ಪಾಕಿಸ್ತಾನದಲ್ಲಿ ಮಾಧ್ಯಮ ಸ್ವಾತಂತ್ರ್ಯವೇ ಇಲ್ಲ; ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಟೀಕೆ
ಅಮೆರಿಕ ಮತ್ತು ಇರಾನ್ ನಡುವೆ ಇತ್ತೀಚೆಗೆ ಸಹಿ ಮಾಡಲಾದ ಶಾಂತಿ ಎಂಒಯು (MoU) ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ವಿಳಂಬವಾದದ್ದಕ್ಕೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕಾರಣ ನೀಡಿದ್ದಾರೆ. ಪ್ರಮುಖವಾಗಿ ಪಾಕಿಸ್ತಾನದಂತಹ ದೇಶಗಳಲ್ಲಿ ಮುಕ್ತ ಮಾಧ್ಯಮ ಸ್ವಾತಂತ್ರ್ಯ ಇಲ್ಲದೇ ಇರುವುದು ಮತ್ತು ಮಾಹಿತಿ ಸೋರಿಕೆಯಾಗುವ ಭೀತಿಯೇ ಈ ವಿಳಂಬಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಮಾಧ್ಯಮ ಸ್ವಾತಂತ್ರ್ಯದ ವಿಷಯದಲ್ಲಿ ಅವರು ಪಾಕಿಸ್ತಾನವನ್ನು ಟೀಕಿಸಿರುವ ಅವರು ಪಾಕಿಸ್ತಾನದಲ್ಲಿ ಮಾಧ್ಯಮ ಸ್ವಾತಂತ್ರ್ಯವೇ ಇಲ್ಲ ಎಂದಿದ್ದಾರೆ.

ವಾಷಿಂಗ್ಟನ್, ಜೂನ್ 20: ಅಮೆರಿಕ ಮತ್ತು ಇರಾನ್ (Iran War) ನಡುವೆ ಇತ್ತೀಚೆಗೆ ಸಹಿ ಮಾಡಲಾದ 14 ಅಂಶಗಳ ತಾತ್ಕಾಲಿಕ ಒಪ್ಪಂದದ ವಿವರಗಳನ್ನು ಆರಂಭದಲ್ಲಿ ರಹಸ್ಯವಾಗಿಟ್ಟಿದ್ದರ ಕಾರಣವನ್ನು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ (JD Vance) ಬಹಿರಂಗಪಡಿಸಿದ್ದಾರೆ. “ಪಾಕಿಸ್ತಾನದಂತಹ ದೇಶಗಳಲ್ಲಿ ಮಾಧ್ಯಮಗಳಿಗೆ ಸ್ವಾತಂತ್ರ್ಯವಿಲ್ಲ. ಅಲ್ಲಿನ ಮಾಧ್ಯಮಗಳು ಸರ್ಕಾರದ ನಿಯಂತ್ರಣದಲ್ಲಿರುತ್ತವೆ. ಹೀಗಾಗಿ, ಸೂಕ್ಷ್ಮ ರಾಜತಾಂತ್ರಿಕ ಮಾತುಕತೆಗಳ ವಿವರಗಳು ಮುಂಚಿತವಾಗಿ ಸೋರಿಕೆಯಾಗಿ ಒಪ್ಪಂದ ಮುರಿದುಬೀಳಬಾರದು ಎಂಬ ಕಾರಣಕ್ಕೆ ವಿವರಗಳನ್ನು ಮುಚ್ಚಿಡಲಾಗಿತ್ತು” ಎಂದು ಜೆಡಿ ವ್ಯಾನ್ಸ್ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಅಮೆರಿಕ-ಇರಾನ್ ಒಪ್ಪಂದದ ರಹಸ್ಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜೆ.ಡಿ. ವ್ಯಾನ್ಸ್, ಜಾಗತಿಕ ರಾಜತಾಂತ್ರಿಕತೆಯ ಸೂಕ್ಷ್ಮತೆಗಳನ್ನು ವಿವರಿಸಿದ್ದಾರೆ. “ನಾವು ಇರಾನ್ ಜೊತೆ ಅತ್ಯಂತ ಸೂಕ್ಷ್ಮವಾದ ಮಾತುಕತೆ ನಡೆಸುತ್ತಿದ್ದೆವು. ಇಂತಹ ಸಮಯದಲ್ಲಿ ಒಪ್ಪಂದದ ಅಂಶಗಳು ಮುಂಚಿತವಾಗಿ ಮಾಧ್ಯಮಗಳಿಗೆ ಲೀಕ್ ಆಗಿದ್ದರೆ, ಇಡೀ ಪ್ರಕ್ರಿಯೆ ಹಳಿ ತಪ್ಪುವ ಅಪಾಯವಿತ್ತು. ಅದಕ್ಕಾಗಿಯೇ ಎಲ್ಲವೂ ಅಂತಿಮವಾಗುವವರೆಗೂ ವಿವರಗಳನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿತ್ತು” ಎಂದಿದ್ದಾರೆ.
ಇದನ್ನೂ ಓದಿ: ‘ಇರಾನ್ ಕತೆ ಮುಗಿಯಿತು, ಅವರಿಗೆ ಒಂದು ಪೈಸೆಯೂ ಸಿಗುವುದಿಲ್ಲ’; ಕಿಡಿಕಾರಿದ ಟ್ರಂಪ್
ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವಾಗ ಪಾಕಿಸ್ತಾನ ಮತ್ತು ಇತರ ಕೆಲವು ಇಸ್ಲಾಮಿಕ್ ರಾಷ್ಟ್ರಗಳ ಮಾಧ್ಯಮ ಸ್ವಾತಂತ್ರ್ಯವನ್ನು ಜೆಡಿ ವ್ಯಾನ್ಸ್ ಟೀಕಿಸಿದ್ದಾರೆ. “ಪಾಕಿಸ್ತಾನದಂತಹ ದೇಶಗಳಲ್ಲಿ ಅಮೆರಿಕ ಅಥವಾ ಇತರ ಪಾಶ್ಚಿಮಾತ್ಯ ದೇಶಗಳಂತೆ ಮಾಧ್ಯಮಗಳಿಗೆ ಸ್ವಾತಂತ್ರ್ಯವಿಲ್ಲ. ಅಲ್ಲಿ ಮಾಧ್ಯಮಗಳು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಎಲ್ಲವನ್ನೂ ಅಲ್ಲಿನ ಸರ್ಕಾರ ಅಥವಾ ವ್ಯವಸ್ಥೆಯೇ ನಿಯಂತ್ರಿಸುತ್ತದೆ. ಇಂತಹ ಪರಿಸರದಲ್ಲಿ ಮುಕ್ತ ಚರ್ಚೆಗಿಂತ ಸರ್ಕಾರದ ನಿರೂಪಣೆಗಳೇ ಹೆಚ್ಚು ಪ್ರಚಾರ ಪಡೆಯುತ್ತವೆ. ಇಂತಹ ಸೂಕ್ಷ್ಮ ವಲಯಗಳಲ್ಲಿ ನಮ್ಮ ರಾಜತಾಂತ್ರಿಕ ನಡೆಗಳನ್ನು ಅತಿ ಜಾಗರೂಕತೆಯಿಂದ ಇಡಬೇಕಾಗುತ್ತದೆ” ಎಂದು ಹೇಳಿದ್ದಾರೆ.
US Vice President JD Vance says Pakistan does NOT quite have PRESS FREEDOM.
Another heartburn for piddis pic.twitter.com/3nxyvVpdEt
— Sunny Raj (@SunnyRajBJP) June 20, 2026
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಆಡಳಿತದ ನಡುವೆ ಇತ್ತೀಚೆಗೆ ಕದನ ವಿರಾಮ ಮತ್ತು ಯುರೇನಿಯಂ ಪುಷ್ಟೀಕರಣ ನಿಯಂತ್ರಣದ ಕುರಿತು ಪ್ರಾಥಮಿಕ ಒಪ್ಪಂದ (MOU) ಏರ್ಪಟ್ಟಿದೆ. ಯುದ್ಧದಿಂದ ಕಂಗೆಟ್ಟಿರುವ ಇರಾನ್ ದೇಶ ಅಮೆರಿಕ ವಿಧಿಸಿರುವ ಕಠಿಣ ಆರ್ಥಿಕ ನಿರ್ಬಂಧಗಳಿಂದ ಮುಕ್ತಿ ಪಡೆಯಲು ಈ ಮಾತುಕತೆಗೆ ಒಪ್ಪಿಕೊಂಡಿದೆ.
ಇದನ್ನೂ ಓದಿ: ಟ್ರಂಪ್ ಭೇಟಿ ವಿಚಾರ; ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ ನಾಯಕ ಶಶಿ ತರೂರ್
ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ತಗ್ಗಿಸಲು ಮತ್ತು ಹೆಜ್ಬೊಲ್ಲಾ ಸೇರಿದಂತೆ ತನ್ನ ಬೆಂಬಲಿತ ಉಗ್ರಗಾಮಿ ಸಂಘಟನೆಗಳಿಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಲು ಈ ಒಪ್ಪಂದದಲ್ಲಿ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಈ ಒಪ್ಪಂದವನ್ನು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ರಾಜತಾಂತ್ರಿಕ ನಡೆ ಎಂದು ಟ್ರಂಪ್ ಆಡಳಿತ ಬಿಂಬಿಸುತ್ತಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




