ಪಿಂಚಣಿ ಹಣ ಪಡೆಯಲು ಮೃತ ಪತ್ನಿಯ ದೇಹವನ್ನು 5 ವರ್ಷಗಳ ಕಾಲ ಫ್ರೀಜರ್ನಲ್ಲಿಟ್ಟಿದ್ದ ವ್ಯಕ್ತಿಗೆ ಸ್ವೀಡಿಷ್ ನ್ಯಾಯಾಲಯ 3.5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪತಿ ತನ್ನ ಪತ್ನಿಯ ಪಿಂಚಣಿಯನ್ನು ಸಂಗ್ರಹಿಸುವ ಸಲುವಾಗಿ ಸುಮಾರು ಐದು ವರ್ಷಗಳ ಕಾಲ ಫ್ರೀಜರ್‌ನಲ್ಲಿ ತನ್ನ ಹೆಂಡತಿಯ ದೇಹವನ್ನು ಸಂರಕ್ಷಿಸಿದ್ದ. ಸಾರ್ವಜನಿಕ ಸ್ಮಶಾನದಲ್ಲಿ ಸಮಾಧಿ ಮಾಡಿದರೆ ಎಲ್ಲರಿಗೂ ಪತ್ನಿ ಸಾವಿನ ವಿಚಾರ ತಿಳಿಯುತ್ತೆ ಎಂದು ಮನೆಯಲ್ಲೇ ಇರಿಸಿದ್ದ, 2018ರಲ್ಲಿ ಕ್ಯಾನ್ಸರ್ನಿಂದ ಪತ್ನಿ ಮೃತಪಟ್ಟಿದ್ದರು, ಆಕೆ ಇನ್ನೂ ಜೀವಂತವಾಗಿದ್ದಾಳೆ ಎಂದು ಸ್ನೇಹಿತರು ಹಾಗೂ ಕುಟುಂಬದವರ ಬಳಿ ಹೇಳಿಕೊಂಡಿದ್ದ.
ಆಕೆ ಯಾರೊಂದಿಗೂ ಮಾತನಾಡಲು ಬಯಸುತ್ತಿಲ್ಲ ಎಂದು ಸುಳ್ಳು ಹೇಳಿ ಎಲ್ಲರ ಸಂಪರ್ಕದಿಂದ ದೂರ ಇದ್ದ.
ಮನೆಗೆ ಬಂದವರಿಗೆಲ್ಲಾ ಆಕೆ ನಿದ್ರಿಸುತ್ತಿದ್ದಾಳೆ, ತೊಂದರೆ ಕೊಡಬೇಡಿ ಎಂದು ಹೇಳಿ ಕಳುಹಿಸುತ್ತಿದ್ದ, ಆದರೂ ಕೆಲವರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಆಗ ಪೊಲೀಸರು ಮನೆಗೆ ಬಂದು ಶವವನ್ನು ವಶಪಡಿಸಿಕೊಂಡಿದ್ದಾರೆ.
ಆಕೆಯ ಸಾವು ಹಾಗೂ ದೇಹವನ್ನು ಫ್ರೀಜರ್‌ನಲ್ಲಿ ಇಟ್ಟಿರುವ ಕುರಿತು ಆತ ಒಪ್ಪಿಕೊಂಡಿದ್ದಾನೆ. ದಂಪತಿ ಅರ್ಜಾಂಗ್ನಲ್ಲಿ ವಾಸವಾಗಿದ್ದರು, ಇದು ಸ್ಟಾಕ್ಹೋಮ್ನಿಂದ ಪಶ್ಚಿಮಕ್ಕೆ 340 ಕಿ.ಮೀ ದೂರದಲ್ಲಿದೆ.
ಮತ್ತಷ್ಟು ಓದಿ: ಪ್ರೀತಿಗಾಗಿ ಬಾಗೇಪಲ್ಲಿ ಯುವತಿಯ ಬೆನ್ನು ಬಿದ್ದಿದ್ದ, ನಿರಾಕರಿಸಿದಾಗ ಚಾಕುವಿನಿಂದ ಕುತ್ತಿಗೆಗೆ ಇರಿದ, ರಕ್ಷಣೆಗೆ ಮುಂದಾದವರ ಮೇಲೆಯೂ ಹುಚ್ಚಾಟ ಮೆರೆದ
ಆ ವ್ಯಕ್ತಿ 1.2 ಮಿಲಿಯನ್ನಷ್ಟು ಪಿಂಚಣಿ ಪಡೆದಿದ್ದ, ಜನರು ನಾನಾ ಕಾರಣಗಳಿಂದಾಗಿ ಫ್ರೀಜರ್ನ್ನು ಬಳಕೆ ಮಾಡುತ್ತಾರೆ, ಆದರೆ ಈ ವ್ಯಕ್ತಿ ಪತ್ನಿಯ ಶವವನ್ನು ಅದರಲ್ಲಿಟ್ಟು ತಪ್ಪು ಮಾಡಿದ್ದಾನೆ ಎಂದು ಪ್ರಾಸಿಕ್ಯೂಟರ್ ಲಿಂಡಾ ಹೇಳಿದ್ದಾರೆ.
ನಾಗರಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ, ವಂಚನೆ, ಶವವನ್ನು ವಿರೂಪಗೊಳಿಸುವುದು, ನಕಕಿ ದಾಖಲೆ ಸೃಷ್ಟಿ ಸೇರಿದಂತೆ ಇತರೆ ಆರೋಪಗಳ ಮೇಲೆ ಆತನನ್ನು ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ