ಇರಾನ್​ನ ಬೃಹತ್ ಬಂದರಿನಲ್ಲಿ ಭಾರೀ ಸ್ಫೋಟ; 500ಕ್ಕೂ ಹೆಚ್ಚು ಜನರಿಗೆ ಗಾಯ

ಇರಾನ್‌ನ ಬೃಹತ್ ಬಂದರಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಸ್ಫೋಟದಲ್ಲಿ ಹಲವರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇಂದು ಇರಾನಿನ ಪ್ರಮುಖ ಬಂದರಿನಲ್ಲಿ ಹಲವಾರು ಕಂಟೇನರ್‌ಗಳು ಸ್ಫೋಟಗೊಂಡು ಭಾರಿ ಸ್ಫೋಟ ಮತ್ತು ಬೆಂಕಿ ಅವಘಡ ಸಂಭವಿಸಿದೆ. ಇದರಿಂದಾಗಿ 500 ಜನರು ಗಾಯಗೊಂಡಿದ್ದಾರೆ. ಬಂದರು ಪ್ರದೇಶದಿಂದ ದಟ್ಟ ಹೊಗೆ ಬರುತ್ತಿರುವುದನ್ನು ವಿಡಿಯೋಗಳಲ್ಲಿ ನೋಡಬಹುದು.

ಇರಾನ್​ನ ಬೃಹತ್ ಬಂದರಿನಲ್ಲಿ ಭಾರೀ ಸ್ಫೋಟ; 500ಕ್ಕೂ ಹೆಚ್ಚು ಜನರಿಗೆ ಗಾಯ
Iran Blast

Updated on: Apr 26, 2025 | 6:01 PM

ನವದೆಹಲಿ, ಏಪ್ರಿಲ್ 26: ಇರಾನ್‌ನ (Iran) ಬಂದರ್ ಅಬ್ಬಾಸ್ ನಗರದ ಶಾಹಿದ್ ರಾಜೀ ಬಂದರಿನಲ್ಲಿ ಇಂದು ಅಂದರೆ ಏಪ್ರಿಲ್ 26ರಂದು ಸಂಭವಿಸಿದ ಭಾರಿ ಸ್ಫೋಟದ ನಂತರ 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ನ ಬಂದರ್ ಅಬ್ಬಾಸ್ ನಗರದ ಶಾಹಿದ್ ರಾಜೀ ಬಂದರಿನಲ್ಲಿ ಸಂಭವಿಸಿದ ಬೃಹತ್ ಸ್ಫೋಟದಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಅಗ್ನಿಶಾಮಕ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಬಂದರು ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಯಿತು. ಅರೆ-ಅಧಿಕೃತ ತಸ್ನಿಮ್ ಸುದ್ದಿ ಸಂಸ್ಥೆ ಈ ಘಟನೆಯಲ್ಲಿ ಅನೇಕ ಜನರು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ. “ಶಾಹಿದ್ ರಾಜೀ ಬಂದರು ವಾರ್ಫ್ ಪ್ರದೇಶದಲ್ಲಿ ಸಂಗ್ರಹಿಸಲಾಗಿದ್ದ ಹಲವಾರು ಕಂಟೇನರ್‌ಗಳು ಸ್ಫೋಟಗೊಂಡಿದ್ದು ಈ ಘಟನೆಗೆ ಕಾರಣ. ನಾವು ಗಾಯಾಳುಗಳನ್ನು ಸ್ಥಳಾಂತರಿಸುತ್ತಿದ್ದೇವೆ ಮತ್ತು ಆಸ್ಪತ್ರೆಗಳಿಗೆ ವರ್ಗಾಯಿಸುತ್ತಿದ್ದೇವೆ” ಎಂದು ಸ್ಥಳೀಯ ಬಿಕ್ಕಟ್ಟು ನಿರ್ವಹಣಾ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು
ಮದುವೆ ಮನೆಗಳಲ್ಲಿ ಇನ್ಮುಂದೆ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆ ಮಾಡುವಂತಿಲ್ಲ


ಇದನ್ನೂ ಓದಿ: ಕ್ಷಿಪಣಿಗಳೂ ಅಲ್ಲ, ಬಾಂಬ್‌ಗಳೂ ಅಲ್ಲ; ಈ ಒಂದು ತಪ್ಪು ಇರಾನ್ ನಾಶಕ್ಕೆ ಕಾರಣವಾಗಬಹುದು!

ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿಯ ಪ್ರಕಾರ, ಬಂದರು ಟೆಹ್ರಾನ್‌ನಿಂದ ಆಗ್ನೇಯಕ್ಕೆ ಸುಮಾರು 1,050 ಕಿಲೋಮೀಟರ್ ದೂರದಲ್ಲಿ, ಹಾರ್ಮುಜ್ ಜಲಸಂಧಿಯ ಉದ್ದಕ್ಕೂ ಇದೆ. ಜಾಗತಿಕ ತೈಲ ವ್ಯಾಪಾರದ ಶೇ. 20ರಷ್ಟು ಇದರ ಮೂಲಕ ಹಾದುಹೋಗುತ್ತದೆ. ಸ್ಫೋಟದ ಸ್ಥಳದಿಂದ ದೊಡ್ಡ ಪ್ರಮಾಣದಲ್ಲಿ ಹೊಗೆ ಹೊರಬರುತ್ತಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ.

ಈ ಸ್ಫೋಟದ ಕಾರಣವನ್ನು ಇನ್ನೂ ಖಚಿತಪಡಿಸಿಕೊಳ್ಳಬೇಕಾಗಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ