ಪ್ರಧಾನಿ ನರೇಂದ್ರ ಮೋದಿ(Narendra Modi) 3 ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದು, ಈಗಾಗಲೇ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಅದರಂತೆ ಇಂದು(ಸೆ.22) ನ್ಯೂಯಾರ್ಕ್‌ನ ನಸ್ಸೌ ವೆಟರನ್ಸ್ ಮೆಮೋರಿಯಲ್ ಕೊಲಿಜಿಯಂನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನಾನು ಸ್ವರಾಜ್ಯಕ್ಕಾಗಿ ನನ್ನ ಪ್ರಾಣವನ್ನು ತೆರಲು ಸಾಧ್ಯವಿಲ್ಲ. ಆದರೆ, ಸಮೃದ್ಧ ಭಾರತಕ್ಕೆ ನನ್ನ ಜೀವನ ಮುಡಿಪಾಗಿಡುತ್ತೇನೆ. ನಿಮ್ಮ ಪ್ರೀತಿ ನನಗೆ ಆಶೀರ್ವಾದವಾಗಿದೆ ಎಂದರು.
ನೀವು ಭಾರತವನ್ನು ಅಮೆರಿಕಕ್ಕೆ ಮತ್ತು ಅಮೆರಿಕವನ್ನು ಭಾರತಕ್ಕೆ ಸಂಪರ್ಕಿಸಿದ್ದೀರಿ. ನಿಮ್ಮ ಕೌಶಲ್ಯ, ಪ್ರತಿಭೆ ಮತ್ತು ಬದ್ಧತೆಗೆ ಯಾವುದೇ ಸ್ಪರ್ಧೆಯಿಲ್ಲ. ನೀವು ಏಳು ಸಮುದ್ರಗಳ ಅಂತರದಲ್ಲಿ ಬಂದಿರಬಹುದು, ಆದರೆ ಯಾವುದೇ ಸಮುದ್ರವು ನಿಮ್ಮನ್ನು ಭಾರತದಿಂದ ದೂರವಿರಿಸುವಷ್ಟು ಆಳವನ್ನು ಹೊಂದಿಲ್ಲ. ಭಾರತ ನಮಗೆ ಕಲಿಸಿದುದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ:ಕಳ್ಳಸಾಗಣೆಯಾಗಿದ್ದ ಭಾರತದ 297 ಅಮೂಲ್ಯ ಪ್ರಾಚೀನ ವಸ್ತುಗಳನ್ನು ಮೋದಿಗೆ ಹಸ್ತಾಂತರಿಸಿದ ಬೈಡನ್
ನಾವು ಎಲ್ಲಿಗೆ ಹೋದರೂ, ನಾವು ಎಲ್ಲರನ್ನು ಕುಟುಂಬವಾಗಿ ಸ್ವೀಕರಿಸುತ್ತೇವೆ. ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳುವುದು, ವೈವಿಧ್ಯತೆಯಲ್ಲಿ ಬದುಕುವುದು ನಮ್ಮ ರಕ್ತನಾಳಗಳಲ್ಲಿದೆ. ಇದೇ ವೇಳೆ ತಮಾಷೆಯಾಗಿ ಜಗತ್ತಿಗೆ AI ಅಂದ್ರೆ ಕೃತಕ ಬುದ್ಧಿಮತ್ತೆ. ಆದರೆ, ನನಗೆ AI ಎಂದರೆ ಅಮೆರಿಕ-ಭಾರತ ಎಂದರು. ಇನ್ನು ಭಾರತವು ಈಗ ಅವಕಾಶಗಳ ನಾಡಾಗಿದೆ. ಭಾರತ ಇನ್ನು ಮುಂದೆ ಅವಕಾಶಗಳಿಗಾಗಿ ಕಾಯುವುದಿಲ್ಲ. ಅವಕಾಶಗಳನ್ನು ಸೃಷ್ಟಿಸುತ್ತದೆ. ಭಾರತ ಶಕ್ತಿ ಮತ್ತು ಕನಸುಗಳಿಂದ ತುಂಬಿದೆ. ಪ್ರತಿದಿನ ನಾವು ಹೊಸ ಹೊಸ ಸಾಧನೆಗಳನ್ನ ಕಾಣುತ್ತೇವೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:55 pm, Sun, 22 September 24