- Kannada News Photo gallery PM Narendra Modi inaugurates Bochasanwasi Akshar Purushottam Swaminarayan Sanstha BAPS Mandir in Abu Dhabi
In Pics: ಅಬುಧಾಬಿಯಲ್ಲಿ BAPS ಹಿಂದೂ ದೇಗುಲ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಬೋಚಸನ್‌ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ನಿರ್ಮಿಸಿದ ಸ್ವಾಮಿನಾರಾಯಣ ಪಂಥದ ದೇಗುಲ, ಅಬುದಾಭಿಯ ಮೊದಲ ಹಿಂದೂ ದೇವಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದ್ದಾರೆ.ದುಬೈ-ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯ ಅಲ್ ರಹ್ಬಾ ಬಳಿಯ ಅಬು ಮ್ರೇಖಾದಲ್ಲಿ 27 ಎಕರೆ ಪ್ರದೇಶದಲ್ಲಿದೆ ಈ ಭವ್ಯ ದೇಗುಲ. ಉದ್ಘಾಟನಾ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ
Updated on: Feb 14, 2024 | 8:08 PM

ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ನಿರ್ಮಿಸಿದ ಸ್ವಾಮಿನಾರಾಯಣ ಪಂಥದ ದೇಗುಲವಾಗಿದೆ ಇದು

ಅಬುಧಾಬಿಯ ಮೊದಲ ಹಿಂದೂ ದೇವಾಲಯವನ್ನು ಭಕ್ತಿ ಪಠಣಗಳ ನಡುವೆ ಮತ್ತು ಸ್ವಾಮಿನಾರಾಯಣ ಪಂಥದ ಆಧ್ಯಾತ್ಮಿಕ ನಾಯಕರ ಸಮ್ಮುಖದಲ್ಲಿ ಉದ್ಘಾಟಿಸಿದ ಮೋದಿ

ತಿಳಿ ಗುಲಾಬಿ ಬಣ್ಣದ ರೇಷ್ಮೆ ಧೋತಿ ಮತ್ತು ಕುರ್ತಾ, ತೋಳಿಲ್ಲದ ಜಾಕೆಟ್ ಧರಿಸಿ ದೇವಾಲಯವನ್ನು ಜನರಿಗೆ ಅರ್ಪಿಸುವ ಸಮಾರಂಭದ ಆಚರಣೆಗಳಲ್ಲಿ ಭಾಗವಹಿಸಿದ ಮೋದಿ

ಅಬುಧಾಬಿಯ BAPS ಹಿಂದೂ ದೇವಾಲಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ BAPS ನ ಈಶ್ವರಚರಣದಾಸ್ ಸ್ವಾಮಿಯಿಂದ ಆತ್ಮೀಯ ಸ್ವಾಗತ

ಅಬುಧಾಬಿಯ ಮೊದಲ ಹಿಂದೂ ದೇವಾಲಯವಾದ ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ (BAPS) ಮಂದಿರದಲ್ಲಿ ಗ್ಲೋಬಲ್ ಆರತಿಯಲ್ಲಿ ಭಾಗವಹಿಸಿದ ನರೇಂದ್ರ ಮೋದಿ. 1,200 ಕ್ಕೂ ಹೆಚ್ಚು ದೇವಾಲಯಗಳಲ್ಲಿ ಏಕಕಾಲದಲ್ಲಿ ಆರತಿ ಮಾಡುವುದೇ ಗ್ಲೋಬಲ್ ಆರತಿ

"ವಾಸ್ತುಶಾಸ್ತ್ರದ ವಿಧಾನಗಳನ್ನು ಇಲ್ಲಿ ವೈಜ್ಞಾನಿಕ ತಂತ್ರಗಳೊಂದಿಗೆ ಸಂಯೋಜಿಸಲಾಗಿದೆ. ತಾಪಮಾನ, ಒತ್ತಡ ಮತ್ತು ಚಲನೆಯನ್ನು (ಭೂಕಂಪನ ಚಟುವಟಿಕೆ) ಅಳೆಯಲು ದೇವಾಲಯದ ಪ್ರತಿ ಹಂತದಲ್ಲಿ 300 ಕ್ಕೂ ಹೆಚ್ಚು ಹೈಟೆಕ್ ಸಂವೇದಕಗಳನ್ನು ಸ್ಥಾಪಿಸಲಾಗಿದೆ.

ಅಬುಧಾಬಿಯ ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ.

ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ದುಬೈ-ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯ ಅಲ್ ರಹ್ಬಾ ಬಳಿಯ ಅಬು ಮ್ರೇಖಾದಲ್ಲಿ 27 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ದೇವಾಲಯ ದೇವಾಲಯವನ್ನು ಉದ್ಘಾಟಿಸುವ ಮೊದಲು ಪ್ರಧಾನಿ ಅವರು ದೇವಾಲಯದಲ್ಲಿ ವರ್ಚುವಲ್ ಗಂಗಾ ಮತ್ತು ಯಮುನಾ ನದಿಗಳಲ್ಲಿ ನೀರನ್ನು ಅರ್ಪಿಸಿದರು.

ಅಬುಧಾಬಿಯಲ್ಲಿ BAPS ದೇವಾಲಯವನ್ನು ಉದ್ಘಾಟಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಬೋಚಸನ್ವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆ (BAPS) ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. BAPS ಮಂದಿರವು ಅಬುಧಾಬಿಯ ಮೊದಲ ಹಿಂದೂ ದೇವಾಲಯವಾಗಿದೆ.

ಮಂದಿರದ ವಿನ್ಯಾಸ ಮತ್ತು ನಿರ್ಮಾಣದ ಕಲೆಯನ್ನು ವಿವರಿಸುವ ಹಿಂದೂ ಧರ್ಮಗ್ರಂಥಗಳಾದ ಶಿಲ್ಪ ಮತ್ತು ಸ್ಥಾಪತ್ಯ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾದ ಪ್ರಾಚೀನ ಶೈಲಿಯ ನಿರ್ಮಾಣ ಮತ್ತು ರಚನೆಯ ಪ್ರಕಾರ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗಿದೆ.

ಅಬುಧಾಬಿಯಲ್ಲಿ ನಿರ್ಮಿಸಲಾದ ಹಿಂದೂ ದೇವಾಲಯ 108 ಅಡಿಗಳಷ್ಟಿದೆ. ಇದರಲ್ಲಿ 40,000 ಘನ ಅಡಿ ಅಮೃತಶಿಲೆ, 1,80,000 ಘನ ಅಡಿ ಮರಳುಗಲ್ಲು, 18,00,000 ಇಟ್ಟಿಗೆಗಳನ್ನು ಬಳಸಲಾಗಿದೆ.

ಇಲ್ಲಿನ ಪ್ರಾರ್ಥನಾ ಮಂದಿರದಲ್ಲಿ 3 ಸಾವಿರ ಮಂದಿ ಕುಳಿತುಕೊಳ್ಳುವ ಸಾಮರ್ಥ್ಯವಿದೆ, ಒಂದು ಸಮುದಾಯ ಕೇಂದ್ರ, ಒಂದು ಗ್ರಂಥಾಲಯ ಮತ್ತು ಮಕ್ಕಳ ಉದ್ಯಾನವನ್ನು ಒಳಗೊಂಡಿದೆ

ಸಂವೇದಕಗಳು ಸಂಶೋಧನೆಗಾಗಿ ಲೈವ್ ಡೇಟಾವನ್ನು ಒದಗಿಸುತ್ತವೆ. ಈ ಪ್ರದೇಶದಲ್ಲಿ ಯಾವುದೇ ಭೂಕಂಪ ಸಂಭವಿಸಿದರೆ, ದೇವಾಲಯವು ಅದನ್ನು ಪತ್ತೆ ಮಾಡುತ್ತದೆ



