Breaking: ಪಾಕ್​: ಜಾಕೋಬಾಬಾದ್​​ನ ಹಳಿಯಲ್ಲಿ ಬಾಂಬ್ ಸ್ಫೋಟ, ಹಳಿ ತಪ್ಪಿದ ಜಾಫರ್ ಎಕ್ಸ್​ಪ್ರೆಸ್​

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಜಾಕೋಬಾಬಾದ್​ನ ಹಳಿಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಜಾಫರ್ ಎಕ್ಸ್​ಪ್ರೆಸ್ ರೈಲು ಹಳಿ ತಪ್ಪಿದೆ. ಪ್ರಯಾಣಿಕ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿವೆ ಎಂದು 24ನ್ಯೂಸ್ ಎಚ್‌ಡಿ ಟಿವಿ ಚಾನೆಲ್ ವರದಿ ಮಾಡಿದೆ.ಪಂಜಾಬ್‌ನಿಂದ ಕ್ವೆಟ್ಟಾಗೆ ಹೋಗುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಹಳಿ ತಪ್ಪಿದೆ. ಆದರೆ ಯಾವುದೇ ಜೀವಹಾನಿ ಂಭವಿಸಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಘಟನೆಯ ನಂತರ, ಸ್ಥಳೀಯ ಪೊಲೀಸರು, ರೈಲ್ವೆ ಪೊಲೀಸರು ಮತ್ತು ರೈಲ್ವೆ ನಿರ್ವಹಣಾ ವಿಭಾಗದ ಹಿರಿಯ ಅಧಿಕಾರಿಗಳು ಘಟನೆಯ ತನಿಖೆ ನಡೆಸಲು ತ್ವರಿತವಾಗಿ ಸ್ಥಳಕ್ಕೆ ಆಗಮಿಸಿದರು.

Breaking: ಪಾಕ್​: ಜಾಕೋಬಾಬಾದ್​​ನ ಹಳಿಯಲ್ಲಿ ಬಾಂಬ್ ಸ್ಫೋಟ, ಹಳಿ ತಪ್ಪಿದ ಜಾಫರ್ ಎಕ್ಸ್​ಪ್ರೆಸ್​
ಜಾಫರ್ ಎಕ್ಸ್​ಪ್ರೆಸ್-ಸಾಂದರ್ಭಿಕ ಚಿತ್ರ
Image Credit source: Wikipedia

Updated on: Jun 18, 2025 | 12:27 PM

ಇಸ್ಲಾಮಾಬಾದ್, ಜೂನ್ 18: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಜಾಕೋಬಾಬಾದ್​ನ ಹಳಿಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಜಾಫರ್ ಎಕ್ಸ್​ಪ್ರೆಸ್ ರೈಲು ಹಳಿ ತಪ್ಪಿದೆ. ಪ್ರಯಾಣಿಕ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿವೆ ಎಂದು 24ನ್ಯೂಸ್ ಎಚ್‌ಡಿ ಟಿವಿ  ವರದಿ ಮಾಡಿದೆ. ಪಂಜಾಬ್‌ನಿಂದ ಕ್ವೆಟ್ಟಾಗೆ ಹೋಗುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಹಳಿ ತಪ್ಪಿದೆ.

ಆದರೆ ಯಾವುದೇ ಜೀವಹಾನಿ ಸಂಭವಿಸಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಘಟನೆಯ ನಂತರ, ಸ್ಥಳೀಯ ಪೊಲೀಸರು, ರೈಲ್ವೆ ಪೊಲೀಸರು ಮತ್ತು ರೈಲ್ವೆ ನಿರ್ವಹಣಾ ವಿಭಾಗದ ಹಿರಿಯ ಅಧಿಕಾರಿಗಳು ಘಟನೆಯ ತನಿಖೆ ನಡೆಸಲು ತ್ವರಿತವಾಗಿ ಸ್ಥಳಕ್ಕೆ ಆಗಮಿಸಿದರು.

ಮಾರ್ಚ್‌ನಲ್ಲಿ, ಪಾಕಿಸ್ತಾನವು ಜಾಫರ್ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲಿನ ಮೇಲೆ ಬಿಎಲ್‌ಎ ನಡೆಸಿದ ಘೋರ ಭಯೋತ್ಪಾದಕ ದಾಳಿಗೆ ತುತ್ತಾಗಿತ್ತು. ಇದರಲ್ಲಿ ಬಲೂಚಿಸ್ತಾನದಲ್ಲಿ ಒತ್ತೆಯಾಳುಗಳನ್ನು ಸೆರೆಹಿಡಿಯಲಾಯಿತು, ಇದರ ಪರಿಣಾಮವಾಗಿ ಕನಿಷ್ಠ 30 ಅಮಾಯಕ ಪಾಕಿಸ್ತಾನಿ ಪ್ರಜೆಗಳು ಸಾವನ್ನಪ್ಪಿದ್ದರು.

ಜೂನ್ 13 ರಂದು, ಪೇಶಾವರದಿಂದ ಬರುತ್ತಿದ್ದ ಕ್ವೆಟ್ಟಾಗೆ ಹೋಗುವ ಜಾಫರ್ ಎಕ್ಸ್‌ಪ್ರೆಸ್ ತಕ್ಷಶಿಲಾದ ಮಾರ್ಗಲ್ಲಾ ಸುರಂಗದ ಬಳಿ ಹಳಿತಪ್ಪಿತು, ಇದರಿಂದಾಗಿ ರಾವಲ್ಪಿಂಡಿ-ಪೇಶಾವರ ವಿಭಾಗದಲ್ಲಿ ರೈಲ್ವೆ ಸಂಚಾರ ಸ್ಥಗಿತಗೊಂಡಿತು. ಅಪಘಾತದಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

ರೈಲ್ವೆ ಅಧಿಕಾರಿಗಳ ಪ್ರಕಾರ, ಕ್ವೆಟ್ಟಾಗೆ 40-ಡೌನ್ ಜಾಫರ್ ಎಕ್ಸ್‌ಪ್ರೆಸ್ ತಾಂತ್ರಿಕ ಕಾರಣಗಳಿಂದ ಹಳಿತಪ್ಪಿತು, ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:22 pm, Wed, 18 June 25