Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid 19: ಕೋವಿಡ್-19ನ ವೈರಸ್ ಹುಟ್ಟಿದ್ದು ಮಾನವನಿಂದ ಎಂದ ಚೀನಾದ ವಿಜ್ಞಾನಿ

ಚೀನೀ ಸ್ಟೇಟ್ ಕೌನ್ಸಿಲ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಾಂಗ್ ಯಿಗಾಂಗ್, ವಿಜ್ಞಾನಿಗಳು ಜನವರಿ 2020 ಮತ್ತು ಮಾರ್ಚ್ 2020 ರ ನಡುವೆ ವುಹಾನ್ ಮಾರುಕಟ್ಟೆಯಿಂದ 1,300 ಪರಿಸರ ಮತ್ತು ಹೆಪ್ಪುಗಟ್ಟಿದ ಪ್ರಾಣಿಗಳ ಮಾದರಿಗಳನ್ನು ತೆಗೆದುಕೊಂಡರು...

Covid 19: ಕೋವಿಡ್-19ನ ವೈರಸ್ ಹುಟ್ಟಿದ್ದು ಮಾನವನಿಂದ ಎಂದ ಚೀನಾದ ವಿಜ್ಞಾನಿ
ಕೋವಿಡ್ 19
Follow us
ರಶ್ಮಿ ಕಲ್ಲಕಟ್ಟ
|

Updated on:Apr 10, 2023 | 3:12 PM

ವುಹಾನ್ ಮಾರುಕಟ್ಟೆಯಲ್ಲಿ (Wuhan market) ಕೋವಿಡ್ -19 (Covid-19) ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ ಎಂಬ ಸಿದ್ಧಾಂತವನ್ನು ಚೀನಾದ ವಿಜ್ಞಾನಿಯೊಬ್ಬರು ನಿರಾಕರಿಸಿದ್ದು, ಈ ವೈರಸ್ ಮಾನವರಲ್ಲಿ ಹುಟ್ಟಿಕೊಂಡಿರಬಹುದು ಎಂದು ಹೇಳಿದ್ದಾರೆ. ಬೀಜಿಂಗ್ ಯೂನಿವರ್ಸಿಟಿ ಆಫ್ ಕೆಮಿಕಲ್ ಟೆಕ್ನಾಲಜಿಯ ಟಾಂಗ್ ಯಿಗಾಂಗ್  (Tong Yigang), ವುಹಾನ್‌ನ ಹುವಾನಾನ್ ಸೀಫುಡ್ ಮಾರ್ಕೆಟ್‌ನಿಂದ ತೆಗೆದ ವೈರಲ್ ಮಾದರಿಗಳ ಆನುವಂಶಿಕ ಅನುಕ್ರಮಗಳು ಕೋವಿಡ್ ಸೋಂಕಿತ ರೋಗಿಗಳಿಗೆ ಬಹುತೇಕ ಒಂದೇ ಎಂದು ಹೇಳಿದ್ದು, ಮನುಷ್ಯರಿಂದಲೇ ಕೋವಿಡ್ ಹುಟ್ಟಿಕೊಂಡಿರಬಹುದು ಎಂದು ಹೇಳಿದ್ದಾರೆ.ಚೀನೀ ಸ್ಟೇಟ್ ಕೌನ್ಸಿಲ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಾಂಗ್ ಯಿಗಾಂಗ್, ವಿಜ್ಞಾನಿಗಳು ಜನವರಿ 2020 ಮತ್ತು ಮಾರ್ಚ್ 2020 ರ ನಡುವೆ ವುಹಾನ್ ಮಾರುಕಟ್ಟೆಯಿಂದ 1,300 ಪರಿಸರ ಮತ್ತು ಹೆಪ್ಪುಗಟ್ಟಿದ ಪ್ರಾಣಿಗಳ ಮಾದರಿಗಳನ್ನು ತೆಗೆದುಕೊಂಡರು, ನಂತರ ಅವರು ಪರಿಸರದ ಮಾದರಿಗಳಿಂದ ವೈರಸ್‌ನ ಮೂರು ತಳಿಗಳನ್ನು ಪ್ರತ್ಯೇಕಿಸಿದರು.

ಕೋವಿಡ್ ವೈರಸ್‌ನ ಮೂಲವು ರಕೂನ್ ನಾಯಿಗಳು ಎಂದು ಸೂಚಿಸಿದ ಇತ್ತೀಚಿನ ಅಧ್ಯಯನವನ್ನು ವಿಜ್ಞಾನಿ ನಿರಾಕರಿಸಿದ್ದಾರೆ. ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಸಂಶೋಧಕ ಝೌ ಲೀ, ಕೋವಿಡ್ ಅನ್ನು ಮೊದಲು ಪತ್ತೆ ಮಾಡಿದ ಸ್ಥಳವಾದ ವುಹಾನ್ ವೈರಸ್ ಹುಟ್ಟಿಕೊಂಡ ಸ್ಥಳವಾಗಿರಬೇಕಾಗಿಲ್ಲ ಎಂದು ಹೇಳಿದರು.

ಕೋವಿಡ್ ವೈರಸ್‌ನ ಮೂಲವನ್ನು ಅರ್ಥಮಾಡಿಕೊಳ್ಳಲು ಪ್ರಪಂಚದಾದ್ಯಂತದ ವಿಜ್ಞಾನಿಗಳು ಚೀನಾದಿಂದ ಡೇಟಾವನ್ನು ಬಹಳ ಹಿಂದೆಯೇ ಒತ್ತಾಯಿಸುತ್ತಿದ್ದಾರೆ. ಇದಕ್ಕೂ ಮೊದಲು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಚೀನಾವನ್ನು ಸಾಕಷ್ಟು ದತ್ತಾಂಶವನ್ನು ಹಂಚಿಕೊಂಡಿಲ್ಲ ಎಂದು ಟೀಕಿಸಿತು. ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಚೀನಾ ಹೇಳಿರುವ ಮಾಹಿತಿ ಬಗ್ಗೆ ಸರಿಯಾಗಿ ತಿಳಿದಿಲ್ಲ, ಎಲ್ಲವೂ ಇರುವುದು ಊಹೆಯಿಂದ ಎಂದಿದ್ದರು.

ಇದನ್ನೂ ಓದಿ: Covid 19: ತಾಯಿಯ ಗರ್ಭದಲ್ಲಿರುವಾಗಲೇ ಎರಡು ಶಿಶುಗಳಿಗೆ ತಗುಲಿದ ಕೊರೊನಾ ಸೋಂಕು, ಮೆದುಳಿಗೆ ಹಾನಿ

ಇದು WHO ನ ನಿಲುವು ಮತ್ತು ಅದಕ್ಕಾಗಿಯೇ ನಾವು ಚೀನಾವನ್ನು ಈ ಬಗ್ಗೆ ಸಹಕಾರ ನೀಡಬೇಕೆಂದು ಕೇಳುತ್ತಿದ್ದೇವೆ ಎಂದು ಅವರು ಹೇಳಿದರು. ಬೀಜಿಂಗ್ ಕಾಣೆಯಾದ ಡೇಟಾವನ್ನು ಒದಗಿಸಿದರೆ ಏನಾಯಿತು ಅಥವಾ ಅದು ಹೇಗೆ ಪ್ರಾರಂಭವಾಯಿತು ಎಂದು ನಮಗೆ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Mon, 10 April 23

Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ