AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ಸಾವಿರ ಲೀಟರ್‌ ಕೋಲಾಕ್ಕೆ ಅಡುಗೆ ಸೋಡಾ ಹಾಕಿದಾಗ ಏನಾಯ್ತು? ವಿಡಿಯೋ ನೋಡಿ!‌

ಕ್ರೇಜಿತನಕ್ಕೆ ಮಿತಿಯಂಬುದೇ ಇಲ್ಲ. ಅದು ಯಾವ ರೀತಿಯಲ್ಲಾದರೂ ಇರಬಹದು. ಆದ್ರೆ ಅಂಥ ಕ್ರೇಜಿಯಿಸಂ‌ ಕೆಲವೊಮ್ಮೆ ಪಾಪುಲ್ಯಾರಿಟಿ ತಂದುಕೊಡುತ್ತೆ. ದಿನಬೆಳಗಾಗೋದ್ರೊಳಗೆ ಸೆಲೆಬ್ರಿಟಿ ಅನಸ್ಕೋಬೇಕು, ಪಾಪುಲರ್‌ ಆಗಬೇಕು ಅನ್ನೋರು ಇಂಥ ಗಿಮಿಕ್‌ಗಳನ್ನ ಮಾಡ್ತಾರೆ. ಅಂಥದ್ದೇ ಒಂದು ಭಾರೀ ಗಿಮಿಕ್‌ ಈಗ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಹೌದು ರಷ್ಯಾದ ಯುಟ್ಯೂಬರ್‌ ಮ್ಯಾಕಿಮ್‌ ಮೊನಖೋವ್‌ ಎನ್ನುವ ವ್ಯಕ್ತಿ 10 ಸಾವಿರ ಲೀಟರ್‌ ಕೋಕಾಕೋಲಾ ಪಾನೀಯಕ್ಕೆ ಅಡುಗೆ ಸೋಡಾ ಸೇರಿಸಿ ಬೃಹತ್‌ ಸ್ಫೋಟವನ್ನುಂಟು ಮಾಡಿದ್ದಾನೆ. ಹೀಗೆ ಸ್ಫೋಟಗೊಂಡಿದ್ದನ್ನು 20 ನಿಮಿಷ ಕಾಲ […]

10 ಸಾವಿರ ಲೀಟರ್‌ ಕೋಲಾಕ್ಕೆ ಅಡುಗೆ ಸೋಡಾ ಹಾಕಿದಾಗ ಏನಾಯ್ತು? ವಿಡಿಯೋ ನೋಡಿ!‌
Guru
| Updated By: ಸಾಧು ಶ್ರೀನಾಥ್​|

Updated on:Aug 25, 2020 | 4:35 PM

Share

ಕ್ರೇಜಿತನಕ್ಕೆ ಮಿತಿಯಂಬುದೇ ಇಲ್ಲ. ಅದು ಯಾವ ರೀತಿಯಲ್ಲಾದರೂ ಇರಬಹದು. ಆದ್ರೆ ಅಂಥ ಕ್ರೇಜಿಯಿಸಂ‌ ಕೆಲವೊಮ್ಮೆ ಪಾಪುಲ್ಯಾರಿಟಿ ತಂದುಕೊಡುತ್ತೆ. ದಿನಬೆಳಗಾಗೋದ್ರೊಳಗೆ ಸೆಲೆಬ್ರಿಟಿ ಅನಸ್ಕೋಬೇಕು, ಪಾಪುಲರ್‌ ಆಗಬೇಕು ಅನ್ನೋರು ಇಂಥ ಗಿಮಿಕ್‌ಗಳನ್ನ ಮಾಡ್ತಾರೆ. ಅಂಥದ್ದೇ ಒಂದು ಭಾರೀ ಗಿಮಿಕ್‌ ಈಗ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಹೌದು ರಷ್ಯಾದ ಯುಟ್ಯೂಬರ್‌ ಮ್ಯಾಕಿಮ್‌ ಮೊನಖೋವ್‌ ಎನ್ನುವ ವ್ಯಕ್ತಿ 10 ಸಾವಿರ ಲೀಟರ್‌ ಕೋಕಾಕೋಲಾ ಪಾನೀಯಕ್ಕೆ ಅಡುಗೆ ಸೋಡಾ ಸೇರಿಸಿ ಬೃಹತ್‌ ಸ್ಫೋಟವನ್ನುಂಟು ಮಾಡಿದ್ದಾನೆ. ಹೀಗೆ ಸ್ಫೋಟಗೊಂಡಿದ್ದನ್ನು 20 ನಿಮಿಷ ಕಾಲ ವಿಡಿಯೋ ಮಾಡಿದ್ದಾನೆ. ಹೀಗೆ ಮಾಡಿದ ವಿಡಿಯೋವನ್ನು ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದು, ಇದನ್ನು ಇದುವರೆಗೆ ಬರೊಬ್ಬರಿ ಆರು ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಇದಕ್ಕಾಗಿ ಮ್ಯಾಕ್ಸಿಮ್‌ 9 ಸಾವಿರ ಡಾಲರ್‌ ಹಣ ಖರ್ಚು ಮಾಡಿದ್ದು ನಾಲ್ಕು ವರ್ಷಗಳ ಕಾಲ ಶ್ರಮ ಹಾಕಿದ್ದಾನೆ. ಸೋಮವಾರ ಯುಟ್ಯೂಬ್‌ನಲ್ಲಿ ವಿಡಿಯೋ ಅಪ್‌ಲೋಡ್‌ ಆದ ನಂತರ ಇದಕ್ಕೆ ಬರೋಬ್ಬರಿ 1.6 ಮಿಲಿಯನ್‌ ಲೈಕ್ಸ್‌ ಕೂಡಾ ಬಂದಿವೆ.

ಈ ಬಗ್ಗೆ ಯುಟ್ಯೂಬ್‌ನಲ್ಲಿ ಕಮೆಂಟ್‌ ಮಾಡಿರುವ ವ್ಯಕ್ತಿಯೊಬ್ಬರು ನಾಲ್ಕು ವರ್ಷ 9 ಸಾವಿರ ಡಾಲರ್‌ ಖರ್ಚು ಮಾಡುವುದಕ್ಕಿಂತ ಒಂದು ಲೀಟರ್‌ ಕೋಕಾ ಕೋಲಾ ಹಾಗೂ ಸ್ವಲ್ಪ ಅಡುಗೆ ಸೋಡಾ ಹಾಕಿ ಮನೆಯಲ್ಲಿಯೇ ಮಿನಿ ಸ್ಫೋಟ ಮಾಡಿ ಥ್ರಿಲ್‌ ಪಡೆಯಬಹುದು ಎಂದು ಕಮೆಂಟ್‌ ಕೂಡಾ ಮಾಡಿದ್ದಾರೆ.

Published On - 4:24 pm, Tue, 25 August 20

ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು