Sign In

By signing in or creating an account, you agree with Associated Broadcasting Company's Terms & Conditions and Privacy Policy.

'ಸಪ್ತ ಸಾಗರದಾಚೆ ಎಲ್ಲೋ' ನಾಯಕಿ ನಟನೆಗೆ ಭರಪೂರ ಪ್ರಶಂಸೆ: ರುಕ್ಮಿಣಿ ವಸಂತ್ ಹೇಳಿದ್ದು ಹೀಗೆ

‘ಸಪ್ತ ಸಾಗರದಾಚೆ ಎಲ್ಲೋ’ ನಾಯಕಿ ನಟನೆಗೆ ಭರಪೂರ ಪ್ರಶಂಸೆ: ರುಕ್ಮಿಣಿ ವಸಂತ್ ಹೇಳಿದ್ದು ಹೀಗೆ

ಮಂಜುನಾಥ ಸಿ.
|

Updated on: Sep 01, 2023 | 9:43 PM

Rukmini Vasanth: 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಇಂದು (ಸೆಪ್ಟೆಂಬರ್ 01) ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ಗಳಿಸುತ್ತಿದೆ. ಅದರಲ್ಲಿಯೂ ಸಿನಿಮಾದ ನಾಯಕಿ ರುಕ್ಮಿಣಿ ವಸಂತ್​ರ ನಟನೆಯನ್ನು ಸಿನಿಮಾ ನೋಡಿದ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಸ್ವತಃ ರುಕ್ಮಿಣಿ ವಸಂತ್ ಮಾತನಾಡಿದ್ದಾರೆ.

ರಕ್ಷಿತ್ ಶೆಟ್ಟಿ (Rakshit Shetty) ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಇಂದು (ಸೆಪ್ಟೆಂಬರ್ 1) ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಗಳಿಸಿದೆ. ಸಿನಿಮಾ ನೋಡಿದವರು ಪ್ರೇಮದ ನವಿರತೆಯನ್ನು ತೋರಿಸಿರುವ ವಿಧಾನವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ಹೊಗಳುವ ಜೊತೆಗೆ ನಾಯಕಿ ಪಾತ್ರದಲ್ಲಿ ನಟಿಸಿರುವ ರುಕ್ಮಿಣಿ ವಸಂತ್​ರ ಅಭಿನಯವನ್ನು ಹೆಚ್ಚಾಗಿ ಕೊಂಡಾಡುತ್ತಿದ್ದಾರೆ. ನಟ ರಿಷಬ್ ಶೆಟ್ಟಿಯಂತೂ ರುಕ್ಮಿಣಿ ಕನ್ನಡ ಚಿತ್ರರಂಗದ ಆಸ್ತಿ ಎಂದಿದ್ದಾರೆ. ತಮ್ಮ ಪಾತ್ರಕ್ಕೆ ಸಿಗುತ್ತಿರುವ ಮೆಚ್ಚುಗೆ ಬಗ್ಗೆ ನಟಿ ರುಕ್ಮಿಣಿ ವಸಂತ್ ಖುಷಿಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ