PM Modi In Qatar: ಅಬುಧಾಬಿಯಿಂದ ಕತಾರ್ ತಲುಪಿದ ಪ್ರಧಾನಿ ಮೋದಿ, ಅಮೀರ್ ಶೇಖ್ ಜತೆ ಮಾತುಕತೆ

|

Updated on: Feb 15, 2024 | 12:15 PM

ಪ್ರಧಾನಿ ಮೋದಿ ಅಬುಧಾಬಿಯಿಂದ ಕತಾರ್​ಗೆ ತೆರಳಿದ್ದಾರೆ. ಕತಾರ್ ಭೇಟಿಯ ಭಾಗವಾಗಿ, ಪ್ರಧಾನಿ ಅವರು ಎಮಿರ್ ಶೇಖ್ ತಮಿಂಬಿನ್ ಹಮದ್ ಅಲ್ ಥಾನಿ ಮತ್ತು ಇತರ ಗಣ್ಯರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

PM Modi In Qatar: ಅಬುಧಾಬಿಯಿಂದ ಕತಾರ್ ತಲುಪಿದ ಪ್ರಧಾನಿ ಮೋದಿ, ಅಮೀರ್ ಶೇಖ್ ಜತೆ ಮಾತುಕತೆ
ನರೇಂದ್ರ ಮೋದಿ
Follow us on

ಅಬುಧಾಬಿಯ ಯಶಸ್ವಿ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ(Narendra Modi) ಬುಧವಾರ ತಡರಾತ್ರಿ ಕತಾರ್ ತಲುಪಿದ್ದಾರೆ. ಪ್ರಧಾನಿ ಮೋದಿ ಅವರು ದೋಹಾದಲ್ಲಿಯೇ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. 2014ರಲ್ಲಿ ಪ್ರಧಾನಿಯಾದ ಬಳಿಕ ಪ್ರಧಾನಿ ಮೋದಿ ಎರಡನೇ ಬಾರಿಗೆ ಕತಾರ್‌ಗೆ ಭೇಟಿ ನೀಡಿದ್ದಾರೆ. ಗುರುವಾರ ಪ್ರಧಾನಿ ಮೋದಿ ಅವರು ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಭಾರತ ಮತ್ತು ಕತಾರ್ ನಡುವಿನ ಸೌಹಾರ್ದ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕತಾರ್‌ಗೆ ಆಗಮಿಸಿದ್ದಾರೆ. ಕತಾರ್‌ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಸುಲ್ತಾನ್ ಬಿನ್ ಸಾದ್ ಅಲ್-ಮುರೈಖಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

2015 ರಿಂದ ಪ್ರಧಾನಿ ಮೋದಿ ಯುಎಇಗೆ 7 ಬಾರಿ ಭೇಟಿ ನೀಡಿದ್ದಾರೆ. ಬುಧವಾರ ತಡರಾತ್ರಿ ಪ್ರಧಾನಿ ಮೋದಿಯವರ ದ್ವಿಪಕ್ಷೀಯ ಮಾತುಕತೆಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ವ್ಯಾಪಾರ ಮತ್ತು ಹೂಡಿಕೆ, ಇಂಧನ ಮುಂತಾದ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದ್ದರು.

ಮತ್ತಷ್ಟು ಓದಿ: ಜಗತ್ತಿಗೆ ಸ್ವಚ್ಛ, ಪಾರದರ್ಶಕ, ತಂತ್ರಜ್ಞಾನದ ಅರಿವಿರುವ ಸರ್ಕಾರಗಳ ಅಗತ್ಯವಿದೆ: ಯುಎಇಯಲ್ಲಿ ಪ್ರಧಾನಿ ಮೋದಿ

ಆ ಬಳಿಕ ಅಹ್ಲಾನ್ ಮೋದಿ ಹೆಸರಿನಲ್ಲಿ ಅಬುಧಾಬಿಯಲ್ಲಿ ಅನಿವಾಸಿ ಭಾರತೀಯರೊಂದಿಗೆ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಬಳಿಕ ಅಬುಧಾಬಿಯಲ್ಲಿ ಬಿಎಪಿಎಸ್​ ನಿರ್ಮಿಸಿರುವ ಸ್ವಾಮಿನಾರಾಯಣ ಹಿಂದೂ ದೇವಾಲಯವನ್ನು ಮೋದಿ ಉದ್ಘಾಟಿಸಿದರು. ಇದಾದ ಬಳಿಕ ಕತಾರ್ ನಿಂದ ಹೊರಟ ಮೋದಿ ಕತಾರ್ ರಾಜಧಾನಿ ದೋಹಾ ವಿಮಾನ ನಿಲ್ದಾಣ ತಲುಪಿದರು.

ಏತನ್ಮಧ್ಯೆ, ಬೇಹುಗಾರಿಕೆ ಆರೋಪದಲ್ಲಿ ಬಂಧಿತರಾಗಿದ್ದ 8 ಮಾಜಿ ಭಾರತೀಯ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಪ್ರಧಾನಿಯವರ ಕತಾರ್ ಭೇಟಿ ಮಹತ್ವ ಪಡೆದುಕೊಂಡಿದೆ.

ತಮ್ಮ ಕತಾರ್ ಭೇಟಿಯ ಭಾಗವಾಗಿ, ಪ್ರಧಾನಿ ಅವರು ಎಮಿರ್ ಶೇಖ್ ತಮಿಂಬಿನ್ ಹಮದ್ ಅಲ್ ಥಾನಿ ಮತ್ತು ಇತರ ಗಣ್ಯರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಕುರಿತು ಪ್ರಧಾನಿ ಚರ್ಚೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ಯಾವ್ಯಾವ ವಿಷಯಗಳ ಚರ್ಚೆ ನಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:36 am, Thu, 15 February 24