ಕ್ವೆಟ್ಟಾದಲ್ಲಿ ಪೊಲೀಸ್ ವಾಹನದಲ್ಲಿ ಐಇಡಿ ಸ್ಫೋಟ; 4 ಸಾವು 19 ಮಂದಿಗೆ ಗಾಯ

|

Updated on: Apr 10, 2023 | 9:09 PM

ಆರಂಭಿಕ ವರದಿಗಳು ಮೋಟಾರ್ ಸೈಕಲ್​​ನಲ್ಲಿ  ಸುಧಾರಿತ ಸ್ಫೋಟಕ ಸಾಧನವನ್ನು ಅಳವಡಿಸಲಾಗಿದೆ ಎಂದು ತೋರಿಸಿದೆ. ಅಧಿಕಾರಿಯ ವಾಹನದ ಹಿಂದೆ ಮೋಟಾರ್ ಸೈಕಲ್ ನಿಂತಿತ್ತು. ಸ್ಫೋಟಕ್ಕೆ ಮೂರರಿಂದ ನಾಲ್ಕು ಕಿಲೋ ಸ್ಫೋಟಕಗಳನ್ನು ಬಳಸಲಾಗಿದೆ

ಕ್ವೆಟ್ಟಾದಲ್ಲಿ ಪೊಲೀಸ್ ವಾಹನದಲ್ಲಿ ಐಇಡಿ ಸ್ಫೋಟ; 4 ಸಾವು 19 ಮಂದಿಗೆ ಗಾಯ
ಕ್ವೆಟ್ಟಾ ಸ್ಫೋಟ
Follow us on

ಪಾಕಿಸ್ತಾನದ (Pakistan) ಕ್ವೆಟ್ಟಾದಲ್ಲಿ (Quetta) ಸೋಮವಾರ ಪೊಲೀಸ್ ವಾಹನದ ಬಳಿ ಸ್ಫೋಟ ಸಂಭವಿಸಿದ್ದು ಇಬ್ಬರು ಪೊಲೀಸರು ಮತ್ತು ಅಪ್ರಾಪ್ತ ಬಾಲಕಿ ಸೇರಿದಂತೆ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಸುದ್ದಿ ಸಂಸ್ಥೆ ಜಿಯೋಟಿವಿ ಪ್ರಕಾರ, ನಗರದ ಶಹರಾ-ಎ-ಇಕ್ಬಾಲ್ (Shahrah-e-Iqbal) ಪ್ರದೇಶದಲ್ಲಿ ಸ್ಫೋಟ ವರದಿಯಾಗಿದೆ. ಸ್ಫೋಟದಲ್ಲಿ 19 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಸ್ಫೋಟದಿಂದಾಗಿ ಈ ಪ್ರದೇಶದಲ್ಲಿ ಹಲವಾರು ವಾಹನಗಳು ಮತ್ತು ದ್ವಿಚಕ್ರ ವಾಹನಗಳು ಹಾನಿಗೊಳಗಾಗಿವೆ. ಗಾಯಾಳುಗಳನ್ನು ಸಮೀಪದ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಸಿವಿಲ್ ಆಸ್ಪತ್ರೆಯಲ್ಲಿ ನಾಲ್ಕು ಮೃತದೇಹಗಳನ್ನು ಸಿಕ್ಕಿದ್ದುತ್ತು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಕ್ವೆಟ್ಟಾ ಆಸ್ಪತ್ರೆಯ ವಕ್ತಾರ ವಾಸಿಂ ಬೇಗ್  ರಾಯಿಟರ್ಸ್​​ಗೆ ತಿಳಿಸಿದ್ದಾರೆ.

ಹಂಗಾಮಿ ಪೊಲೀಸ್ ತನಿಖಾ ಅಧೀಕ್ಷಕರ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಕ್ವೆಟ್ಟಾದ ಕಂದಹರಿ ಬಜಾರ್‌ನಲ್ಲಿ ವಾಹನವನ್ನು ನಿಲ್ಲಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಶಫ್ಕತ್ ಚೀಮಾರಾಯಿಟರ್ಸ್​​ಗೆ ತಿಳಿಸಿದ್ದಾರೆ. ಆರಂಭಿಕ ವರದಿಗಳು ಮೋಟಾರ್ ಸೈಕಲ್​​ನಲ್ಲಿ  ಸುಧಾರಿತ ಸ್ಫೋಟಕ ಸಾಧನವನ್ನು ಅಳವಡಿಸಲಾಗಿದೆ ಎಂದು ತೋರಿಸಿದೆ. ಅಧಿಕಾರಿಯ ವಾಹನದ ಹಿಂದೆ ಮೋಟಾರ್ ಸೈಕಲ್ ನಿಂತಿತ್ತು. ಸ್ಫೋಟಕ್ಕೆ ಮೂರರಿಂದ ನಾಲ್ಕು ಕಿಲೋ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸೋಮವಾರದ ಸ್ಫೋಟದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ.

ಪ್ರಧಾನಿ ಶೆಹಬಾಜ್ ಷರೀಫ್ ಅವರು ಬಲೂಚಿಸ್ತಾನದ ರಾಜಧಾನಿಯಲ್ಲಿ ನಡೆದ ಸ್ಫೋಟವನ್ನು ಖಂಡಿಸಿ ಘಟನೆಯಲ್ಲಿ ಮೃತಪಟ್ಟವರಿಗಾಗಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಅವರ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ಇದನ್ನೂ ಓದಿ: AAP: ಆಮ್ ಆದ್ಮಿ ಪಾರ್ಟಿಗೆ ರಾಷ್ಟ್ರೀಯ ಸ್ಥಾನಮಾನ ನೀಡಿದ ಕೇಂದ್ರ ಚುನಾವಣಾ ಆಯೋಗ

ಫೆಬ್ರವರಿಯಲ್ಲಿ ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ ಐವರು ಗಾಯಗೊಂಡಿದ್ದರು. ನಿಷೇಧಿತ ಉಗ್ರಗಾಮಿ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಕ್ವೆಟ್ಟಾ ಪೊಲೀಸ್ ಲೈನ್ಸ್ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದೆ.
ಫೆಬ್ರವರಿ ಸ್ಫೋಟಗಳು ಪೊಲೀಸ್ ಅಧಿಕಾರಿಗಳನ್ನೂ ಗುರಿಯಾಗಿಸಿಕೊಂಡಿದ್ದವು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ