ಟೇಕಾಫ್ ವೇಳೆ ಕಟ್ಟಡಕ್ಕೆ ಡಿಕ್ಕಿ: ನೂರಾರು ಪ್ರಯಾಣಿಕರಿದ್ದ ವಿಮಾನ ಪತನ

ಕಜಕಿಸ್ತಾನ: ಕಜಕಿಸ್ತಾನದ ಆಲ್ಮಟಿ ಏರ್‌ಪೋರ್ಟ್‌ ಬಳಿ ಭೀಕರ ವಿಮಾನ ಅಪಘಾತವಾಗಿದೆ. ಟೇಕಾಫ್ ಆಗುವ ವೇಳೆ ಕಟ್ಟಡಕ್ಕೆ ಡಿಕ್ಕಿ ಹೊಡೆದು ನೂರಾರು ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದೆ. ದುರಂತಕ್ಕೀಡಾದ ವಿಮಾನವು ಬೆಕ್‌ ಏರ್‌ಲೈನ್ಸ್‌ಗೆ ಸೇರಿದ್ದಾಗಿದೆ. ವಿಮಾನದಲ್ಲಿ ಐದು ಮಂದಿ ಸಿಬ್ಬಂದಿ ಸೇರಿ 100 ಜನ ತೆರಳುತ್ತಿದ್ದರು. 30 ಮಂದಿ ಸಾವಿಗೀಡಾಗಿದ್ದು, 35 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ರನ್ ವೇ ಅಂತ್ಯದಲ್ಲಿ ಹಳ್ಳಿಯಿದ್ದು, ಹಿಮಾವೃತ ಪ್ರದೇಶದಲ್ಲಿ ಅಪಘಾತ ನಡೆದಿದೆ. ​

ಟೇಕಾಫ್ ವೇಳೆ ಕಟ್ಟಡಕ್ಕೆ ಡಿಕ್ಕಿ: ನೂರಾರು ಪ್ರಯಾಣಿಕರಿದ್ದ ವಿಮಾನ ಪತನ
ಸಾಧು ಶ್ರೀನಾಥ್​

Updated on: Dec 27, 2019 | 11:14 AM

ಕಜಕಿಸ್ತಾನ: ಕಜಕಿಸ್ತಾನದ ಆಲ್ಮಟಿ ಏರ್‌ಪೋರ್ಟ್‌ ಬಳಿ ಭೀಕರ ವಿಮಾನ ಅಪಘಾತವಾಗಿದೆ. ಟೇಕಾಫ್ ಆಗುವ ವೇಳೆ ಕಟ್ಟಡಕ್ಕೆ ಡಿಕ್ಕಿ ಹೊಡೆದು ನೂರಾರು ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದೆ. ದುರಂತಕ್ಕೀಡಾದ ವಿಮಾನವು ಬೆಕ್‌ ಏರ್‌ಲೈನ್ಸ್‌ಗೆ ಸೇರಿದ್ದಾಗಿದೆ. ವಿಮಾನದಲ್ಲಿ ಐದು ಮಂದಿ ಸಿಬ್ಬಂದಿ ಸೇರಿ 100 ಜನ ತೆರಳುತ್ತಿದ್ದರು. 30 ಮಂದಿ ಸಾವಿಗೀಡಾಗಿದ್ದು, 35 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ರನ್ ವೇ ಅಂತ್ಯದಲ್ಲಿ ಹಳ್ಳಿಯಿದ್ದು, ಹಿಮಾವೃತ ಪ್ರದೇಶದಲ್ಲಿ ಅಪಘಾತ ನಡೆದಿದೆ. ​

Published On - 11:08 am, Fri, 27 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us