ಲಾಹೋರ್: ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರ ಎನ್ನುವ ಹಣೆಪಟ್ಟಿ ಹೊತ್ತಿರುವ ಜೈಷ್-ಇ-ಮೊಹ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನನ್ನು ಜನವರಿ 18ರ ಒಳಗೆ ಬಂಧಿಸುವಂತೆ ಪಾಕಿಸ್ತಾನ ಕೋರ್ಟ್ ಪಂಜಾಬ್ ಪೊಲೀಸರಿಗೆ ಸೂಚನೆ ನೀಡಿದೆ.
ಉಗ್ರ ಚಟುವಟಿಕೆಗೆ ಹಣ ನೀಡಿದ ಆರೋಪದ ಮೇಲೆ ಭಯೋತ್ಪಾದನೆ ವಿರೋಧಿ ನ್ಯಾಯಾಲಯ (ಎಟಿಸಿ) ಅಜರ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಈ ಮೂಲಕ ಉಗ್ರ ಚಟುವಟಿಕೆಗೆ ಪಾಕಿಸ್ತಾನ ಕಡಿವಾಣ ಹಾಕಲು ಆರಂಭಿಸಿದೆ.
ಈ ಬಗ್ಗೆ ಕಠಿಣ ಸೂಚನೆ ಹೊರಡಿಸಿರುವ ಎಟಿಸಿ ಜಡ್ಜ್ ನಟಾಶ ನಸೀಮ್ ಸುಪ್ರಾ, ಜನವರಿ 18ರ ಒಳಗೆ ಮಸೂದ್ನನ್ನು ಬಂಧಿಸಿ. ಒಂದೊಮ್ಮೆ ಬಂಧಿಸಲು ವಿಫಲವಾದರೆ ನ್ಯಾಯಾಲಯವು ಅವನನ್ನು ಘೋಷಿತ ಅಪರಾಧಿ ಎಂದು ಹೇಳಲು ಕ್ರಮಗಳನ್ನು ಪ್ರಾರಂಭಿಸಬಹುದು ಎಂದಿದೆ.
ಭಾರತದಲ್ಲಿ ನಡೆದ ಸಾಕಷ್ಟು ಉಗ್ರ ಚಟುವಟಿಕೆಯಲ್ಲಿ ಈತನ ಕೈವಾಡ ಇದೆ. 2019ರ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಈತನೇ ಎಂದು ಹೇಳಲಾಗಿತ್ತು.
ಬಾಲ್ಕೋಟ್ ದಾಳಿಯಲ್ಲಿ 300ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ: ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ