ಬ್ರೆಜಿಲ್ನಲ್ಲಿ ಜಿ20 ಶೃಂಗಸಭೆ; ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟು ಕುರಿತು ಧ್ವನಿಯೆತ್ತಿದ ಪ್ರಧಾನಿ ಮೋದಿ
G20 Summit: ಬ್ರೆಜಿಲ್ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಆಹಾರ, ಇಂಧನ ಹಾಗೂ ರಸಗೊಬ್ಬರ ಬಿಕ್ಕಟ್ಟುಗಳ ಬಗ್ಗೆ ಜಾಗತಿಕವಾಗಿ ಗಮನ ಕೇಂದ್ರೀಕರಿಸುವ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. ಹಾಗೇ, ಹಸಿವು ಮತ್ತು ಬಡತನದ ವಿರುದ್ಧ ಜಾಗತಿಕ ಮೈತ್ರಿ ಕುರಿತು ಬ್ರೆಜಿಲ್‌ನ ಉಪಕ್ರಮವನ್ನು ಭಾರತ ಬೆಂಬಲಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಿಯೋ: ಹಸಿವು ಮತ್ತು ಬಡತನದ ವಿರುದ್ಧ ಹೋರಾಟದ” ಕುರಿತು ಬ್ರೆಜಿಲ್ನಲ್ಲಿ ಜಿ20 ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಂತರ್ಗತ ಅಭಿವೃದ್ಧಿ ಮತ್ತು ಜಾಗತಿಕ ದಕ್ಷಿಣದ ಆಕಾಂಕ್ಷೆಗಳಿಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಬ್ರೆಜಿಲ್ ಆಯೋಜಿಸಿದ 19ನೇ ಜಿ20 ನಾಯಕರ ಶೃಂಗಸಭೆಯಲ್ಲಿ ಮೋದಿ ಪಾಲ್ಗೊಂಡಿದ್ದಾರೆ. ಅಲ್ಲಿ ಜಾಗತಿಕ ನಾಯಕರು ಬಡತನ ನಿವಾರಣೆ, ಆಹಾರ ಭದ್ರತೆ ಮತ್ತು ಜಾಗತಿಕ ಆಡಳಿತ ಸುಧಾರಣೆಗಳಂತಹ ನಿರ್ಣಾಯಕ ವಿಷಯಗಳ ಕುರಿತು ಚರ್ಚಿಸಿದ್ದಾರೆ.
ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗ್ಲೋಬಲ್ ಸೌತ್‌ಗಾಗಿ ಧ್ವನಿ ಎತ್ತಿದ್ದಾರೆ. ಈ ಪ್ರದೇಶದ ಸವಾಲುಗಳು ಮತ್ತು ಆದ್ಯತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡಾಗ ಮಾತ್ರ ಜಾಗತಿಕ ವೇದಿಕೆಯಲ್ಲಿ ನಡೆಯುತ್ತಿರುವ ಚರ್ಚೆಗಳು ಯಶಸ್ವಿಯಾಗಲು ಸಾಧ್ಯ ಎಂದು ಒತ್ತಿ ಹೇಳಿದ್ದಾರೆ. “ಜಾಗತಿಕ ಸಂಘರ್ಷಗಳಿಂದ ಉಂಟಾದ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟಿನಿಂದ ಜಾಗತಿಕ ದಕ್ಷಿಣದ ದೇಶಗಳ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ನಾವು ಜಾಗತಿಕ ದಕ್ಷಿಣದ ಸವಾಲುಗಳು ಮತ್ತು ಆದ್ಯತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡಾಗ ಮಾತ್ರ ನಮ್ಮ ಚರ್ಚೆಗಳು ಯಶಸ್ವಿಯಾಗುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
At the G20 Summit in Rio de Janeiro, spoke at the Session on the ‘Fight Against Hunger and Poverty.’ This is an important subject and success in this sector will contribute greatly towards sustainable progress. During my remarks, I talked about India’s efforts, notably how we… pic.twitter.com/tHXzLIJkM2
— Narendra Modi (@narendramodi) November 18, 2024
ಇದನ್ನೂ ಓದಿ: ನೈಜೀರಿಯಾ ಅಧ್ಯಕ್ಷರಿಗೆ ಉಡುಗೊರೆಯಾಗಿ ಕೊಲ್ಲಾಪುರದ ಬೆಳ್ಳಿ ಕಲಾಕೃತಿ ನೀಡಿದ ಪ್ರಧಾನಿ ಮೋದಿ
ನಾವು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಆದ್ಯತೆ ನೀಡಿರುವುದು ಅತ್ಯಂತ ತೃಪ್ತಿಯ ವಿಷಯವಾಗಿದೆ. ನಾವು ಅಂತರ್ಗತ ಅಭಿವೃದ್ಧಿ, ಮಹಿಳಾ ನೇತೃತ್ವದ ಅಭಿವೃದ್ಧಿ ಮತ್ತು ಯುವ ಶಕ್ತಿಯ ಮೇಲೆ ಕೇಂದ್ರೀಕರಿಸಿದ್ದೇವೆ. ಗ್ಲೋಬಲ್ ಸೌತ್‌ನ ಭರವಸೆಗಳು ಮತ್ತು ಆಕಾಂಕ್ಷೆಗಳಿಗೆ ರೆಕ್ಕೆಗಳನ್ನು ನೀಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಮೂರು ರಾಷ್ಟ್ರಗಳ ಭೇಟಿಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು (ಸೋಮವಾರ) ಬ್ರೆಜಿಲ್‌ಗೆ ಆಗಮಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ