ಪಾಕಿಸ್ತಾನ: ಖೈಬರ್ ಫಖ್ತುಂಖ್ವಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ, 9 ಪಾಕ್ ಸೈನಿಕರು ಸಾವು, 17 ಮಂದಿಗೆ ಗಾಯ

|

Updated on: Sep 01, 2023 | 8:29 AM

ಪಾಕಿಸ್ತಾನದ ಖೈಬರ್ ಫಖ್ತುಂಖ್ವಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 9 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿದ್ದಾರೆ. ಮಾಲಿ ಖೇಲ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಬೆಂಗಾವಲು ಪಡೆಗಳ ಬಳಿ ಮೋಟಾರುಬೈಕಿನಲ್ಲಿ ಬಂದಿದ್ದ ವ್ಯಕ್ತಿ ಆತ್ಮಾಹುತಿ ಬಾಂಬ್ ಸ್ಫೋಟಗೊಳಿಸಿದ್ದಾನೆ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನ ಟೆಲಿಗ್ರಾಫ್ ವರದಿ ಮಾಡಿದೆ. ಪಾಕಿಸ್ತಾನದ ಉಸ್ತುವಾರಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಅವರು ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ: ಖೈಬರ್ ಫಖ್ತುಂಖ್ವಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ, 9 ಪಾಕ್ ಸೈನಿಕರು ಸಾವು, 17 ಮಂದಿಗೆ ಗಾಯ
ಬಾಂಬ್ ಸ್ಫೋಟ
Follow us on

ಪಾಕಿಸ್ತಾನದ ಖೈಬರ್ ಫಖ್ತುಂಖ್ವಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 9 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿದ್ದಾರೆ. ಮಾಲಿ ಖೇಲ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಬೆಂಗಾವಲು ಪಡೆಗಳ ಬಳಿ ಮೋಟಾರುಬೈಕಿನಲ್ಲಿ ಬಂದಿದ್ದ ವ್ಯಕ್ತಿ ಆತ್ಮಾಹುತಿ ಬಾಂಬ್ ಸ್ಫೋಟಗೊಳಿಸಿದ್ದಾನೆ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನ ಟೆಲಿಗ್ರಾಫ್ ವರದಿ ಮಾಡಿದೆ. ಪಾಕಿಸ್ತಾನದ ಉಸ್ತುವಾರಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಅವರು ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಒಂದು ತಿಂಗಳ ಅವಧಿಯಲ್ಲಿ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಜುಲೈ 30 ರಂದು, ರಾಜಕೀಯ ಪಕ್ಷದ ಸಭೆಯಲ್ಲಿ ಆತ್ಮಹತ್ಯಾ ಬಾಂಬರ್ ಸ್ಫೋಟಗೊಂಡು ಕನಿಷ್ಠ 54 ಜನರು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 400 ಕ್ಕೂ ಹೆಚ್ಚು JUI-F ಸದಸ್ಯರು ಮತ್ತು ಬೆಂಬಲಿಗರು ಸಭೆಯಲ್ಲಿ ಭಾಗವಹಿಸಿದ್ದರು.

ಇತ್ತೀಚೆಗಷ್ಟೇ ಆಗಸ್ಟ್ 13ರಂದು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಚೀನಾದ ಇಂಜಿನಿಯರ್​ಗಳನ್ನು ಹೊತ್ತೊಯ್ಯುತ್ತಿದ್ದ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ನಾಲ್ವರು ಚೀನಾದ ನಾಗರಿಕರು ಮತ್ತು 9 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದರು.

ಮತ್ತಷ್ಟು ಓದಿ: Pulwama Type Attack: ಪುಲ್ವಾಮಾ ದಾಳಿಯ 10 ದಿನಗಳ ಬಳಿಕ ಅಂಥದ್ದೇ ಮತ್ತೊಂದು ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು

2022 ರಿಂದ, ಪಾಕಿಸ್ತಾನಿ ತಾಲಿಬಾನ್ ಪಾಕ್ ಭದ್ರತಾ ಪಡೆಗಳ ಮೇಲೆ ಅನೇಕ ದಾಳಿಗಳನ್ನು ನಡೆಸಿದೆ. ಈ ಆತ್ಮಾಹುತಿ ದಾಳಿಯಲ್ಲೂ ಪಾಕಿಸ್ತಾನಿ ತಾಲಿಬಾನ್ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಇದುವರೆಗೂ ಪಾಕಿಸ್ತಾನ ಸೇನೆಯಿಂದ ಯಾವುದೇ ಹೇಳಿಕೆ ಬಹಿರಂಗವಾಗಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ