂವಾದ ನಡೆಸುತ್ತಾ, ಸಮಕಾಲೀನ ಸಾಹಿತ್ಯ ಕ್ಷೇತ್ರಕ್ಕೆ ನೂತನ ರೂಪಗಳನ್ನು ತಂದುಕೊಟ್ಟ ಅವರ ಸಾಹಸಮಯ ಹಾಗೂ ಸೃಜನಶೀಲ ಕೃತಿಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ ಎಂದು ಸ್ವೀಡಿಷ್ ಅಕಾಡೆಮಿ ಪ್ರಕಟಿಸಿದೆ.

ಸಮಕಾಲೀನ ಕಾವ್ಯ ಮತ್ತು ಗದ್ಯ ಕ್ಷೇತ್ರದ ಅತ್ಯಂತ ವಿಶಿಷ್ಟ ಲೇಖಕಿ, ಕೆನಡಾದ ಕವಿ ಹಾಗೂ ಸಾಹಿತಿ ಆನ್ ಕಾರ್ಸನ್ ಅವರಿಗೆ 2026ರ ಪ್ರತಿಷ್ಠಿತ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿ ಒಲಿದಿದೆ. ನೊಬೆಲ್ ಸಮಿತಿಯು ಪ್ರಶಸ್ತಿ ಕುರಿತು ಕರೆ ಮಾಡಿದಾಗ ಆನ್ ಕಾರ್ಸನ್ ಐಸ್‌ಲ್ಯಾಂಡ್‌ನಲ್ಲಿದ್ದರು. ಈ ಪ್ರಶಸ್ತಿಯ ಸುದ್ದಿ ತಿಳಿದ ಕ್ಷಣವನ್ನು ಸ್ಮರಿಸಿದ ಕಾರ್ಸನ್, “ನಾನು ಐಸ್‌ಲ್ಯಾಂಡ್‌ನಲ್ಲಿ ಗಾಳಿಯ ಸದ್ದನ್ನು ಆಲಿಸುತ್ತಿದ್ದಾಗ ಈ ಕರೆ ಬಂದಿತು” ಎಂದು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.

76 ವರ್ಷದ ಆನ್ ಕಾರ್ಸನ್ ಅವರು ಕಾವ್ಯ, ಗದ್ಯ, ಸಾಂಪ್ರದಾಯಿಕ ಅಭಿಜಾತ ಸಾಹಿತ್ಯ ಮತ್ತು ಅನುವಾದಗಳ ನಡುವಿನ ಮಿತಿಗಳನ್ನು ಮೀರಿ ಬರೆಯುವ ವೈಶಿಷ್ಟ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಪ್ರಾಚೀನ ಗ್ರೀಕ್ ಸಾಹಿತ್ಯವನ್ನು ಆಧುನಿಕ ವಿಷಯಗಳೊಂದಿಗೆ ಸಂಯೋಜಿಸಿ ಬರೆಯುವಲ್ಲಿ ಅವರು ಅತ್ಯಂತ ಪ್ರಸಿದ್ಧರು.

ಇದನ್ನೂ ಓದಿ: ವಿಜ್ಞಾನಿಗಳಾದ ಹೆನ್ರಿ ಬಿ. ಕಗನ್, ಕೆನ್ಸೊ ಸೊವಾಯಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ

ಪ್ರಸಿದ್ಧ ಕೃತಿಗಳು:

ಆಟೋಬಯೋಗ್ರಫಿ ಆಫ್ ರೆಡ್,  ದಿ ಬ್ಯೂಟಿ ಆಫ್ ದಿ ಹಸ್ಬೆಂಡ್ ಮತ್ತು ರಾಂಗ್ ನಾರ್ಮಾ ಅವರ ಪ್ರಮುಖ ಕೃತಿಗಳು. ಜೊತೆಗೆ ಪ್ರಾಚೀನ ಗ್ರೀಕ್‌ನ ಸ್ಯಾಫೋ ಮತ್ತು ಯುರಿಪಿಡೀಸ್ ಅವರ ಮಹತ್ವದ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಅವರು ಮೆಕ್‌ಗಿಲ್, ಪ್ರಿನ್ಸ್‌ಟನ್ ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಗಳಲ್ಲಿ (ಬರ್ಕ್ಲಿ) ಕ್ಲಾಸಿಕ್ಸ್ ಮತ್ತು ಸಾಹಿತ್ಯ ವಿಭಾಗದ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ ನೊಬೆಲ್ ಪ್ರಶಸ್ತಿಯ ಹಿನ್ನೆಲೆ:

ನೊಬೆಲ್ ಪ್ರಶಸ್ತಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, 1901ರಿಂದ 2025ರವರೆಗೆ 118 ಬಾರಿ ಒಟ್ಟು 122 ಜನರಿಗೆ ಸಾಹಿತ್ಯ ನೋಬೆಲ್ ನೀಡಲಾಗಿದೆ. 2025ರ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ಹಂಗೇರಿಯನ್ ಲೇಖಕ ಲಾಸ್ಲೋ ಕ್ರಾಸ್ನಾಹೋರ್ಕಾಯ್ ಅವರಿಗೆ ನೀಡಲಾಗಿತ್ತು. ಇದುವರೆಗೆ ಒಟ್ಟು 18 ಮಹಿಳೆಯರು ಸಾಹಿತ್ಯ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ. 1909ರಲ್ಲಿ ಪ್ರಶಸ್ತಿ ಪಡೆದ ಸ್ವೀಡನ್‌ನ ಸೆಲ್ಮಾ ಲೇಗರ್ಲೋಫ್ ಮೊದಲ ಮಹಿಳಾ ಸಾಧಕಿಯಾಗಿದ್ದಾರೆ.

ಇದನ್ನೂ ಓದಿ: ಇತಿಹಾಸದಲ್ಲೇ ನೊಬೆಲ್​ಗೆ ನನಗಿಂತ ಅರ್ಹರು ಯಾರೂ ಇಲ್ಲ: ನೊಬೆಲ್ ಶಾಂತಿ ಪುರಸ್ಕಾರ ನೀಡದಿದ್ದರೆ ಅದು ನೊಬೆಲ್ ಸಮಿತಿಗೇ ಅಪಖ್ಯಾತಿ ಎಂದ ಟ್ರಂಪ್

ಪ್ರಸ್ತುತ ಸಾಲಿನ ನೊಬೆಲ್ ಬಹುಮಾನ ಮೊತ್ತ 12 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು 11 ಕೋಟಿ ರೂ.ಗೂ ಹೆಚ್ಚು) ಆಗಿದೆ.

1907ರಲ್ಲಿ 41ನೇ ವಯಸ್ಸಿನಲ್ಲಿ ಪ್ರಶಸ್ತಿ ಪಡೆದ ರಡ್ಯಾರ್ಡ್ ಕಿಪ್ಲಿಂಗ್ ಅತ್ಯಂತ ಕಿರಿಯ ಸಾಹಿತ್ಯ ನೊಬೆಲ್ ವಿಜೇತರಾದರೆ, 2007ರಲ್ಲಿ 87ನೇ ವಯಸ್ಸಿನಲ್ಲಿ ಪ್ರಶಸ್ತಿ ಪಡೆದ ಡೋರಿಸ್ ಲೆಸ್ಸಿಂಗ್ ಅತ್ಯಂತ ಹಿರಿಯ ವಯಸ್ಸಿನವರಾಗಿದ್ದಾರೆ.

ಪ್ರಶಸ್ತಿ ನೀಡದ ವರ್ಷಗಳು:

ವಿಶ್ವಯುದ್ಧಗಳ ಕಾರಣ ಸೇರಿದಂತೆ 1914, 1918, 1935, 1940, 1941, 1947 ಮತ್ತು 1943ರ ಒಟ್ಟು 7 ವರ್ಷಗಳಲ್ಲಿ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿರಲಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ