ಪಾಕಿಸ್ತಾನದ ರಾಜಕೀಯ ಪರಿಸ್ಥಿತಿಯಲ್ಲಿ ಸೇನೆಯ ಪಾತ್ರ ಇಲ್ಲ: ಪಾಕಿಸ್ತಾನದ ಮಿಲಿಟರಿ ವಕ್ತಾರ

| Updated By: ರಶ್ಮಿ ಕಲ್ಲಕಟ್ಟ

Updated on: Apr 03, 2022 | 10:14 PM

ಇಂದು ನ್ಯಾಷನಲ್ ಅಸೆಂಬ್ಲಿಯಲ್ಲಿ ಏನಾಯಿತು ಎಂಬುದಕ್ಕೂ ಸೈನ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್.

ಪಾಕಿಸ್ತಾನದ ರಾಜಕೀಯ ಪರಿಸ್ಥಿತಿಯಲ್ಲಿ ಸೇನೆಯ ಪಾತ್ರ ಇಲ್ಲ: ಪಾಕಿಸ್ತಾನದ ಮಿಲಿಟರಿ ವಕ್ತಾರ
ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್
Follow us on

ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್ (Major General Babar Iftikhar) ಅವರು ದೇಶದಲ್ಲಿ ಚಾಲ್ತಿಯಲ್ಲಿರುವ ರಾಜಕೀಯ ಪರಿಸ್ಥಿತಿಯಲ್ಲಿ ಸೇನೆಯ ಯಾವುದೇ ರೀತಿಯ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸಿದ್ದಾರೆ. ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಸಲಹೆಯ ಮೇರೆಗೆ ಅಧ್ಯಕ್ಷ ಆರಿಫ್ ಅಲ್ವಿ ಅವರು ಅವಿಶ್ವಾಸ ನಿರ್ಣಯವನ್ನು ವಜಾ ಮಾಡಿದ ನಂತರ ನ್ಯಾಷನಲ್ ಅಸೆಂಬ್ಲಿ (National Assembly) ವಿಸರ್ಜನೆಯ ಕುರಿತು ಖಾಸಗಿ ಟಿವಿ ಚಾನೆಲ್‌ನೊಂದಿಗೆ ಮಾತನಾಡಿದ ಮಿಲಿಟರಿ ವಕ್ತಾರರು ಈ ಹೇಳಿಕೆಗಳನ್ನು ನೀಡಿದ್ದಾರೆ. “ಇಂದು ಎನ್‌ಎಯಲ್ಲಿ ಏನಾಯಿತು ಎಂಬುದಕ್ಕೂ ಸೈನ್ಯಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಇಫ್ತಿಕರ್ ಹೇಳಿದರು.  ಆರ್ಟಿಕಲ್ 5 ರ ಅಡಿಯಲ್ಲಿ ಇದು “ಅಸಂವಿಧಾನಿಕ” ಎಂದು ಬಣ್ಣಿಸಿ, ಉಪ ಸ್ಪೀಕರ್ ಖಾಸಿಂ ಸೂರಿ ಅವರು ಭಾನುವಾರದಂದು ಪ್ರಧಾನ ಮಂತ್ರಿಯನ್ನು ಪದಚ್ಯುತಗೊಳಿಸಲು ಜಂಟಿ ಪ್ರತಿಪಕ್ಷಗಳು ಸಲ್ಲಿಸಿದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದರು. ಕೆಳಮನೆಯ ವಿಸರ್ಜನೆಯ ಬಗ್ಗೆ ರಾಷ್ಟ್ರಪತಿಗಳಿಗೆ ಸಲಹೆಯನ್ನು ಕಳುಹಿಸಲು ಇದು ಪ್ರಧಾನಿಗೆ ಕಾಲಾವಕಾಶವನ್ನು ನೀಡಿದೆ.  ಮಾರ್ಚ್ 8 ರಂದು ವಿರೋಧ ಪಕ್ಷದಿಂದ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಯಿತು. ಆದರೆ ಪ್ರಧಾನ ಮಂತ್ರಿ ಖಾನ್ ತನ್ನ ಚುನಾಯಿತ ಸರ್ಕಾರವನ್ನು ಉರುಳಿಸಲು ಇದು “ವಿದೇಶಿ ಪಿತೂರಿ” ಎಂದಿದ್ದಾರೆ.  ಪ್ರಧಾನ ಮಂತ್ರಿ ಖಾನ್ ಪ್ರಕಾರ, ಉನ್ನತ ಸೇನಾ ನಾಯಕತ್ವವು ಕಳೆದ ವಾರ ಅವರನ್ನು ಭೇಟಿ ಮಾಡಿತು ಮತ್ತು ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಮೂರು ಆಯ್ಕೆಗಳನ್ನು ನೀಡಿತು. ಅದರಲ್ಲಿ ಅವರ ರಾಜೀನಾಮೆ, ಅವಿಶ್ವಾಸವನ್ನು ಎದುರಿಸುವುದು ಅಥವಾ ಆರಂಭಿಕ ಚುನಾವಣೆಗಳನ್ನು ಕರೆಯುವುದು ಸೇರಿದೆ.

 ಪಾಕಿಸ್ತಾನದ ಉಸ್ತುವಾರಿ ವಹಿಸುವವರು ಯಾರು?
ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ ನಂತರ ಅಧ್ಯಕ್ಷ ಆರಿಫ್ ಅಲ್ವಿ ಭಾನುವಾರ ಪಾಕಿಸ್ತಾನ ವಿಧಾನಸಭೆಯನ್ನು ವಿಸರ್ಜಿಸಿದರು. ಈ ಅವಿಶ್ವಾಸ ನಿರ್ಣಯವು ಸಂವಿಧಾನಕ್ಕೆ ವಿರುದ್ಧವಾಗಿದೆ. ಸಂವಿಧಾನದ ಅನುಸಾರವಾಗಿ ನಾನು ಈ ಅವಿಶ್ವಾಸ ನಿರ್ಣಯವನ್ನು ತಳ್ಳಿಹಾಕುತ್ತೇನೆ” ಎಂದು ಉಪಸಭಾಪತಿ ಖಾಸಿಮ್ ಸೂರಿ ಅವರು ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಹೇಳಿದರು. ನಂತರ ಪಾಕಿಸ್ತಾನ ಅಸೆಂಬ್ಲಿಯಲ್ಲಿನ ದೀಪಗಳನ್ನು ಆರಿಸಲಾಯಿತು.195 ಸದಸ್ಯರ ಬೆಂಬಲದೊಂದಿಗೆ ಶೆಹಬಾಜ್ ಷರೀಫ್ ಅವರನ್ನು ಪ್ರತಿಪಕ್ಷದ ಪ್ರಧಾನಿ ಎಂದು ಘೋಷಿಸಲಾಯಿತು. ಸುಪ್ರೀಂಕೋರ್ಟ್ ಕೂಡ ವಿಚಾರಣೆಯನ್ನು ನಾಳೆಗೆ (ಸೋಮವಾರ) ಮುಂದೂಡಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ದೇಶವನ್ನು ಆಳಿದ ಎಲ್ಲಾ ಶಕ್ತಿಶಾಲಿ ಪಾಕಿಸ್ತಾನ ಸೇನೆಯು ಇಸ್ಲಾಮಾಬಾದ್‌ನಲ್ಲಿನ ಬೆಳವಣಿಗೆಗಳಿಂದ ದೂರವುಳಿದಿದೆ.

ಇಂದು ಎನ್‌ಎಯಲ್ಲಿ ಏನಾಯಿತು ಎಂಬುದಕ್ಕೂ ಸೇನೆಗೂ ಯಾವುದೇ ಸಂಬಂಧವಿಲ್ಲ ಎಂದು ಪಾಕಿಸ್ತಾನ ಸೇನೆಯ ಮಾಹಿತಿ ವಿಭಾಗದ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಹೇಳಿದ್ದಾರೆ. ಸಂವಿಧಾನದ 224 ನೇ ವಿಧಿಯ ಅಡಿಯಲ್ಲಿ ಇಮ್ರಾನ್ ಖಾನ್ ಮತ್ತು ವಿರೋಧ ಪಕ್ಷದ ನಾಯಕನನ್ನು ಸಂಪರ್ಕಿಸಿದ ನಂತರ ಅಧ್ಯಕ್ಷ ಆರಿಫ್ ಅಲ್ವಿ ಅವರು ಹಂಗಾಮಿ ಪ್ರಧಾನಿಯನ್ನು ನೇಮಿಸದೆ ವಿಧಾನಸಭೆಯನ್ನು ವಿಸರ್ಜಿಸಿದರು. ಷರತ್ತಿನ ಪ್ರಕಾರ ಅಧ್ಯಕ್ಷರು ವಿಧಾನಸಭೆಯನ್ನು ವಿಸರ್ಜಿಸಿದರೆ, ಹಂಗಾಮಿ ಪ್ರಧಾನಿಗೆ ಉಸ್ತುವಾರಿ ವಹಿಸಲಾಗುತ್ತದೆ.
ಅಂದಹಾಗೆ ಪಾಕಿಸ್ತಾನದ ರಾಜಕೀಯ ಇತಿಹಾಸದಲ್ಲಿ, ಯಾವುದೇ ಪ್ರಧಾನಿ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿಲ್ಲ.

ಇದನ್ನೂ ಓದಿ: Pakistan ಪಾಕಿಸ್ತಾನದ ಸಂಸತ್ ವಿಸರ್ಜಿಸಿದ ಅಧ್ಯಕ್ಷ; 90 ದಿನಗಳ ಒಳಗೆ ಚುನಾವಣೆ ನಡೆಸಲು ಸೂಚನೆ