ಪಾಕಿಸ್ತಾನದಲ್ಲಿ ಅಸೀಮ್ ಮುನೀರ್ನದ್ದೇ ಅಂತಿಮ ನಿರ್ಧಾರ; ಕೊನೆಗೂ ಒಪ್ಪಿಕೊಂಡ ಖವಾಜಾ ಆಸಿಫ್
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರೇ ಅಸೀಮ್ ಮುನೀರ್ ಪಾಕಿಸ್ತಾನದ ನಿಜವಾದ ಆಡಳಿತಗಾರ, ಆತನದ್ದೇ ಅಂತಿಮ ನಿರ್ಧಾರ ಎಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ ಪಾಕಿಸ್ತಾನದಲ್ಲಿ ರಕ್ಷಣಾ ಸಚಿವರದ್ದೇನೂ ಇಲ್ಲ ಎಂದು ಬಹಿರಂಗಪಡಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಭಾಷಣ ಮಾಡಿದ ಬೆನ್ನಲ್ಲೇ ಖವಾಜಾ ಆಸಿಫ್ ಅವರ ವೈರಲ್ ಸಂದರ್ಶನವು ಚುನಾಯಿತ ನಾಯಕತ್ವದ ಮೇಲೆ ಪಾಕಿಸ್ತಾನ ಮಿಲಿಟರಿಯ ನೆರಳಿನ ಸ್ವರೂಪವನ್ನು ಒತ್ತಿಹೇಳುತ್ತದೆ.

ಇಸ್ಲಮಾಬಾದ್, ಸೆಪ್ಟೆಂಬರ್ 27: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ತಮ್ಮ ದೇಶ ಅನುಸರಿಸುವ ‘ಹೈಬ್ರಿಡ್ ಮಾದರಿ’ ಆಡಳಿತವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಪಾಕಿಸ್ತಾನದಲ್ಲಿ ಯಾವುದೇ ಇತರ ದೇಶಕ್ಕಿಂತ ಭಿನ್ನವಾಗಿ ನಾಗರಿಕ ಸರ್ಕಾರ ಮತ್ತು ಸೈನ್ಯವು ದೇಶವನ್ನು ನಡೆಸಲು ಒಟ್ಟಾಗಿ ನಿಲ್ಲುತ್ತದೆ ಎಂದಿದ್ದಾರೆ. ಬ್ರಿಟಿಷ್-ಅಮೆರಿಕನ್ ಪತ್ರಕರ್ತ ಮೆಹದಿ ಹಸನ್ ಮಾಡಿದ ಸಂದರ್ಶನದಲ್ಲಿ ಪಾಕಿಸ್ತಾನದಲ್ಲಿ ಹೈಬ್ರಿಡ್ ಮಾದರಿ ಹೇಗೆ ಕೆಲಸ ಮಾಡುತ್ತದೆ? ನೀವು ಅಸಿಮ್ ಮುನೀರ್ ಅವರಿಗಿಂತ ಹೆಚ್ಚು ಶಕ್ತಿಶಾಲಿ ವ್ಯಕ್ತಿಯೇ? ಹೆಚ್ಚಿನ ದೇಶಗಳಲ್ಲಿ, ಸೈನ್ಯದ ಮುಖ್ಯಸ್ಥರು ರಕ್ಷಣಾ ಸಚಿವರಿಗೆ ಉತ್ತರಿಸುತ್ತಾರೆ. ನಿಮ್ಮ ದೇಶದಲ್ಲಿ ರಕ್ಷಣಾ ಸಚಿವರಾದ ನೀವು ಸೇನಾ ಮುಖ್ಯಸ್ಥರಿಗೆ ಉತ್ತರಿಸುತ್ತೀರಿ, ಅಲ್ಲವೇ? ಎಂದು ಕೇಳಿದರು.
ಅದಕ್ಕೆ ಉತ್ತರಿಸಿದ ಆಸಿಫ್, ನಾನು ರಾಜಕೀಯ ಕಾರ್ಯಕರ್ತ. ನಾನು ರಾಜಕೀಯವಾಗಿ ನೇಮಕಗೊಂಡವನು ಎಂದರು.
Mehdi Hasan tied Khawaja Asif in knots so badly that the poor fellow didn’t know whether to run, hide, or dig a tunnel.Hasan turned him into minced meat, grilled him medium-rare, and served him back to the audience with extra sauce. Watch out 😂😂😂 pic.twitter.com/ydni2xLmRy
— Rectifier (@rectifier79) September 27, 2025
ಇದನ್ನೂ ಓದಿ: ಉಗ್ರನಿಗಿಂತ ಕೆಟ್ಟದಾಗಿ ನಡೆಸಿಕೊಂಡರು; ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ವಿರುದ್ಧ ಪಾಕ್ ಮಾಜಿ ಪಿಎಂ ಇಮ್ರಾನ್ ಖಾನ್ ಆರೋಪ
ಅಷ್ಟಕ್ಕೇ ಸುಮ್ಮನಾಗದ ಪತ್ರಕರ್ತ, “ರಕ್ಷಣಾ ಸಚಿವರಾಗಿ ನೀವು ಜನರಲ್ ಅಸಿಮ್ ಮುನೀರ್ ಅವರನ್ನು ವಜಾಗೊಳಿಸಬಹುದೇ?” ಎಂದು ಕೇಳಿದರು. ಅದಕ್ಕೆ ಉತ್ತರಿಸಲಾಗದೆ ಖವಾಜಾ ಆಸಿಫ್ ತಡವರಿಸಿದರು. ಸ್ಪಷ್ಟವಾಗಿ “ಹೌದು” ಅಥವಾ “ಇಲ್ಲ” ಎಂದು ಹೇಳಲಾಗದೆ ಏನೂ ಉತ್ತರಿಸಲಾಗದೆ ಸುಮ್ಮನೆ ಕುಳಿತರು. ಈ ಮೂಲಕ ಅವರೇ ಪಾಕಿಸ್ತಾನದಲ್ಲಿ ರಕ್ಷಣಾ ಸಚಿವರಾದ ತಮ್ಮ ಪಾತ್ರವೇನೂ ಇಲ್ಲ, ಎಲ್ಲದಕ್ಕೂ ಸೇನಾ ಮುಖ್ಯಸ್ಥರ ನಿರ್ಧಾರವೇ ಅಂತಿಮ ಎಂದು ಒಪ್ಪಿಕೊಂಡಂತಾಗಿದೆ. ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಪಾಕ್ ದೇಶದ ನಿಜವಾದ ಆಡಳಿತಗಾರ ಎಂದು ಆಸಿಫ್ ಒಪ್ಪಿಕೊಂಡರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:58 pm, Sat, 27 September 25




