AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಗೆದ್ದವನ ದೇಹಕ್ಕೆ ಮತ್ತೊಮ್ಮೆ ವಕ್ಕರಿಸಿದ ವೈರಸ್​!

ಕೊರೊನಾ ಅನ್ನೋದು ಕೇವಲ ಮಾಮೂಲಿ ಜ್ವರ ಇದ್ದಂಗೆ. ಮನುಷ್ಯನ ದೇಹವನ್ನು ಹೊಕ್ಕುವ ಈ ವೈರಸ್​ ಆತನಿಗೆ ಸ್ವಲ್ಪ ದಿನಗಳ ಕಾಲ ಕಾಟಕೊಟ್ಟು ನಂತರ ತನ್ನ ಪಾಡಿಗೆ ತಾನೇ ಹೊರಟುಹೋಗುತ್ತದೆ ಅಂತಾ ಯಾರಾದ್ರೂ ನಿಮಗೆ ಹೇಳಿದ್ರೇ ಈ ಸ್ಟೋರಿ ನೀವು ಓದಲೇ ಬೇಕು. ಕಳೆದ ಏಪ್ರಿಲ್​ನಲ್ಲಿ ಕೊರೊನಾ ವಿರುದ್ಧ ಹೋರಾಡಿ ಯಶಸ್ವಿಯಾಗಿ ಗುಣಮುಖನಾಗಿದ್ದೇನೆ ಎಂದು ಸಂಭ್ರಮಿಸುತ್ತಿದ್ದ ಚೀನಾದ ಹಾಂಗ್​ಕಾಂಗ್ ನಗರದ 33 ವರ್ಷದ ನಿವಾಸಿಗೆ ವೈರಸ್​ ಮತ್ತೊಮ್ಮೆ ದೊಡ್ಡ ಶಾಕ್​ ನೀಡಿದೆ. ಹೌದು, ಸೋಂಕಿನಿಂದ ಗುಣಮುಖನಾದ ಬಳಿಕ ಕೆಲಸದ […]

ಕೊರೊನಾ ಗೆದ್ದವನ ದೇಹಕ್ಕೆ ಮತ್ತೊಮ್ಮೆ ವಕ್ಕರಿಸಿದ ವೈರಸ್​!
ಕೊರೊನಾ ಟೆಸ್ಟ್
KUSHAL V
|

Updated on: Aug 25, 2020 | 7:18 PM

Share

ಕೊರೊನಾ ಅನ್ನೋದು ಕೇವಲ ಮಾಮೂಲಿ ಜ್ವರ ಇದ್ದಂಗೆ. ಮನುಷ್ಯನ ದೇಹವನ್ನು ಹೊಕ್ಕುವ ಈ ವೈರಸ್​ ಆತನಿಗೆ ಸ್ವಲ್ಪ ದಿನಗಳ ಕಾಲ ಕಾಟಕೊಟ್ಟು ನಂತರ ತನ್ನ ಪಾಡಿಗೆ ತಾನೇ ಹೊರಟುಹೋಗುತ್ತದೆ ಅಂತಾ ಯಾರಾದ್ರೂ ನಿಮಗೆ ಹೇಳಿದ್ರೇ ಈ ಸ್ಟೋರಿ ನೀವು ಓದಲೇ ಬೇಕು.

ಕಳೆದ ಏಪ್ರಿಲ್​ನಲ್ಲಿ ಕೊರೊನಾ ವಿರುದ್ಧ ಹೋರಾಡಿ ಯಶಸ್ವಿಯಾಗಿ ಗುಣಮುಖನಾಗಿದ್ದೇನೆ ಎಂದು ಸಂಭ್ರಮಿಸುತ್ತಿದ್ದ ಚೀನಾದ ಹಾಂಗ್​ಕಾಂಗ್ ನಗರದ 33 ವರ್ಷದ ನಿವಾಸಿಗೆ ವೈರಸ್​ ಮತ್ತೊಮ್ಮೆ ದೊಡ್ಡ ಶಾಕ್​ ನೀಡಿದೆ. ಹೌದು, ಸೋಂಕಿನಿಂದ ಗುಣಮುಖನಾದ ಬಳಿಕ ಕೆಲಸದ ನಿಮಿತ್ತ ಯೂರೋಪ್​ಗೆ ತೆರಳಿದ್ದ ಈ ಸಾಫ್ಟ್​ವೇರ್​ ಉದ್ಯೋಗಿ ತಾಯ್ನಾಡಿಗೆ ಮರಳಿಬಂದ ವೇಳೆ ಆತನಲ್ಲಿ ಮತ್ತೊಮ್ಮೆ ಸೋಂಕು ಪತ್ತೆಯಾಗಿದೆ ಎಂದು ಟೆಕ್ಕಿಯ ತಪಾಸಣೆ ನಡೆಸಿದ ಹಾಂಗ್​ಕಾಂಗ್ ವಿಶ್ವವಿದ್ಯಾಲಯದ ಸಂಶೋಧನಾಕಾರರು ಮಾಹಿತಿ ನೀಡಿದ್ದಾರೆ. ಇದರಿಂದ ಈ 33 ವರ್ಷದ ಸೋಂಕಿತ ಇಡೀ ಜಗತ್ತಿನಲ್ಲಿ ಕೊರೊನಾ ವೈರಸ್​ನಿಂದ ಮತ್ತೊಮ್ಮೆ ಅಟ್ಯಾಕ್​ ಆಗಿರೋ ಮೊದಲನೇ ದಾಖಲಿತ ಕೇಸ್​ ಎಂದು ತಿಳಿಸಿದ್ದಾರೆ.

ಎರಡನೇ ಬಾರಿ ಕೊರೊನಾ ಪಾಸಿಟಿವ್​ ಆದ ಸೋಂಕಿತನು ಕೊರೊನಾದ ಯಾವುದೇ ಗುಣಲಕ್ಷಣಗಳನ್ನ ಪ್ರದರ್ಶಿಸಿಲ್ಲವಂತೆ. ಈತನ ಮೇಲೆ ಪರೀಕ್ಷೆ ನಡೆಸಿದ ವೈದ್ಯರಿಗೆ ಟೆಕ್ಕಿಗೆ ಕೊರೊನಾದ ಎರಡು ಪ್ರಭೇದಗಳು ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ಜೊತೆಗೆ, ಮನುಷ್ಯನನ್ನ ಪದೇ ಪದೇ ಕಾಡುವ ಸಾಮಾನ್ಯ ಶೀತದಂತೆ ಈ ಕೊರೊನಾ ವೈರಸ್ ಸಹ ಮತ್ತೊಮ್ಮೆ ತಗಲುವ ಸಾಧ್ಯತೆಯಿದೆ ಎಂಬ ಮಾಹಿತಿ ನೀಡಿದ್ದಾರೆ.

ಇದಲ್ಲದೆ, ಸೋಂಕಿತನು ಕೊರೊನಾದ ಗುಣಲಕ್ಷಣಗಳನ್ನ ತೋರಿಸದೆ ಇದ್ದರೂ ತನ್ನಿಂದ ಇತರರಿಗೆ ಸೋಂಕು ಹರಡುವ ಸಾಧ್ಯತೆಯಿದೆ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ. ಜೊತೆಗೆ, ಕೊರೊನಾದಿಂದ ಗುಣಮುಖರಾದೋರಿಗೆ ಮತ್ತೊಮ್ಮೆ ವೈರಸ್​ ವಕ್ಕರಿಸುವ ಸಾಧ್ಯತೆ ಅವರವರ ರೋಗ ನಿರೋಧಕ ಶಕ್ತಿ ಮತ್ತು ಎರಡನೇ ಬಾರಿ ಅಟ್ಯಾಕ್​ ಮಾಡುವ ವೈರಸ್​ನ ಪ್ರಭೇದದ ಮೇಲೆ ನಿಶ್ಚಯವಾಗಲಿದೆ ಎಂದು ಅಮೆರಿಕಾದ ಸಾಂಕ್ರಾಮಿಕ ರೋಗ ತಜ್ಞ ಥಾಮಸ್​ ಫೈಲ್ ಅಭಿಪ್ರಾಯಪಟ್ಟಿದ್ದಾರೆ.

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ