ಪಾಕ್ ಸೇನಾ ಮುಖ್ಯಸ್ಥ ಆಸಿಮ್​ರನ್ನು ಸೇಲ್ಸ್​ಮ್ಯಾನ್ ಎಂದು ಕರೆದು ಅಪಹಾಸ್ಯ ಮಾಡಿದ ಪಾಕಿಸ್ತಾನ ಜನ

ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್​ ಮುನೀರ್(Asim Munir)​ ಅವರನ್ನು ಅಲ್ಲಿನ ಜನತೆಯೇ ಸೇಲ್ಸ್​ಮ್ಯಾನ್ ಎಂದು ಕರೆದು ಅಪಹಾಸ್ಯ ಮಾಡಿದ್ದಾರೆ. ಆಸಿಮ್ ಮುನೀರ್ ಇಚ್ಚೀಚೆಗಷ್ಟೇ ಅಮೆರಿಕಕ್ಕೆ ಭೇಟಿ ನೀಡಿದ್ದರು. ವಾಷಿಂಗ್ಟನ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಅವರು ಪಾಕಿಸ್ತಾನದ ಅಪರೂಪದ ಭೂಮಿಯ ಖನಿಜಗಳನ್ನು ಉಡುಗೊರೆಯಾಗಿ ನೀಡಿದರು.

ಪಾಕ್ ಸೇನಾ ಮುಖ್ಯಸ್ಥ ಆಸಿಮ್​ರನ್ನು ಸೇಲ್ಸ್​ಮ್ಯಾನ್ ಎಂದು ಕರೆದು ಅಪಹಾಸ್ಯ ಮಾಡಿದ ಪಾಕಿಸ್ತಾನ ಜನ
ಆಸಿಮ್ ಮುನೀರ್

Updated on: Oct 02, 2025 | 9:44 AM

ಇಸ್ಲಾಮಾಬಾದ್, ಅಕ್ಟೋಬರ್ 02: ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್​ ಮುನೀರ್(Asim Munir)​ ಅವರನ್ನು ಅಲ್ಲಿನ ಜನತೆಯೇ ಸೇಲ್ಸ್​ಮ್ಯಾನ್ ಎಂದು ಕರೆದು ಅಪಹಾಸ್ಯ ಮಾಡಿದ್ದಾರೆ. ಆಸಿಮ್ ಮುನೀರ್ ಇಚ್ಚೀಚೆಗಷ್ಟೇ ಅಮೆರಿಕಕ್ಕೆ ಭೇಟಿ ನೀಡಿದ್ದರು. ವಾಷಿಂಗ್ಟನ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಅವರು ಪಾಕಿಸ್ತಾನದ ಅಪರೂಪದ ಭೂಮಿಯ ಖನಿಜಗಳನ್ನು ಉಡುಗೊರೆಯಾಗಿ ನೀಡಿದರು.

ಆದರೆ ಇದು ಪಾಕಿಸ್ತಾನದಲ್ಲಿ ವ್ಯಾಪಕ ಟೀಕೆಗೆ ಕಾರಣವಾಯಿತು. ಅವಾಮಿ ರಾಷ್ಟ್ರೀಯ ಪಕ್ಷದ (ANP) ಅಧ್ಯಕ್ಷ ಮತ್ತು ಸೆನೆಟರ್ ಐಮಲ್ ವಾಲಿ ಖಾನ್ ಸಂಸತ್ತಿನಲ್ಲಿ ಕಟುವಾದ ದಾಳಿಯನ್ನು ನಡೆಸಿದರು. ಸೇನಾ ಮುಖ್ಯಸ್ಥರು ಸೇಲ್ಸ್​ಮ್ಯಾನ್​ನಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

ಅಮೆರಿಕ ಭೇಟಿಯ ಸಮಯದಲ್ಲಿ ಶ್ವೇತಭವನದಿಂದ ಬಿಡುಗಡೆಯಾದ ಫೋಟೋದಲ್ಲಿ ಮುನೀರ್ ಅವರು ಡೊನಾಲ್ಡ್ ಟ್ರಂಪ್​ಗೆ ಅಪರೂಪದ ಖನಿಜಗಳನ್ನು ಹೊಂದಿರುವ ಮರದ ಪೆಟ್ಟಿಗೆಯನ್ನು ಉಡುಗೊರೆಯಾಗಿ ನೀಡುತ್ತಿರುವುದನ್ನು ತೋರಿಸಲಾಗಿದೆ.

ಮತ್ತಷ್ಟು ಓದಿ: ಜೈಲಿನಲ್ಲಿ ನನಗೇನೇ ಆದರೂ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಕಾರಣ; ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಈ ಚಿತ್ರವು ಪಾಕಿಸ್ತಾನದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಸೆನೆಟ್​ನಲ್ಲಿ ಮಾತನಾಡಿದ ಐಮಲ್ ವಾಲಿ ಖಾನ್, ನಮ್ಮ ಸೇನಾ ಮುಖ್ಯಸ್ಥರು ಅಪರೂಪದ ಭೂಮಿಯ ಖನಿಜಗಳನ್ನು ಹೊಂದಿರುವ ಬ್ರೀಫ್‌ಕೇಸ್ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಯಾವ ಸೇನಾ ಮುಖ್ಯಸ್ಥರು ಇಂತಹ ಅಮೂಲ್ಯ ವಸ್ತುಗಳನ್ನು ಬೇರೆ ದೇಶದವರಿಗೆ ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಅದು ಒಂದು ದೊಡ್ಡ ಬ್ರಾಂಡೆಡ್ ಅಂಗಡಿಯಂತೆ ಕಾಣುತ್ತಿತ್ತು, ಅಲ್ಲಿ ಮ್ಯಾನೇಜರ್ (ಪ್ರಧಾನಿ ಶಹಬಾಜ್ ಷರೀಫ್) ಸುಮ್ಮನೆ ನೋಡುತ್ತಿದ್ದರು. ಸೇಲ್ಸ್​ಮ್ಯಾನ್ (ಮುನೀರ್) ಗ್ರಾಹಕರಿಗೆ ಸರಕುಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದಂತೆ ಕಾಣುತ್ತಿತ್ತು ಎಂದುವ್ಯಂಗ್ಯವಾಡಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:43 am, Thu, 2 October 25