PM Narendra Modi: ಸಿಇಒಗಳ ಜತೆ ಪ್ರಧಾನಿ ಮೋದಿ ಸಂವಾದ: ಭಾರತವನ್ನ ನೆನೆದ ಕಮಲಾ ಹ್ಯಾರಿಸ್​

|

Updated on: Jun 23, 2023 | 11:08 PM

ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾ ಪ್ರವಾಸದಲ್ಲಿದ್ದಾರೆ. ಮೂರನೆಯ ದಿನವಾದ ಇಂದು (ಜೂ.23) ವೈಟ್​ಹೌಸ್​ನಲ್ಲಿ ಸಿಇಒಗಳ ಜತೆ ಪ್ರಧಾನಿ ಮೋದಿ ಸಂವಾದ ನಡೆಸಿದರು.

PM Narendra Modi: ಸಿಇಒಗಳ ಜತೆ ಪ್ರಧಾನಿ ಮೋದಿ ಸಂವಾದ: ಭಾರತವನ್ನ ನೆನೆದ ಕಮಲಾ ಹ್ಯಾರಿಸ್​
ಸಿಇಒಗಳ ಜತೆ ಪ್ರಧಾನಿ ಮೋದಿ ಸಂವಾದ
Follow us on

ವಾಷಿಂಗ್ಟನ್​​: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಅಮೆರಿಕಾ (America) ಪ್ರವಾಸದಲ್ಲಿದ್ದಾರೆ. ಮೂರನೆಯ ದಿನವಾದ ಇಂದು (ಜೂ.23) ವ್ಯಾಪಾರ, ತಂತ್ರಜ್ಞಾನ, ಫ್ಯಾಷನ್​​ ಮತ್ತು ಮನರಂಜನೆಯ ಪ್ರಮುಖ ಭಾರತೀಯ ಮತ್ತು ಅಮೆರಿಕನ್​ ವ್ಯಕ್ತಿಗಳು ಪ್ರಧಾನಿ ಮೋದಿಯವರೊಂದಿಗೆ ಗೌರವಾರ್ಥ ವೈಟ್​ ಹೌಸ್ (White house) ಔತಣ ಕೂಟದಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ವೈಟ್​ಹೌಸ್​ನಲ್ಲಿ ಸಿಇಒಗಳ ಜತೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಈ ಸಂವಾದದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ಪ್ರಧಾನಿ ನರೇಂದ್ರ ಮೈಕ್ರೋಸಾಫ್ಟ್​​ ಸಿಇಒ ಸತ್ಯ ನಾಡೆಲ್ಲಾ, ಗೂಗಲ್​​ನ ಸಿಇಒ ಸುಂದರ್ ಪಿಚೈ, ಫೇಸ್​ಬುಕ್​ ಸಿಇಒ ಮಾರ್ಕ್ ಜುಕರ್​ಬರ್ಗ್, ಲಿಸಾ ಸು, ಟಿಮ್ ಕುಕ್, ಮುಕೇಶ್ ಅಂಬಾನಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.

ಈ ವೇಳೆ ಮಾತನಾಡಿದ ಅವರು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಅವರಿಗೆ ಅಭಿನಂದನೆ ಸಲ್ಲಿಸುವೆ. ಕಮಲಾ ಹ್ಯಾರಿಸ್ ಪೂರ್ವಜರು ಭಾರತದಿಂದ ಬಂದವರು ಎಂದರು.

ನನ್ನ ಜೀವನದಲ್ಲಿ ಭಾರತ ಪ್ರಮುಖಪಾತ್ರ ವಹಿಸುತ್ತಿದೆ. ಪ್ರಧಾನಿ ಮೋದಿ ಜಾಗತಿಕ ನಾಯಕನಾಗಿ ಮುನ್ನಡೆಸುತ್ತಿದ್ದಾರೆ ಎಂದು ವೈಟ್​ಹೌಸ್​ನಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಭಾರತದ ಮೂಲವನ್ನು ಮೆಲುಕು ಹಾಕಿದರು.