ಜಿ-20 ಶೃಂಗಸಭೆಗೆ ಮುಂಚಿತವಾಗಿ ಭಾರತದೊಂದಿಗೆ ವ್ಯಾಪಾರ ಮಾತುಕತೆಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಕೆನಡಾ

ಭಾರತದೊಂದಿಗಿನ ಆರಂಭಿಕ ಪ್ರಗತಿ ವ್ಯಾಪಾರ ಒಪ್ಪಂದದ ಕುರಿತು ನಡೆಯುತ್ತಿರುವ ವೇಗದ ಗತಿಯ ಮಾತುಕತೆಗಳಿಗೆ ಕೆನಡಾದ ಕಡೆಯವರು ಸದ್ಯ ವಿರಾಮ ಸೂಚಿಸಿದ್ದಾರೆ ಎಂದು ಸಂಜಯ್ ಕುಮಾರ್ ವರ್ಮಾ ಇಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ನಿಖರವಾದ ಕಾರಣ ಬಗ್ಗೆ ನನಗೆ ತಿಳಿದಿಲ್ಲವಾದರೂ, ಈ ರೀತಿ ತಾತ್ಕಾಲಿಕ ಸ್ಥಗಿತ ಮಧ್ಯಸ್ಥಗಾರರೊಂದಿಗೆ ಹೆಚ್ಚಿನ ಸಮಾಲೋಚನೆಗಳನ್ನು ಅನುಮತಿಸುತ್ತದೆ ಎಂದು ಹೇಳಿದೆ.

ಜಿ-20 ಶೃಂಗಸಭೆಗೆ ಮುಂಚಿತವಾಗಿ ಭಾರತದೊಂದಿಗೆ ವ್ಯಾಪಾರ ಮಾತುಕತೆಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಕೆನಡಾ
ಜಸ್ಟಿನ್ ಟ್ರುಡೊ- ಮೋದಿ
Follow us
ರಶ್ಮಿ ಕಲ್ಲಕಟ್ಟ
| Updated By: Digi Tech Desk

Updated on:Sep 05, 2023 | 10:49 AM

ದೆಹಲಿ ಸೆಪ್ಟಂಬರ್ 02: ಕೆನಡಾದ (Canada) ಜಸ್ಟಿನ್ ಟ್ರುಡೊ(Justin Trudeau) ಅವರ ಸರ್ಕಾರವು ಕಳೆದ ತಿಂಗಳು ಭಾರತದೊಂದಿಗೆ ವ್ಯಾಪಾರ ಮಾತುಕತೆಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಿದೆ. ಕೆನಡಾದ ನಾಯಕ 20 ನಾಯಕರ ಶೃಂಗಸಭೆಗಾಗಿ (G 20 Summit) ದೆಹಲಿಗೆ ಪ್ರಯಾಣಿಸಲು ತಯಾರಿ ನಡೆಸುತ್ತಿದ್ದಾರೆ. ಟ್ರುಡೊ ಸರ್ಕಾರ ವ್ಯಾಪಾರ ಮಾತುಕತೆಯನ್ನು ಸದ್ಯ ನಿಲ್ಲಿಸಿದೆ ಎಂದು ಕೆನಡಾದಲ್ಲಿರುವ ಭಾರತದ ಹೈ ಕಮಿಷನರ್ ದೃಢಪಡಿಸಿದ್ದು, ಇದನ್ನು ಕೆನಡಿಯನ್ ಪ್ರೆಸ್ ಶುಕ್ರವಾರ ವರದಿ ಮಾಡಿದೆ.

ಭಾರತದೊಂದಿಗಿನ ಆರಂಭಿಕ ಪ್ರಗತಿ ವ್ಯಾಪಾರ ಒಪ್ಪಂದದ ಕುರಿತು ನಡೆಯುತ್ತಿರುವ ವೇಗದ ಗತಿಯ ಮಾತುಕತೆಗಳಿಗೆ ಕೆನಡಾದ ಕಡೆಯವರು ಸದ್ಯ ವಿರಾಮ ಸೂಚಿಸಿದ್ದಾರೆ ಎಂದು ಸಂಜಯ್ ಕುಮಾರ್ ವರ್ಮಾ ಇಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ನಿಖರವಾದ ಕಾರಣ ಬಗ್ಗೆ ನನಗೆ ತಿಳಿದಿಲ್ಲವಾದರೂ, ಈ ರೀತಿ ತಾತ್ಕಾಲಿಕ ಸ್ಥಗಿತ ಮಧ್ಯಸ್ಥಗಾರರೊಂದಿಗೆ ಹೆಚ್ಚಿನ ಸಮಾಲೋಚನೆಗಳನ್ನು ಅನುಮತಿಸುತ್ತದೆ ಎಂದು ಹೇಳಿದೆ.

ವ್ಯಾಪಾರ ಮಾತುಕತೆಗಳು ದೀರ್ಘವಾಗಿವೆ. ಸಂಕೀರ್ಣ ಪ್ರಕ್ರಿಯೆಗಳು ಇದರಲ್ಲಿರುತ್ತವೆ. ಕೆನಡಾ ಸದ್ಯ ಇದನ್ನು ನಿಲ್ಲಿಸಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಟ್ರುಡೊ ಅವರ ಮುಂಬರುವ ಭಾರತ ಪ್ರವಾಸದ ಕುರಿತು ಸುದ್ದಿಗೋಷ್ಠಿಯ ವೇಳೆ  ತಿಳಿಸಿದ್ದಾರೆ. ಇವರು ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಮೇ ತಿಂಗಳಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಒಟ್ಟಾವಾಗೆ ಭೇಟಿ ನೀಡಿದ್ದು, ಅಲ್ಲಿ ಎರಡೂ ಕಡೆಯವರು ಈ ಒಪ್ಪಂದ ಬಗ್ಗೆ ಆಶಾವಾದ ವ್ಯಕ್ತ ಪಡಿಸಿದ್ದರು. ಆರಂಭಿಕ ಪ್ರಗತಿ ಒಪ್ಪಂದಕ್ಕೆ ಸಹಿ ಹಾಕಲು ಅವರು ಹತ್ತಿರವಾಗುತ್ತಿದ್ದಾರೆ ಎಂದು ಕೆನಡಾದ ವ್ಯಾಪಾರ ಸಚಿವ ಮ್ಯಾರಿ ಎನ್‌ಜಿ ಹೇಳಿದ್ದಾರೆ. ಆರಂಭಿಕ ಒಪ್ಪಂದವು ಆರ್ಥಿಕ ವ್ಯಾಪಿ ಒಪ್ಪಂದಕ್ಕಿಂತ ಹೆಚ್ಚಾಗಿ ಕೆಲವು ಕೈಗಾರಿಕೆಗಳ ಮೇಲೆ ಕೇಂದ್ರೀಕರಿಸುತ್ತದೆ.

ಕೆನಡಾ ಒಂದು ದಶಕದ ಹಿಂದೆ ಭಾರತದೊಂದಿಗೆ ಮಧ್ಯಂತರ ವ್ಯಾಪಾರ ಮಾತುಕತೆಗಳನ್ನು ಹೊಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಟ್ರುಡೊ ಸರ್ಕಾರವು ಚೀನಾದಿಂದ ತನ್ನ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ತನ್ನ ಪ್ರಯತ್ನಗಳನ್ನು ಹೆಚ್ಚಿಸಿದೆ. ಭಾರತದೊಂದಿಗಿನ ವ್ಯಾಪಾರ ಒಪ್ಪಂದವು ವಿಶಾಲವಾದ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಭಾಗವಾಗಿದೆ.

ಇದನ್ನೂ ಓದಿ: ಆದಿತ್ಯ ಎಲ್​1 ಯಶಸ್ವಿ ಉಡಾವಣೆ: ಇಸ್ರೋ ಮುಖ್ಯಸ್ಥ ಸೋಮನಾಥ್ ಮಾಹಿತಿ, ಪ್ರಧಾನಿ ಮೋದಿ ಅಭಿನಂದನೆ

ಕೆನಡಾ ಭಾರತದ ಹೊರಗಿನ ಅತಿದೊಡ್ಡ ಸಿಖ್ ಜನಸಂಖ್ಯೆಯನ್ನು ಒಳಗೊಂಡಂತೆ ವಿಶಾಲವಾದ ಭಾರತೀಯ ಸಮುದಾಯಕ್ಕೆ ನೆಲೆಯಾಗಿದ್ದು, ಧಾರ್ಮಿಕ ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ಗೌರವಿಸುವ ಭಾರತದ ಮೇಲೆ ವ್ಯಾಪಾರ ಒಪ್ಪಂದವನ್ನು ಉತ್ಸುಕವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಈ ವರ್ಷ ಜಿ-20 ಅಧ್ಯಕ್ಷರಾಗಿದ್ದಾರೆ. ಟ್ರುಡೊ ಮುಂದಿನ ವಾರಾಂತ್ಯದಲ್ಲಿ ನಾಯಕರ ಶೃಂಗಸಭೆಗಾಗಿ ನವದೆಹಲಿಗೆ ಪ್ರಯಾಣಿಸಲು ಸಿದ್ಧರಾಗಿದ್ದಾರೆ. ಆದರೆ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಟ್ರುಡೊ ಅವರು ಪ್ರಧಾನಿ ಮೋದಿಯವರೊಂದಿಗೆ ಮಾನವ ಹಕ್ಕುಗಳ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆಯೇ ಪ್ರಶ್ನೆಗೆ, ಅವರು ವಿಶ್ವದ ಪ್ರತಿಯೊಬ್ಬ ಪಾಲುದಾರರೊಂದಿಗೆ ಅಂತಹ ಕಳವಳವನ್ನು ವ್ಯಕ್ತಪಡಿಸುತ್ತಾರೆ ಎಂದು ಸರ್ಕಾರಿ ಅಧಿಕಾರಿ ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:48 pm, Sat, 2 September 23

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?