ಅತ್ತ ಪತ್ನಿಗೆ ರೆಡ್ ನೋಟಿಸ್‌, ಇತ್ತ ನೀ. ಮೋದಿಯಿಂದ ಅಮೆರಿಕದಲ್ಲಿ 24 ಕೋಟಿ ವಸೂಲಿ

| Updated By: ಸಾಧು ಶ್ರೀನಾಥ್​

Updated on: Aug 26, 2020 | 1:11 PM

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ನೀರವ್‌ ಮೋದಿಯಿಂದ ಇದುವರೆಗೆ ಸುಮಾರು 24 ಕೋಟಿ ಹಣ ವಸೂಲಾಗಿದೆ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಿದೇಶಗಳಲ್ಲಿ ನಡೆಯುತ್ತಿರುವ ವ್ಯಾಜ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಿನಿಸ್ಟ್ರಿ ಆಫ್‌ ಕಾರ್ಪೋರೇಟ್‌ ಅಫೇರ್ಸ್‌ಗೆ ಈ ಸಂಬಂಧ ಪಿಎನ್‌ಬಿ ಮಾಹಿತಿ ನೀಡಿದೆ. ಅಮೆರಿಕದಲ್ಲಿ ನೀರವ್‌ ಮೋದಿಯ ಕಂಪನಿ ‘ಫೈರ್‌ಸ್ಟಾರ್‌ ಡೈಮಂಡ್‌’ ತಾನು ದಿವಾಳಿಯಾಗಿದ್ದೇನೆ ಎಂದು ಸಲ್ಲಿಸಿದ್ದ ಅರ್ಜಿಯ ಮಾಹಿತಿ ನಂತರ, ಕಾನೂನಿನ ಸಮರ ಸಾರಿದ್ದ […]

ಅತ್ತ ಪತ್ನಿಗೆ ರೆಡ್ ನೋಟಿಸ್‌, ಇತ್ತ ನೀ. ಮೋದಿಯಿಂದ ಅಮೆರಿಕದಲ್ಲಿ 24 ಕೋಟಿ ವಸೂಲಿ
Follow us on

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ನೀರವ್‌ ಮೋದಿಯಿಂದ ಇದುವರೆಗೆ ಸುಮಾರು 24 ಕೋಟಿ ಹಣ ವಸೂಲಾಗಿದೆ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಿದೇಶಗಳಲ್ಲಿ ನಡೆಯುತ್ತಿರುವ ವ್ಯಾಜ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಿನಿಸ್ಟ್ರಿ ಆಫ್‌ ಕಾರ್ಪೋರೇಟ್‌ ಅಫೇರ್ಸ್‌ಗೆ ಈ ಸಂಬಂಧ ಪಿಎನ್‌ಬಿ ಮಾಹಿತಿ ನೀಡಿದೆ. ಅಮೆರಿಕದಲ್ಲಿ ನೀರವ್‌ ಮೋದಿಯ ಕಂಪನಿ ‘ಫೈರ್‌ಸ್ಟಾರ್‌ ಡೈಮಂಡ್‌’ ತಾನು ದಿವಾಳಿಯಾಗಿದ್ದೇನೆ ಎಂದು ಸಲ್ಲಿಸಿದ್ದ ಅರ್ಜಿಯ ಮಾಹಿತಿ ನಂತರ, ಕಾನೂನಿನ ಸಮರ ಸಾರಿದ್ದ ಪಿಎನ್‌ಬಿ ಮತ್ತು ಎಂಸಿಎಗೆ ಇದು ಮೊದಲ ಜಯವಾಗಿದೆ.

ಅಮೆರಿಕ ಕಾನೂನಿನ ಪ್ರಕಾರ ಕಂಪನಿ ದಿವಾಳಿಗೆ ಅರ್ಜಿ ಸಲ್ಲಿಸಿದ ನಂತರ ಅದರ ಸಾಲಗಾರರಿಗೆ ಕಂಪನಿಯ ಆಸ್ತಿಗಳನ್ನು ಮಾರಿ ಬಂದ ಹಣವನ್ನು ಸಾಲದ ಪ್ರಮಾಣದ ಮೇಲೆ ಹಂಚಿಕೆ ಮಾಡಲಾಗುತ್ತೆ. ಇದರಂತೆ ಈಗ ಮೊದಲ ಕಂತಾಗಿ 3.25 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 24.33 ಕೋಟಿ ರೂ ಪಿಎನ್‌ಬಿಗೆ ಸಂದಾಯವಾಗಿದೆ.

ಇಷ್ಟೇ ಅಲ್ಲ ನೀರವ್‌ ಮೋದಿಯ ಇನ್ನೂ ಇತರ ಆಸ್ತಿಗಳ ಬಿಕರಿ ಬಾಕಿಯಿದ್ದು, ಆ ಪ್ರಕ್ರಿಯೆ ಮುಗಿದ ನಂತರ ಬ್ಯಾಂಕ್‌ಗೆ ಇನ್ನೂ ಸುಮಾುರ 50 ಕೋಟಿ ರೂಗಳು ಬರುವ ಸಾಧ್ಯತೆ ಇದೆಯಂದು ಪಿಎನ್‌ಬಿ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಅಂದ ಹಾಗೆ ನೀರವ್‌ ಮೋದಿಯ ನಂತರ ಈಗ ಆತನ ಪತ್ನಿ ಌಮಿ ಮೋದಿ ವಿರುದ್ದ ಕೂಡಾ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಕಳಿಸಿದೆ. ಇದು ಬ್ಯಾಂಕ್‌ ಒಂದರಲ್ಲಿ 2 ಬಿಲಿಯನ್‌ ಡಾಲರ್‌ ಹಗರಣಕ್ಕೆ ಸಂಬಂಧಿಸಿದ್ದು. ಒಟ್ಟಿನಲ್ಲಿ ಚೋರ ಗಂಡ ಚಾಂಡಾಲ ಹೆಂಡತಿಯಂತಾಗಿದೆ ಮಿಸ್ಟರ್‌ ಌಂಡ್‌ ಮಿಸೆಸ್‌ ಮೋದಿ ದಂಪತಿ ಕತೆ.

Published On - 12:48 pm, Wed, 26 August 20