Tv9 Exclusive: IC-814 ವಿಮಾನ ಹೈಜಾಕ್ ಮಾಡಿದ್ದ ಅಪಹರಣಕಾರ ಜಹೂರ್ ಮಿಸ್ತ್ರಿ ಪಾಕಿಸ್ತಾನದ ಕರಾಚಿಯಲ್ಲಿ ಹತ್ಯೆ

| Updated By: ರಶ್ಮಿ ಕಲ್ಲಕಟ್ಟ

Updated on: Mar 07, 2022 | 4:36 PM

ರೌಫ್ ಅಸ್ಗರ್ ಸೇರಿದಂತೆ ಉನ್ನತ ಜೈಶ್ ಇ ಮುಹಮ್ಮದ್ ನಾಯಕತ್ವವು ಕರಾಚಿಯಲ್ಲಿ ಅಖುಂಡ್‌ನ ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಭಾಗವಹಿಸಿದೆ ಎಂದು ಗುಪ್ತಚರ ಮೂಲಗಳು ಖಚಿತಪಡಿಸಿವೆ.

Tv9 Exclusive: IC-814 ವಿಮಾನ ಹೈಜಾಕ್ ಮಾಡಿದ್ದ ಅಪಹರಣಕಾರ ಜಹೂರ್ ಮಿಸ್ತ್ರಿ ಪಾಕಿಸ್ತಾನದ ಕರಾಚಿಯಲ್ಲಿ ಹತ್ಯೆ
ವಿಮಾನ ಹೈಜಾಕ್ ಮಾಡಿದವರು
Follow us on

1999 ರಲ್ಲಿ IC-814 ವಿಮಾನ ಹೈಜಾಕ್ (IC-814 Hijacking )ಮಾಡಿದ ಐವರು ಅಪಹರಣಕಾರರಲ್ಲಿ ಒಬ್ಬನಾದ ಜಹೂರ್ ಮಿಸ್ತ್ರಿ(Zahoor Mistry) ಅಲಿಯಾಸ್ ಜಾಹಿದ್ ಅಖುಂಡ್ ಮಾರ್ಚ್ 1 ರಂದು ಪಾಕಿಸ್ತಾನದ ಕರಾಚಿ ನಗರದಲ್ಲಿ ಹತ್ಯೆಯಾಗಿದ್ದಾನೆ ಎಂದು ಪಾಕಿಸ್ತಾನದ ಗುಪ್ತಚರ ಮೂಲಗಳು ಖಚಿತಪಡಿಸಿವೆ. ಜಹೂರ್ ಮಿಸ್ತ್ರಿ ಕಳೆದ ಹಲವಾರು ವರ್ಷಗಳಿಂದ ಜಾಹಿದ್ ಅಖುಂಡ್(Zahid Akhund) ಎಂಬ ಹೊಸ ಗುರುತಿನೊಂದಿಗೆ ಕರಾಚಿಯಲ್ಲಿ ವಾಸಿಸುತ್ತಿದ್ದನು. ಈತ ಕರಾಚಿಯ ಅಖ್ತರ್ ಕಾಲೋನಿಯಲ್ಲಿರುವ ಕ್ರೆಸೆಂಟ್ ಪೀಠೋಪಕರಣಗಳ ಮಾಲೀಕ. ರೌಫ್ ಅಸ್ಗರ್ ಸೇರಿದಂತೆ ಉನ್ನತ ಜೈಶ್ ಇ ಮುಹಮ್ಮದ್ ನಾಯಕತ್ವವು ಕರಾಚಿಯಲ್ಲಿ ಅಖುಂಡ್‌ನ ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಭಾಗವಹಿಸಿದೆ ಎಂದು ಗುಪ್ತಚರ ಮೂಲಗಳು ಖಚಿತಪಡಿಸಿವೆ. ಅಸ್ಗರ್ ಜೈಶ್ ಇ ಮುಹಮ್ಮದ್​​ನ ಆಪರೇಷನಲ್ ಮುಖ್ಯಸ್ಥ ಮತ್ತು ಜೈಶ್ ಮುಖ್ಯಸ್ಥ ಮಸೂದ್ ಅಜರ್ ನ ಸಹೋದರ.  ಪಾಕಿಸ್ತಾನದ ಪ್ರಮುಖ ಬ್ರಾಡ್‌ಕಾಸ್ಟರ್ ಜಿಯೋ ಟಿವಿ ಕರಾಚಿಯ “ಉದ್ಯಮಿ”ಯೊಬ್ಬರ ಹತ್ಯೆಯನ್ನು ದೃಢಪಡಿಸಿದೆ. ಆದಾಗ್ಯೂ ಇದು ಹತ್ಯೆಯದ ವ್ಯಕ್ತಿಯ ಹೆಸರು ಅಥವಾ ಮಾಡಿದ ಅಪರಾಧದ ವಿವರಗಳ ಬಗ್ಗೆ ಯಾವುದೇ ವಿವರಗಳನ್ನು ಉಲ್ಲೇಖಿಸಿಲ್ಲ. ಹತ್ಯೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಜಿಯೋ ಟಿವಿ ಕೂಡ ಹಂಚಿಕೊಂಡಿದ್ದು, ಕೊಲೆಯನ್ನು ಯೋಜಿತ ರೀತಿಯಲ್ಲಿ ಮಾಡಲಾಗಿದೆ ಎಂಬುದನ್ನು ತೋರಿಸುತ್ತದೆ. ಆರೋಪಿಗಳು ಆ ಪ್ರದೇಶದ ಮೇಲೆ ಕಣ್ಣಾಡಿಸಿದ ನಂತರ ಪೀಠೋಪಕರಣ ಗೋದಾಮಿನೊಳಗೆ ಪ್ರವೇಶಿಸಿ ವ್ಯಾಪಾರಿಯನ್ನು ಗುರಿಯಾಗಿಸುವ ಮೊದಲು ಇಬ್ಬರು ಶಸ್ತ್ರಸಜ್ಜಿತ ಮೋಟಾರ್‌ಸೈಕ್ಲಿಸ್ಟ್‌ಗಳು ಅಖ್ತರ್ ಕಾಲೋನಿಯ ಬೀದಿಗಳಲ್ಲಿ ತಿರುಗಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗಪಡಿಸಿವೆ.

“ಕೊಲೆಯಾಗಿರುವುದು ದೃಢಪಟ್ಟಿದೆ. ಆದರೆ ಕೆಲವು ವಿಚಿತ್ರ ಕಾರಣಗಳಿಗಾಗಿ ವಿಷಯದ ಬಗ್ಗೆ ವರದಿ ಮಾಡದಂತೆ ಕೇಳಲಾಗಿದೆ” ಎಂದು ಹೆಸರು ಬಹಿರಂಗ ಪಡಿಸದಂತೆ ಒತ್ತಾಯಿಸಿದ ಪಾಕಿಸ್ತಾನಿ ಸುದ್ದಿ ಜಾಲದ ಪ್ರಮುಖ ನಿರ್ಮಾಪಕರೊಬ್ಬರು ಹೇಳಿದ್ದಾರೆ.

IC-814 ವಿಮಾನ ಅಪಹರಣ ಪ್ರಕರಣ

ಇಂಡಿಯನ್ ಏರ್‌ಲೈನ್ಸ್‌ನ IC-814 ವಿಮಾನವನ್ನು ನೇಪಾಳದಿಂದ 5 ಅಪಹರಣಕಾರರು ಡಿಸೆಂಬರ್ 24, 1999 ರಂದು ಅಪಹರಿಸಿದ್ದರು. ತಾಲಿಬಾನ್ ನಿಯಂತ್ರಣದಲ್ಲಿದ್ದ ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಆಯಕಟ್ಟಿನ ನಿಲುಗಡೆ ಮಾಡುವ ಮೊದಲು ವಿಮಾನವು ಅಮೃತಸರ, ಲಾಹೋರ್ ಮತ್ತು ದುಬೈಗೆ ಪ್ರಯಾಸಕರ ಪ್ರಯಾಣವನ್ನು ಮಾಡಿತು. ಒತ್ತೆಯಾಳು ಬಿಕ್ಕಟ್ಟು ಒಂದು ವಾರದವರೆಗೆ ಮುಂದುವರೆಯಿತು, ನಂತರ ಭಾರತ ಸರ್ಕಾರಕ್ಕೆ ಭಯೋತ್ಪಾದಕರಾದ ಮಸೂದ್ ಅಜರ್, ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಮುಷ್ತಾಕ್ ಅಹ್ಮದ್ ಜರ್ಗರ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿದ್ದು,ಅದಕ್ಕೆ ಭಾರತ ಒಪ್ಪಿತ್ತು. ಅಪಹರಣಕಾರರು ಒಬ್ಬ ಭಾರತೀಯ ಪ್ರಜೆಯನ್ನು ಕೊಂದಿದ್ದು ಇತರ 170 ಪ್ರಯಾಣಿಕರು ಮತ್ತು ಸಿಬ್ಬಂದಿ ಬದುಕುಳಿದರು.

-ಆದಿತ್ಯರಾಜ್ ಕೌಲ್, Executive Editor, Strategic Affairs, News9 Plus

ಇದನ್ನೂ ಓದಿ: ಉಕ್ರೇನ್​ನಲ್ಲಿ ಫಲಕೊಡುತ್ತಿದೆ ಎಂಜಿಆರ್ ತಂತ್ರ: ಉಕ್ರೇನ್​ ಅಧ್ಯಕ್ಷ ಝೆಲೆನ್​ಸ್ಕಿ ಬದುಕಿನ ಮೇಲೆ ತಮಿಳುನಾಡಿನ ಎಂಜಿಆರ್ ಛಾಯೆ

Published On - 4:12 pm, Mon, 7 March 22