ಕರಾಚಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ, ಜಪಾನಿನ ಐವರು ಪಾರು, ಮೂವರಿಗೆ ಗಾಯ

|

Updated on: Apr 19, 2024 | 12:46 PM

ದಾಳಿಕೋರರು ಜಪಾನ್​ ಪ್ರಜೆಗಳಿದ್ದ ವಾಹನದ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ದಾಳಿಕೋರರು ಸಾವನ್ನಪ್ಪಿದ್ದು, ಜಪಾನ್​ ಪ್ರಜೆಗಳು ಸುರಕ್ಷಿತವಾಗಿದ್ದಾರೆ.

ಕರಾಚಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ, ಜಪಾನಿನ ಐವರು ಪಾರು, ಮೂವರಿಗೆ ಗಾಯ
ಸ್ಫೋಟಗೊಂಡ ವಾಹನ
Follow us on

ಪಾಕಿಸ್ತಾನ(Pakistan)ದ ಕರಾಚಿ(Karachi)ಯಲ್ಲಿ ಜಪಾನ್​ ಪ್ರಜೆಗಳಿದ್ದ ವಾಹನಗಳ ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ (Suicide Bomb Attack) ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದು, ಜಪಾನ್ ನಾಗರಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಮ್ಲಾಲಂಡಿಯ ಮುರ್ತಾಜಾ ಚೋರಂಗಿ ಬಳಿ ದಾಳಿ ನಡೆದಿದೆ ಎಂದು ಮಾಜಿ ಡಿಐಜಿ ಅಜ್ಫರ್ ಮಹಸರ್ ಡಾನ್‌ಗೆ ತಿಳಿಸಿದ್ದಾರೆ.

ಐವರು ವಿದೇಶಿ ಪ್ರಜೆಗಳು ಕ್ಲಿಫ್ಟನ್‌ನಲ್ಲಿರುವ ತಮ್ಮ ನಿವಾಸದಿಂದ ರಫ್ತು ಸಂಸ್ಕರಣಾ ವಲಯಕ್ಕೆ ಹೈಸ್ ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದರು. ಎಲ್ಲಾ ಐವರು ಜಪಾನಿಯರು ಸುರಕ್ಷಿತವಾಗಿದ್ದಾರೆ ಆದರೆ ಅವರ ಜೊತೆಗಿದ್ದ ಖಾಸಗಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಭಯೋತ್ಪಾದಕರಿಂದ ಆರು ಹ್ಯಾಂಡ್ ಗ್ರೆನೇಡ್‌ಗಳು, ಒಂದು ಎಸ್‌ಎಂಜಿ ಮತ್ತು ಮೂರು ಮ್ಯಾಗಜೀನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಳಿಕೋರರ ಬ್ಯಾಗ್ ನಲ್ಲಿ ಎರಡು ಬಾಟಲ್ ಪೆಟ್ರೋಲ್ ಕೂಡ ಇತ್ತು. ಎಲ್ಲಾ ವಸ್ತುಗಳು ದಾಳಿಕೋರರ ಬಳಿ ಚೀಲದಲ್ಲಿದ್ದವು. ಭದ್ರತಾ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಭಯೋತ್ಪಾದಕ ಹತನಾಗಿದ್ದಾನೆ ಮತ್ತು ಇನ್ನೊಬ್ಬ ಭಯೋತ್ಪಾದಕ ವ್ಯಾನ್ ಬಳಿ ಬಂದು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದು ಆತ್ಮಾಹುತಿ ದಾಳಿ ಎಂದು ಎಸ್‌ಎಸ್‌ಪಿ ಮಲಿರ್ ತಾರಿಕ್ ಮಸ್ತೊಯ್ ಖಚಿತಪಡಿಸಿದ್ದಾರೆ. ದಾಳಿಕೋರ ತನ್ನ ಸ್ಫೋಟಕ ತುಂಬಿದ ಉಡುಪನ್ನು ಕಾರ್ಮಿಕರನ್ನು ಸಾಗಿಸುತ್ತಿದ್ದ ವ್ಯಾನ್ ಬಳಿ ಸ್ಫೋಟಿಸಿದ್ದಾನೆ.

ಪ್ರತ್ಯಕ್ಷದರ್ಶಿ ಹೇಳಿದ್ದೇನು?
ವಿದೇಶಿಯರು ಮೂರು ವಾಹನಗಳಲ್ಲಿ ತೆರಳುತ್ತಿದ್ದರು. ಒಂದು ಭದ್ರತಾ ವಾಹನ ಮುಂದೆ ಚಲಿಸುತ್ತಿತ್ತು.
ಅವರ ಹಿಂದೆ ವಿದೇಶಿಯರು ವ್ಯಾನ್‌ನಲ್ಲಿ ಇದ್ದರು ಮತ್ತು ಅದರ ಹಿಂದೆ ವಿದೇಶಿಯರನ್ನು ಹೊತ್ತ ಮತ್ತೊಂದು ಎಸ್‌ಯುವಿ ಕೂಡ ಇತ್ತು. ವಿದೇಶಿಯರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್‌ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿ ತಕ್ಷಣವೇ ಎಸ್‌ಯುವಿಯನ್ನು ಸುರಕ್ಷಿತವಾಗಿರಿಸಲು ಹಿಂದಕ್ಕೆ ಹೋಗಿದ್ದಾರೆ. ದಾಳಿಕೋರರು ಮೊದಲ ಗುಂಡಿನ ದಾಳಿ ನಡೆಸಿದ್ದು, ಭಾರೀ ಸ್ಫೋಟ ಸಂಭವಿಸಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಎನ್‌ಕೌಂಟರ್ ಆರಂಭಿಸಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ