PM Modi Sri Lanka Visit: ಶ್ರೀಲಂಕಾದಲ್ಲಿ ಮಹೋ-ಅನುರಾಧಪುರ ರೈಲು ಮಾರ್ಗ ಉದ್ಘಾಟಿಸಿದ ಮೋದಿ

ಧಾನಿ ನರೇಂದ್ರ ಮೋದಿಯವರ ಶ್ರೀಲಂಕಾ ಭೇಟಿ ಪೂರ್ಣಗೊಂಡಿದೆ. ಇಂದು ಅನುರಾಧಪುರದಲ್ಲಿ ಮಹೋ-ಅನುರಾಧಪುರ ರೈಲು ಮಾರ್ಗ ಉದ್ಘಾಟಿಸಿದರು. ಶ್ರೀಲಂಕಾ ಪ್ರವಾಸದ ಕೊನೆಯ ದಿನದಂದು, ಅವರು ಬೆಳಗ್ಗೆ ಬೇಗನೆ ಅನುರಾಧಪುರಕ್ಕೆ ಭೇಟಿ ನೀಡಿದ್ದರು. ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ಡಿಸಾನಾಯಕೆ ಅವರೊಂದಿಗೆ ಜಯ ಶ್ರೀ ಮಹಾ ಬೋಧಿ ದೇವಸ್ಥಾನಕ್ಕೆ ಭೇಟಿ ನೀಡಿದರು.

PM Modi Sri Lanka Visit: ಶ್ರೀಲಂಕಾದಲ್ಲಿ ಮಹೋ-ಅನುರಾಧಪುರ ರೈಲು ಮಾರ್ಗ ಉದ್ಘಾಟಿಸಿದ ಮೋದಿ
ನರೇಂದ್ರ ಮೋದಿ

Updated on: Apr 06, 2025 | 12:00 PM

ಕೊಲಂಬೋ, ಏಪ್ರಿಲ್ 06: ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಶ್ರೀಲಂಕಾ ಭೇಟಿ ಪೂರ್ಣಗೊಂಡಿದೆ. ಇಂದು ಅನುರಾಧಪುರದಲ್ಲಿ ಮಹೋ-ಅನುರಾಧಪುರ ರೈಲು ಮಾರ್ಗ ಉದ್ಘಾಟಿಸಿದರು. ಶ್ರೀಲಂಕಾ ಪ್ರವಾಸದ ಕೊನೆಯ ದಿನವಾದ ಇಂದು ಬೆಳಗ್ಗೆ ಬೇಗನೆ ಅನುರಾಧಪುರಕ್ಕೆ ಭೇಟಿ ನೀಡಿದ್ದರು. ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರೊಂದಿಗೆ ಜಯ ಶ್ರೀ ಮಹಾ ಬೋಧಿ ದೇವಸ್ಥಾನಕ್ಕೆ ತೆರಳಿದ್ದರು.

ಇದಾದ ನಂತರ, ಪ್ರಧಾನಿ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ  ಜಂಟಿಯಾಗಿ ಮಹೋ-ಅನುರಾಧಪುರ ರೈಲು ಮಾರ್ಗದ ಸಿಗ್ನಲಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿದರು. ಇದು ಭಾರತ ಸರ್ಕಾರದ ಸಹಾಯದಿಂದ ಪೂರ್ಣಗೊಂಡ ಯೋಜನೆಯಾಗಿದೆ. ಪ್ರಧಾನಿ ಮೋದಿ ಅವರು ಮಹೋ-ಒಮಂಥೈ ರೈಲು ಮಾರ್ಗ ಉದ್ಘಾಟಿಸಿದರು. ಇಲ್ಲಿಂದ ಅವರು ರೈಲಿಗೆ ಹಸಿರು ನಿಶಾನೆ ತೋರಿದರು.

ಇದನ್ನೂ ಓದಿ
ಶ್ರೀಲಂಕಾದ 1996ರ ವಿಶ್ವಕಪ್ ಹೀರೋಗಳ ಜೊತೆ ಮೋದಿ ಸಂವಾದ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಮೋದಿಗೆ ಶ್ರೀಲಂಕಾದ ಅತ್ಯುನ್ನತ ಗೌರವ ಮಿತ್ರ ವಿಭೂಷಣ ಪ್ರಶಸ್ತಿ ಪ್ರದಾನ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ

ಶ್ರೀಲಂಕಾ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಶ್ರೀಲಂಕಾ ಮಿತ್ರ ವಿಭೂಷಣ ಸಮ್ಮಾನ್’ ನೀಡಿ ಗೌರವಿಸಲಾಗಿದೆ. ಶ್ರೀಲಂಕಾ ಸರ್ಕಾರವು ಶ್ರೀಲಂಕಾದೊಂದಿಗೆ ಉತ್ತಮ ಸಂಬಂಧ ಹೊಂದಿರುವ ದೇಶಗಳ ಮುಖ್ಯಸ್ಥರಿಗೆ ಈ ಗೌರವವನ್ನು ನೀಡುತ್ತದೆ.

ಭಾರತವು ಐತಿಹಾಸಿಕವಾಗಿ ಶ್ರೀಲಂಕಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಅಲ್ಲದೆ, ಶ್ರೀಲಂಕಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ, ಶ್ರೀಲಂಕಾಕ್ಕೆ ಸಹಾಯಹಸ್ತ ಚಾಚಿದ ಮೊದಲ ದೇಶ ಭಾರತವಾಗಿತ್ತು.

ಮತ್ತಷ್ಟು ಓದಿ: ಶ್ರೀಲಂಕಾದ 1996ರ ವಿಶ್ವಕಪ್ ಹೀರೋಗಳ ಜೊತೆ ಮೋದಿ ಸಂವಾದ; ಪ್ರಧಾನಿಯ ಸರಳತನಕ್ಕೆ ಮಾರುಹೋದ ಕ್ರಿಕೆಟ್ ದಿಗ್ಗಜರು

ಈ ಉತ್ತಮ ಸಂಬಂಧಗಳನ್ನು ಗುರುತಿಸಿ, ಶ್ರೀಲಂಕಾ ಸರ್ಕಾರವು ಪ್ರಧಾನಿ ಮೋದಿಯವರಿಗೆ ಈ ಗೌರವವನ್ನು ನೀಡಿದೆ. ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ಡಿಸ್ಸಾನಾಯಕೆ ಅವರು ಪ್ರಧಾನಿ ಮೋದಿ ಅವರಿಗೆ ‘ಮಿತ್ರ ವಿಭೂಷಣಂ ಸಮ್ಮಾನ್’ ಪದಕವನ್ನು ನೀಡಿ ಗೌರವಿಸಿದರು. ಈ ಗೌರವವನ್ನು ಸ್ವೀಕರಿಸಿದ ನಂತರ, ಪ್ರಧಾನಿ ಮೋದಿ ಅವರು, ಇದು ಭಾರತದ 140 ಕೋಟಿ ದೇಶವಾಸಿಗಳಿಂದ ಸಂದ ಗೌರವ ಎಂದು ಹೇಳಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:59 am, Sun, 6 April 25