ಇಮ್ರಾನ್ ಖಾನ್ ಪ್ರಧಾನಿಯಾಗಲು ಸಹಾಯ ಮಾಡಿ ತಪ್ಪು ಮಾಡಿದ್ದೇನೆಂದು ವಿಷಾದ ವ್ಯಕ್ತಪಡಿಸಿದ ಜಾವೇದ್ ಮಿಯಾಂದಾದ್

|

Updated on: Jul 02, 2023 | 8:50 AM

ಇಮ್ರಾನ್ ಖಾನ್(Imran Khan) ಪಾಕಿಸ್ತಾನದ ಪ್ರಧಾನಿಯಾಗಲು ಸಹಾಯ ಮಾಡಿ ನಾನು ತಪ್ಪು ಮಾಡಿದ್ದೇನೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ವಿಷಾದ ವ್ಯಕ್ತಪಡಿಸಿದ್ದಾರೆ.

ಇಮ್ರಾನ್ ಖಾನ್ ಪ್ರಧಾನಿಯಾಗಲು ಸಹಾಯ ಮಾಡಿ ತಪ್ಪು ಮಾಡಿದ್ದೇನೆಂದು ವಿಷಾದ ವ್ಯಕ್ತಪಡಿಸಿದ ಜಾವೇದ್ ಮಿಯಾಂದಾದ್
ಜಾವೇದ್-ಇಮ್ರಾನ್ ಖಾನ್
Follow us on

ಇಮ್ರಾನ್ ಖಾನ್(Imran Khan) ಪಾಕಿಸ್ತಾನದ ಪ್ರಧಾನಿಯಾಗಲು ಸಹಾಯ ಮಾಡಿ ನಾನು ತಪ್ಪು ಮಾಡಿದ್ದೇನೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್(Javed Miandad) ವಿಷಾದ ವ್ಯಕ್ತಪಡಿಸಿದ್ದಾರೆ. ಎಆರ್​ಐ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಮಾತನಾಡಿದ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅವರು ಪಿಟಿಐ ಅಧ್ಯಕ್ಷರಿಗೆ ಪ್ರಧಾನಿಯಾಗಲು ಸಹಾಯ ಮಾಡಿದೆ ಆದರೆ ಅವರು ಎಂದಿಗೂ ಅವರಿಗೆ ಧನ್ಯವಾದ ಹೇಳಲೇ ಇಲ್ಲ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನನ್ನ ತಂದೆಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ, ನಾನು ಮತ್ತು ನನ್ನ ಎಲ್ಲಾ ಸಹೋದರರು ಬೀದಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದೆವು ಎಂದಿದ್ದಾರೆ. ಜಾವೇದ್ ಮಿಯಾಂದಾದ್ ಅವರು ರಾಷ್ಟ್ರೀಯ ತಂಡಕ್ಕಾಗಿ ಆಡಿದಾಗಲೆಲ್ಲಾ ತಂಡವು ಸೋತರೆ ಕನಿಷ್ಠ ಅಂತರವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದೆ, ಯಾವುದೇ ಆಟಗಾರರು ನನ್ನ ನಾಯಕತ್ವವನ್ನು ವಿರೋಧಿಸಲಿಲ್ಲ ಎಂದರು.

ಇಮ್ರಾನ್ ಖಾನ್ ಅವರು ಆಗಸ್ಟ್ 2018 ರಲ್ಲಿ ಪಾಕಿಸ್ತಾನದ ಪ್ರಧಾನಿಯಾದರು ಮತ್ತು 3 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದರು ಆದರೆ ಅವರು ತಮ್ಮ 4 ನೇ ವರ್ಷವನ್ನು ಪೂರ್ಣಗೊಳಿಸುವ ಮೊದಲು, ಏಪ್ರಿಲ್ 2022 ರಲ್ಲಿ, ಅವಿಶ್ವಾಸ ನಿರ್ಣಯದಿಂದ ಅವರು ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವಂತಾಯಿತು.

ಮತ್ತಷ್ಟು ಓದಿ: Imran Khan: ಪಾಕಿಸ್ತಾನ ಸೇನೆಗೆ ಛೀಮಾರಿ ಹಾಕುವುದು ನನ್ನ ಮಕ್ಕಳನ್ನು ಟೀಕಿಸಿದಂತೆ: ಇಮ್ರಾನ್​​ ಖಾನ್​​​

ಜಾವೇದ್ ಮಿಯಾಂದಾದ್ ಇತ್ತೀಚೆಗೆ ಭಾರತ-ಪಾಕಿಸ್ತಾನ ಕ್ರಿಕೆಟ್ (IND vs PAK) ಕುರಿತು ಮಹತ್ವದ ಹೇಳಿಕೆ ನೀಡಿದ್ದರು. ಭಾರತ ತಂಡ ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ಬರಬೇಕು, ಬರದಿದ್ದರೆ ಪಾಕಿಸ್ತಾನ ತಂಡವೂ ಭಾರತಕ್ಕೆ ಹೋಗಬಾರದು ಎಂದು ಹೇಳಿದ್ದರು.

ಪಾಕಿಸ್ತಾನ ಕೂಡ ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಆಡುವುದನ್ನು ವಿರೋಧಿಸಿತ್ತು, ಆದರೆ ಐಸಿಸಿ ಅವರ ಎಲ್ಲಾ ಆಕ್ಷೇಪಣೆಗಳನ್ನು ತಿರಸ್ಕರಿಸಿ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ