ಧಿಕ್ಕಾರ ಧಿಕ್ಕಾರ.. ಚೀನಾ ವಿರುದ್ಧ PoK ನಿವಾಸಿಗಳಿಂದ ಮುರ್ದಾಬಾದ್ ​ಘೋಷಣೆ!

| Updated By: ಸಾಧು ಶ್ರೀನಾಥ್​

Updated on: Aug 25, 2020 | 5:19 PM

ಪಾಕ್​ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಚೀನಾ ಮೂಲದ ಕಂಪನಿಗಳು ನಿರ್ಮಿಸಲಿರುವ ಬೃಹತ ಅಣೆಕಟ್ಟಿನ ಕಾಮಗಾರಿಗೆ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಕಳೆದ ಸೋಮವಾರ ರಾತ್ರಿ ನಡೆದ ಬೃಹತ ಪ್ರತಿಭಟನೆ ಮತ್ತು ಪಂಜಿನ ಱಲಿಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಚೀನಾ ಮೂಲದ ಕಂಪನಿಗಳು ಪ್ರಾಂತ್ಯದ ಪ್ರಮುಖ ನದಿಗಳಾದ ನೀಲಂ ಮತ್ತು ಝೇಲಂಗೆ ಅಡ್ಡವಾಗಿ ಅಣೆಕಟ್ಟು ನಿರ್ಮಿಸುವ ಟೆಂಡರ್​ ಪಡೆದಿದ್ದು ಇದಕ್ಕೆ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ನೀಲಂ, ಝೇಲಂನ ಹರಿಯಲು ಬಿಡಿ.. ನಮ್ಮನ್ನು ಬದುಕಲು ಬಿಡಿ ಎಂದು ಪ್ರತಿಭಟನೆಕಾರರು […]

ಧಿಕ್ಕಾರ ಧಿಕ್ಕಾರ.. ಚೀನಾ ವಿರುದ್ಧ PoK ನಿವಾಸಿಗಳಿಂದ ಮುರ್ದಾಬಾದ್ ​ಘೋಷಣೆ!
Follow us on

ಪಾಕ್​ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಚೀನಾ ಮೂಲದ ಕಂಪನಿಗಳು ನಿರ್ಮಿಸಲಿರುವ ಬೃಹತ ಅಣೆಕಟ್ಟಿನ ಕಾಮಗಾರಿಗೆ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಕಳೆದ ಸೋಮವಾರ ರಾತ್ರಿ ನಡೆದ ಬೃಹತ ಪ್ರತಿಭಟನೆ ಮತ್ತು ಪಂಜಿನ ಱಲಿಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.

ಚೀನಾ ಮೂಲದ ಕಂಪನಿಗಳು ಪ್ರಾಂತ್ಯದ ಪ್ರಮುಖ ನದಿಗಳಾದ ನೀಲಂ ಮತ್ತು ಝೇಲಂಗೆ ಅಡ್ಡವಾಗಿ ಅಣೆಕಟ್ಟು ನಿರ್ಮಿಸುವ ಟೆಂಡರ್​ ಪಡೆದಿದ್ದು ಇದಕ್ಕೆ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ನೀಲಂ, ಝೇಲಂನ ಹರಿಯಲು ಬಿಡಿ.. ನಮ್ಮನ್ನು ಬದುಕಲು ಬಿಡಿ ಎಂದು ಪ್ರತಿಭಟನೆಕಾರರು ಘೋಷಣೆಗಳನ್ನು ಕೂಗಿದರು.

ನದಿಗಳಿಗೆ ಅಡ್ಡವಾಗಿ ಆಜಾದ್​ ಪಟ್ಟನ್​ ಮತ್ತು ಕೊಹಾಲಾ ಎಂಬ ಎರಡು ಜಲವಿದ್ಯುತ್​ ಸ್ಥಾವರಗಳನ್ನು ನಿರ್ಮಿಸಲು ಚೀನಾ ಮತ್ತು ಪಾಕಿಸ್ತಾನ ಇತ್ತೀಚೆಗೆ ಒಪ್ಪಂದಕ್ಕೆ ಸಹಿ ಹಾಕಿವೆ.