Covid 19: ತಾಯಿಯ ಗರ್ಭದಲ್ಲಿರುವಾಗಲೇ ಎರಡು ಶಿಶುಗಳಿಗೆ ತಗುಲಿದ ಕೊರೊನಾ ಸೋಂಕು, ಮೆದುಳಿಗೆ ಹಾನಿ

ತಾಯಿಯ ಗರ್ಭದಲ್ಲಿರುವಾಗಲೇ ಎರಡು ಶಿಶುಗಳಿಗೆ ಕೊರೊನಾ ಸೋಂಕು ತಗುಲಿ ಮೆದುಳಿಗೆ ಹಾನಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಗರ್ಭದಲ್ಲಿರುವಾಗಲೇ ಶಿಶುವಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು, ಇದರಿಂದ ಎರಡು ಶಿಶುಗಳ ಮೆದುಳಿಗೆ ಹಾನಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.

Covid 19: ತಾಯಿಯ ಗರ್ಭದಲ್ಲಿರುವಾಗಲೇ ಎರಡು ಶಿಶುಗಳಿಗೆ ತಗುಲಿದ ಕೊರೊನಾ ಸೋಂಕು, ಮೆದುಳಿಗೆ ಹಾನಿ
ಗರ್ಭಿಣಿImage Credit source: Insync Healtyhcare Solutions
Follow us
|

Updated on: Apr 09, 2023 | 11:09 AM

ತಾಯಿಯ ಗರ್ಭದಲ್ಲಿರುವಾಗಲೇ ಎರಡು ಶಿಶುಗಳಿಗೆ ಕೊರೊನಾ ಸೋಂಕು ತಗುಲಿ ಮೆದುಳಿಗೆ ಹಾನಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಗರ್ಭದಲ್ಲಿರುವಾಗಲೇ ಶಿಶುವಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು, ಇದರಿಂದ ಎರಡು ಶಿಶುಗಳ ಮೆದುಳಿಗೆ ಹಾನಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಎರಡು ಶಿಶುಗಳಲ್ಲಿ ಒಂದು ಶಿಶು ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ. ಮತ್ತೊಂದು ಶಿಶುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಅಧ್ಯಯನದಲ್ಲಿ ಇದು ವಿಶ್ವದಲ್ಲೇ ಮೊದಲ ಪ್ರಕರಣವಾಗಿದೆ.

ಪೀಡಿಯಾಟ್ರಿಕ್ಸ್​ ಜರ್ನಲ್​ನಲ್ಲಿ ಪ್ರಕಟವಾದ ಮಿಯಾಮಿ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ 2020ರ ಎರಡನೇ ತ್ರೈಮಾಸಿಕದಲ್ಲಿ ಕೊರೊನಾದ ಡೆಲ್ಟಾ ರೂಪಾಂತರಕ್ಕೆ ಈ ಶಿಶುಗಳು ತುತ್ತಾಗಿದ್ದವು. ಈ ಶಿಶುಗಳು ಕೊರೊನಾ ವೈರಸ್‌ ವಿರುದ್ಧ ತಮ್ಮ ರಕ್ತದಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ, ಪ್ರತಿಕಾಯ ಬೆಳೆಸಿಕೊಂಡಿರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆದರೆ, ಮೆದುಳಿಗೆ ಹಾನಿಯಾಗಿರುವುದರಿಂದ ಒಂದು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಓದಿ: India Covid Cases: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 6,050 ಕೊರೊನಾ ಸೋಂಕಿತರು ಪತ್ತೆ, ಕೇಂದ್ರ ಆರೋಗ್ಯ ಸಚಿವರ ಸಭೆ

ಕೊರೊನಾ ವೈರಸ್‌ ಪಾಟಿಟೀವ್‌ ಪರೀಕ್ಷೆ ಮಾಡಿಸಿದ ಹೊರತಾಗಿಯೂ ತಾಯಂದಿರಲ್ಲಿ ಒಬ್ಬರು ಕೋವಿಡ್‌ 19ನ ಸೌಮ್ಯ ರೋಗಲಕ್ಷಣಗಳನ್ನು ಮಾತ್ರ ಹೊಂದಿದ್ದರು. ಅವರು ತನ್ನ ಹೊಟ್ಟೆಯಲ್ಲಿ ಮಗುವನ್ನು ಪೂರ್ಣಾವಧಿಗೆ ಹೊತ್ತಿದ್ದರು. ಆದರೆ, ಇನ್ನೊಬ್ಬರು ತಾಯಿ ಮಾತ್ರ ಡೆಲ್ಟಾ ವೈರಸ್‌ನಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರು.

ಕೊರೊನಾ ಲಸಿಕೆ ಮಾರುಕಟ್ಟೆಯಲ್ಲಿಲ್ಲದ ಸಮಯವದು, ಆ ಮಕ್ಕಳು ಹುಟ್ಟಿದ ಒಂದೇ ದಿನದಲ್ಲಿ ಮಕ್ಕಳಿಬ್ಬರಿಗೂ ಪಾರ್ಶ್ವವಾಯು ಕಾಣಿಸಿಕೊಂಡು ಅವರ ಮಾನಸಿಕ ಬೆಳವಣಿಗೆ ನಿಧಾನವಾಗಿತ್ತು.