Nelore cow sale in Brazil: ನೆಲ್ಲೂರು ಹಸು ಬ್ರೆಜಿಲ್‌ನಲ್ಲಿ 40 ಕೋಟಿ ರೂಪಾಯಿಗೆ ಮಾರಾಟವಾಯಿತು! ಏನಿದರ ದಾಖಲೆ?

Nelore cattle sale in Brazil: ಈ ನೆಲ್ಲೂರು ಹಸು ತಳಿಯು ಚಿತ್ರದಲ್ಲಿರುವಂತೆ ಪ್ರಕಾಶಮಾನವಾದ ಬಿಳಿ ತುಪ್ಪಳವನ್ನು ಹೊಂದಿದ್ದು, ಭುಜದ ಮೇಲಿರುವ ವಿಶಿಷ್ಟವಾದ ಗೂನು ಆಕೃತಿಗೆ ಹೆಸರುವಾಸಿಯಾಗಿದೆ. ಇದು ಆಂಧ್ರ ಪ್ರದೇಶದಲ್ಲಿ ಜನ್ಮ ಪಡೆದಿರುವುದು ಎಂಬುದು ಗಮನಾರ್ಹ. ಆದರೆ ಅದೀಗ ಬ್ರೆಜಿಲ್‌ನ ಅತ್ಯಂತ ಪ್ರಮುಖ ತಳಿಗಳಲ್ಲಿ ಒಂದಾಗಿದೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಹೆಸರನ್ನೇ ಈ ಈ ಜಾನುವಾರಿಗೂ ಇಡಲಾಗಿದ್ದು, ವೈಜ್ಞಾನಿಕವಾಗಿ ಬಾಸ್ ಇಂಡಿಕಸ್ ಎಂದು ವರ್ಗೀಕರಿಸಲಾಗಿದೆ.

Nelore cow sale in Brazil: ನೆಲ್ಲೂರು ಹಸು ಬ್ರೆಜಿಲ್‌ನಲ್ಲಿ 40 ಕೋಟಿ ರೂಪಾಯಿಗೆ ಮಾರಾಟವಾಯಿತು! ಏನಿದರ ದಾಖಲೆ?
ನೆಲ್ಲೂರು ಹಸು ಬ್ರೆಜಿಲ್‌ನಲ್ಲಿ 40 ಕೋಟಿಗೆ ಮಾರಾಟವಾಯಿತು!
Follow us
ಸಾಧು ಶ್ರೀನಾಥ್​
|

Updated on:Mar 27, 2024 | 10:04 AM

ಜಾಗತಿಕ ಮಟ್ಟದಲ್ಲಿ ಜಾನುವಾರುಗಳ ಹರಾಜಿನಲ್ಲಿ ದಾಖಲೆಯೊಂದು ನಿರ್ಮಾಣವಾಗಿದೆ. ಈ ವಿದ್ಯಮಾನದಲ್ಲಿ Viatina-19 FIV Mara Imóveis ಎಂಬ ಹೆಸರಿನ ನೆಲೋರ್ ಹಸುವು (Nelore Cow) ಹೆಗ್ಗುರುತಾಗಿ ರಾರಾಜಿಸಿದೆ. ಬ್ರೆಜಿಲ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 4.8 ಮಿಲಿಯನ್ USD (ಭಾರತೀಯ ರೂಪಾಯಿಗಳಲ್ಲಿ 40 ಕೋಟಿಗೆ ಸಮಾನ) ಗಳಿಸುವ ಮೂಲಕ ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಹಸುವಾಗಿ (Nelore Cattle Auction) ಇತಿಹಾಸ ನಿರ್ಮಿಸಿದೆ. ಈ ಹಸುವು ಜಾನುವಾರು ಉದ್ಯಮದಲ್ಲಿ ಉತ್ತಮ ಆನುವಂಶಿಕ ಗುಣಗಳ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಜೊತೆಗೆ ಅಸಾಧಾರಣ ಜಾನುವಾರು ತಳಿಶಾಸ್ತ್ರದಲ್ಲಿ ವೃದ್ಧಿಸುತ್ತಿರುವ ಮೌಲ್ಯವನ್ನು ಒತ್ತಿಹೇಳುತ್ತದೆ.

ಈ ನೆಲ್ಲೂರು ಹಸು ತಳಿಯು ಚಿತ್ರದಲ್ಲಿರುವಂತೆ ಪ್ರಕಾಶಮಾನವಾದ ಬಿಳಿ ತುಪ್ಪಳವನ್ನು ಹೊಂದಿದ್ದು, ಭುಜದ ಮೇಲಿರುವ ವಿಶಿಷ್ಟವಾದ ಗೂನು ಆಕೃತಿಗೆ ಹೆಸರುವಾಸಿಯಾಗಿದೆ. ಇದು ಆಂಧ್ರ ಪ್ರದೇಶದಲ್ಲಿ ಜನ್ಮ ಪಡೆದಿರುವುದು ಎಂಬುದು ಗಮನಾರ್ಹ. ಆದರೆ ಅದೀಗ ಬ್ರೆಜಿಲ್‌ನ ಅತ್ಯಂತ ಪ್ರಮುಖ ತಳಿಗಳಲ್ಲಿ ಒಂದಾಗಿದೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಹೆಸರನ್ನೇ ಈ ಈ ಜಾನುವಾರಿಗೂ ಇಡಲಾಗಿದ್ದು, ವೈಜ್ಞಾನಿಕವಾಗಿ ಬಾಸ್ ಇಂಡಿಕಸ್ ಎಂದು ವರ್ಗೀಕರಿಸಲಾಗಿದೆ. ಭಾರತದ ಮತ್ತೊಂದು ಸದೃಢ ವಂಶಸ್ಥ ಜಾನುವಾರು ಅಂದರೆ ಅದು ಒಂಗೋಲ್.

Viatina-19 FIV Mara Imóveis ಹೆಸರಿನ ಈ ನೆಲ್ಲೂರು ಹಸು ಕಳೆದ ವರ್ಷ ಹರಾಜಿನಲ್ಲಿ 35 ಕೋಟಿ ರೂಪಾಯಿ ಮೌಲ್ಯ ಪಡೆದಿತ್ತು. ಆಂಧ್ರ ಮೂಲದ ನೆಲ್ಲೂರು ತಳಿಯನ್ನು ಬ್ರೆಜಿಲ್ ದೇಶದಲ್ಲಿ ಸಂರಕ್ಷಿಸಿ, ತಳಿ ಅಭಿವೃದ್ಧಿ ಮಾಡಿ ಈ ಮೌಲ್ಯಕ್ಕೆ ತಂದಿದ್ದಾರೆ. ಬ್ರೆಜಿಲ್ ನಲ್ಲಿರುವ 23 ಕೋಟಿ ಹಸುಗಳಲ್ಲಿ ನೆಲ್ಲೂರು ತಳಿಯ 10 ಕೋಟಿ ಹಸುಗಳಿವೆ! ಅಲ್ಲಿ ಇದು ಮಾಂಸದ ತಳಿ. ಗುಜರಾತ್ ಮೂಲದ ಗೀರ್ ತಳಿ ಕೂಡ ಬ್ರೆಜಿಲ್ ನಲ್ಲಿ ಮಾಂಸಕ್ಕಾಗಿ ಜನಪ್ರಿಯ. ಈ Mara Imoveis ಸಂತಾನ ಅಭಿವೃದ್ಧಿ ಕೆಲಸಕ್ಕೆ ಮೀಸಲು. ಭಾರತದ ಸಂವಿಧಾನದಲ್ಲೇ ದೇಸಿ ತಳಿ ಸಂರಕ್ಷಿಸಿ ಅಂತ ಬರೆದಿದ್ದಾರೆ. ಇನ್ನು ಭಾರತದ ತಳಿಗಳು ಬ್ರೆಜಿಲ್, ಅರ್ಜೆಂಟಿನ ಮುಂತಾದ ದೇಶಗಳಲ್ಲಿ ಸಂರಕ್ಷಣೆ-ಅಭಿವೃದ್ಧಿ ಆಗ್ತಿರೋದು ಅಲ್ಲಿನ ಸಂವಿಧಾನದ ನಿರ್ದೇಶನದಿಂದವೇ ಹೊರತು, ಧಾರ್ಮಿಕ ನಂಬಿಕೆಗಳಿಂದಲ್ಲ ಎಂಬುದು ಗಮನಾರ್ಹ.

1868 ರಲ್ಲಿ ಮೊದಲ ಬಾರಿಗೆ ಬ್ರೆಜಿಲ್‌ನಲ್ಲಿ ಓಂಗೋಲ್ ಜೋಡಿಯನ್ನು ಪರಿಚಯ ಮಾಡಲಾಗಿ, ಅದು ಆ ದೇಶದಲ್ಲಿ ತಳಿಯ ಪ್ರಸರಣಕ್ಕೆ ನಾಂದಿಯಾಯಿತು. ನಂತರವೂ ಸಾಗಿಸಲಾದ ಈ ಹಸುಗಳು ಮುಂದೆ ಅದರ ಅಸ್ತಿತ್ವವನ್ನು ಮತ್ತಷ್ಟು ಹೆಚ್ಚಿಸಿದವು. ನೆಲ್ಲೂರು ತಳಿಯು ಬಿಸಿ ತಾಪಮಾನದಲ್ಲಿ ಅಭಿವೃದ್ಧಿ ಹೊಂದುವ ಸಾಮರ್ಥ್ಯ ಹೊಂದಿದೆ. ಅದರ ಪರಿಣಾಮಕಾರಿ ಚಯಾಪಚಯ ಮತ್ತು ಪರಾವಲಂಬಿ ಸೋಂಕುಗಳಿಗೆ ಪ್ರತಿರೋಧವನ್ನು ಹೊಂದಿದೆ. ಹಾಗಾಗಿ ಜಾನುವಾರು ಸಾಕಣೆದಾರರಿಂದ ಇದಕ್ಕೆ ಹೆಚ್ಚು ಬೇಡಿಕೆಯಿದೆ. Viatina-19 FIV Mara Imóveis ಈ ಅಪೇಕ್ಷಣೀಯ ಲಕ್ಷಣಗಳನ್ನು ಹೊಂದಿದೆ. ತನ್ನ ಆನುವಂಶಿಕ ಪ್ರಯೋಜನಗಳನ್ನು ಇದರಿಂದ ಹೆಚ್ಚಿಸಲು ಸಾಕಲಾಗುತ್ತಿದೆ.

Also Read: ಮೊಬೈಲ್​​ ತೆಗೆಯಲು ಹೋಗಿ 36 ಗಂಟೆಗಳ ಕಾಲ ಚರಂಡಿಯೊಳಗೆ ಸಿಲುಕಿಕೊಂಡ ವ್ಯಕ್ತಿ

Viatina-19 FIV Mara Imóveis ತಳಿಯ ಮಹತ್ವವು ಅದರ ವೈಯಕ್ತಿಕ ಮೌಲ್ಯವನ್ನು ಮೀರಿ ವಿಸ್ತರಿಸುತ್ತದೆ. ಭ್ರೂಣಗಳು ಮತ್ತು ವೀರ್ಯದ ರೂಪದಲ್ಲಿ ಅದರ ಆನುವಂಶಿಕ ಸಂತತಿಯನ್ನು ಉತ್ಪಾದಿಸುವ ನಿರೀಕ್ಷೆಯಿದೆ. ನೆಲ್ಲೂರು ತಳಿಯ ಒಟ್ಟಾರೆ ಸುಧಾರಣೆಗೆ ಇದು ಕೊಡುಗೆ ನೀಡುತ್ತದೆ. ಈ ನಿರೀಕ್ಷೆಯು ಹರಾಜಿನಲ್ಲಿ ಅದು ದಾಖಲೆಯ ಬೆಲೆ ಗಳಿಸಿರುವುದು ಸಾದರಪಡಿಸುತ್ತದೆ.

Viatina-19 FIV Mara Imóveis ತಳಿಯ ಈ ಹೆಚ್ಚಿನ ಬೆಲೆಯು ಅಂತರರಾಷ್ಟ್ರೀಯ ಜಾನುವಾರು ಮಾರುಕಟ್ಟೆಯ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ. ಜೊತೆಗೆ ತಳಿಯ ಮೌಲ್ಯವನ್ನೂ ಒತ್ತಿಹೇಳುತ್ತಿದ್ದು, ವಿಶ್ವಾದ್ಯಂತ ಅದರ ಖ್ಯಾತಿಯನ್ನು ಹೆಚ್ಚಿಸುತ್ತದೆ. ನೆಲ್ಲೂರು ಹಸುಗಳು ಈಗಾಗಲೇ ಬ್ರೆಜಿಲ್‌ನ ಒಟ್ಟು ಹಸುವಿನ ಜನಸಂಖ್ಯೆಯ ಶೇ. 80 ರಷ್ಟನ್ನು ಒಳಗೊಂಡಿದೆ. ಕಳಪೆ-ಗುಣಮಟ್ಟದ ಮೇವಿನ ಮೇಲೆ ಅಭಿವೃದ್ಧಿ ಹೊಂದುವ ಸಾಮರ್ಥ್ಯ ಮತ್ತು ಅವುಗಳ ಸಂತಾನೋತ್ಪತ್ತಿಯ ಸುಲಭತೆಯಿಂದಾಗಿ, ಬ್ರೆಜಿಲ್‌ನ ವಿವಿಧ ಹವಾಮಾನಗಳಲ್ಲಿ ಸಾಕಣೆದಾರರಿಗೆ ಈ ತಳಿಯು ಪ್ರಾಯೋಗಿಕ ಆಯ್ಕೆಯಾಗಿದೆ ಎಂಬುದು ಗಮನಾರ್ಹವಾಗಿದೆ.

 ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:03 am, Wed, 27 March 24

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು