ಭೌತಶಾಸ್ತ್ರ, ರಸಾಯನ ಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ವೈದ್ಯಶಾಸ್ತ್ರದ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದವರಿಗೆ ಇಡೀ ವಿಶ್ವದಲ್ಲಿ ಸಿಗುವ ಸರ್ವೋತ್ತಮ ಪ್ರಶಸ್ತಿಯೆಂದರೆ ಅದು ನೊಬೆಲ್ ಪ್ರಶಸ್ತಿ ಎಂದರೆ ತಪ್ಪಾಗಲಾರದು. ಸರ್ ಸಿವಿ ರಾಮನ್, ರವೀಂದ್ರನಾಥ ಠಾಗೋರ್ರಿಂದ ಹಿಡಿದು ಅಭಿಜಿತ್ ಬ್ಯಾನರ್ಜಿರಂಥ ದೈತ್ಯ ಭಾರತೀಯ ಪ್ರತಿಭೆಗಳೂ ಈ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ.
ನೊಬೆಲ್ ಪ್ರಶಸ್ತಿ ಪುರಸ್ಕೃತರಿಗೆ ಪದಕದ ಜೊತೆಗೆ ತಮ್ಮ ಸಂಶೋಧನೆಯನ್ನು ಮುಂದುವರಿಸಲು ಸೂಕ್ತ ನಗದು ಬಹುಮಾನ ಸಹ ನೀಡಲಾಗುತ್ತದೆ. ಅಂತೆಯೇ, ಈ ಬಾರಿಯ ವಿಜೇತರಿಗೂ ನಗದು ಬಹುಮಾನ ನೀಡಲಾಗುವುದು. ಅದರೆ, ಈ ಬಾರಿಯ ವಿಶೇಷವೆಂದರೆ, ಪ್ರಶಸ್ತಿ ಪುರಸ್ಕೃತರಿಗೆ ನೀಡುವ ನಗದು ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದ್ದು ಈ ವರ್ಷದ ವಿಜೇತರಿಗೆ ಹಿಂದೆಂದಿಗಿಂತ ಹೆಚ್ಚಾಗಿ ಸುಮಾರು 8.14 ಕೋಟಿ ರೂಪಾಯಿ ಮೊತ್ತವನ್ನು ನೀಡಲಾಗುವುದು. ಈ ಮೊತ್ತ ಕಳೆದ ವರ್ಷಕ್ಕಿಂತ ಶೇಕಡಾ 11.11 ರಷ್ಟು ಹೆಚ್ಚಳವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನೊಬೆಲ್ ಪ್ರತಿಷ್ಠಾನವು ಕಳೆದ ವರ್ಷಗಳಿಗಿಂತ ಈ ಬಾರಿ ನಮ್ಮ ಖರ್ಚು ಮತ್ತು ಬಂಡವಾಳದ ಪರಿಸ್ಥಿತಿ ಸ್ಥಿರವಾಗಿದೆ. ಹಾಗಾಗಿ, ನಾವು ಬಹುಮಾನದ ಮೊತ್ತವನ್ನು ಹೆಚ್ಚಿಸಲು ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
Published On - 11:39 am, Fri, 25 September 20