AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ಕ್ಲಾಸ್​ಮೇಟ್​ನ ತಾಯಿಯನ್ನೇ ಮದುವೆಯಾದ ಯುವಕ

ಪ್ರೀತಿಗೆ ವಯಸ್ಸು, ಜಾತಿ, ಬಡವ, ಶ್ರೀಮಂತ ಎಂಬ ಹಂಗಿಲ್ಲ ಅಂತಾರೆ ಅದು ಈ ಇಬ್ಬರ ಜೀವನದಲ್ಲಿ ನಿಜವಾಗಿದೆ. ಜಪಾನ್​​ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಯುವಕನೊಬ್ಬ ತನ್ನ ಸಹಪಾಠಿಯ ತಾಯಿಯನ್ನೇ ಮದುವೆಯಾಗಿರುವ ಘಟನೆ ವರದಿಯಾಗಿದೆ. 33 ವರ್ಷದ ವ್ಯಕ್ತಿ 54 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. ಅಂದರೆ ತನಗಿಂತ 21 ವರ್ಷ ದೊಡ್ಡವಳನ್ನು ವರಿಸಿದ್ದಾರೆ.

ತನ್ನ ಕ್ಲಾಸ್​ಮೇಟ್​ನ ತಾಯಿಯನ್ನೇ ಮದುವೆಯಾದ ಯುವಕ
ಮದುವೆ
ನಯನಾ ರಾಜೀವ್
|

Updated on: Sep 27, 2025 | 10:26 AM

Share

ಪ್ರೀತಿಗೆ ವಯಸ್ಸು, ಜಾತಿ, ಬಡವ, ಶ್ರೀಮಂತ ಎಂಬ ಹಂಗಿಲ್ಲ ಅಂತಾರೆ ಅದು ಈ ಇಬ್ಬರ ಜೀವನದಲ್ಲಿ ನಿಜವಾಗಿದೆ. ಜಪಾನ್​​ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಯುವಕನೊಬ್ಬ ತನ್ನ ಸಹಪಾಠಿಯ ತಾಯಿಯನ್ನೇ ಮದುವೆಯಾಗಿರುವ ಘಟನೆ ವರದಿಯಾಗಿದೆ. 33 ವರ್ಷದ ವ್ಯಕ್ತಿ 54 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. ಅಂದರೆ ತನಗಿಂತ 21 ವರ್ಷ ದೊಡ್ಡವಳನ್ನು ವರಿಸಿದ್ದಾರೆ.

ಇಸಾಮು ಟೊಮಿಯೋಕಾ ಎಂಬಾತ ಮಿಡೋರಿಯನ್ನು ತನ್ನ ಶಾಲಾ ದಿನಗಳಲ್ಲಿ ಪೇರೆಂಟ್ಸ್​, ಟೀಚರ್ ಮೀಟಿಂಗ್​​ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದ. ದಶಕಗಳ ಬಳಿಕ ತನ್ನ ಹಳೆಯ ಸಹಪಾಠಿಯ ಬ್ಯೂಟಿ ಸಲೂನ್‌ನಲ್ಲಿ ನಡೆದ ಆಕಸ್ಮಿಕ ಭೇಟಿಯು ಪ್ರೀತಿಯನ್ನು ಮತ್ತೆ ಜೀವಂತಗೊಳಿಸಿತ್ತು.

ನಾನು ಆಕೆಯನ್ನು ನೋಡಿದಾಕ್ಷಣ ಪ್ರೀತಿಯಲ್ಲಿ ಬಿದ್ದೆ ಎಂದು ಮಿಡೋರಿಯನ್ನು ಭೇಟಿಯಾದ ದಿನವನ್ನು ನೆನಪಿಸಿಕೊಂಡಿದ್ದಾರೆ.ಇತ್ತೀಚೆಗಷ್ಟೇ ಆಕೆ ಗಂಡನಿಂದ ವಿಚ್ಛೇದನ ಪಡೆದಿದ್ದರು. ತನ್ನನ್ನು ಇಷ್ಟು ಸಣ್ಣವನು ಇಷ್ಟಪಡುತ್ತಿರುವ ಬಗ್ಗೆ ಖುಷಿ ಎನಿಸಿದರೂ ತುಂಬಾ ಆಶ್ಚರ್ಯ ಕೂಡಾ ಆಗಿತ್ತು ಎಂದು ಮಿಡೋರಿ ಹೇಳಿದ್ದಾರೆ.

ಮತ್ತಷ್ಟು ಓದಿ: Video: ಮೆಟ್ರೋದಲ್ಲಿ ಕಂಡ ಅಪರೂಪದ ದೃಶ್ಯ; ಗಂಡನ ಮಡಿಲಿನಲ್ಲಿ ವಿಶ್ರಾಂತಿ ಪಡೆದ ವೃದ್ಧೆ

ಇಬ್ಬರೂ ಪ್ರವಾಸಕ್ಕೆ ಹೋಗಿ ಜತೆಗೆ ಸಮಯ ಕಳೆದಿದ್ದರು. ಬಲೂನ್​​ಗಳು, ಹೂವುಗಳಿಂದ ತುಂಬಿದ ಹೋಟೆಲ್ ಕೊಠಡಿ ಆತ ಕೊಟ್ಟ ಸರ್ಪ್ರೈಸ್​​ಗಳಿಂದ ಆತನ ಪ್ರೀತಿಯಲ್ಲಿ ಬೀಳದೆ ಇರಲು ಕಾರಣವೇ ಇರಲಿಲ್ಲ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದಾಗ ಮಿಡೋರಿ ಕುಟುಂಬದಲ್ಲಿ ಸಾಕಷ್ಟು ವಿರೋಧಗಳು ಕೇಳಿಬಂದವು.

ಮಿಡೋರಿಗೆ ಈಗ 54 ವರ್ಷ ನೀವು ನಿಮ್ಮದೇ ಆದ ಸ್ವಂತ ಮಗುವನ್ನು ಹೊಂದಲು ಸಾಧ್ಯವಿಲ್ಲ, ನಿನಗಿನ್ನೂ 30 ವರ್ಷ ನಿನ್ನ ವಯಸ್ಸಿನವಳನ್ನೇ ಮದುವೆಯಾಗಬಹುದಲ್ಲಾ ಎಂದು ಇಸಾಮುಗೆ ಹಲವರು ಬುದ್ಧಿವಾದ ಹೇಳಿದ್ದರು.

ಆತ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಟೋಮಿಯೋಕಾದಲ್ಲಿ ಮನೆಯನ್ನು ಖರೀದಿಸಿ, ಮಿಡೋರಿ ಪೋಷಕರೆದುರು ಆಕೆಯನ್ನು ಮದುವೆ ಮಾಡಿಕೊಡುವಂತೆ ಧೈರ್ಯದಿಂದ ಕೇಳಿದ್ದ, ಅಂತಿಮವಾಗಿ ಇಬ್ಬರೂ ಹಿರಿಯರ ಆಶೀರ್ವಾದ ಸಿಕ್ಕಿತ್ತು. 2024ರ ಜುಲೈನಲ್ಲಿ ತಮ್ಮ ಮದುವೆಯನ್ನು ಅಧಿಕೃತವಾಗಿ ನೋಂದಾಯಿಸಿಕೊಂಡರು.ಟೊಮಿಯೋಕಾ ಮಿಡೋರಿಯ ಮಗಳಿಗೆ ಮಲತಂದೆ ಮಾತ್ರವಲ್ಲದೆ ಅವರ ನಾಲ್ವರು ಮೊಮ್ಮಕ್ಕಳಿಗೆ ಅಜ್ಜನೂ ಆಗಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ