AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Online ನಲ್ಲಿ ಬಟ್ಟೆ ಖರೀದಿಸಿದ ವ್ಯಕ್ತಿಗೆ ಕಾದಿತ್ತು ಬೀಗ್​ ಶಾಕ್​, ಏನದು?

ಅಮೇರಿಕಾದ ನ್ಯೂಯಾರ್ಕ್​ನಲ್ಲಿ ವ್ಯಕ್ತಿಯೊಬ್ಬರು ನೈಕ್ ಕಂಪನಿಯಿಂದ ಕೆಲವೊಂದು ವಸ್ತುಗಳನ್ನು ಆನ್​​ಲೈನ್​ ಮುಖಾಂತರ ಖರೀದಿ ಮಾಡಿದ್ದರು. ಆದರೆ ಖರೀದಿ ಮಾಡಿದ ವಸ್ತುಗಳ ಪಾರ್ಸಲ್​ ಬಾಕ್ಸನ್ನು ತೆರೆದು ನೋಡಿದ್ದಾಗ ವ್ಯಕ್ತಿಗೆ ಶಾಕ್​ ಕಾದಿತ್ತು. ಪಾರ್ಸಲ್​ ಬಾಕ್ಸ್​ನಲ್ಲಿದ್ದ ಬಟ್ಟೆಗಳ ಜೊತೆ ಹುಳುಗಳು ಸಹ ಕಂಡು ಬಂದಿವೆ. ಇದರಿಂದ ಆಶ್ಚರ್ಯಗೊಂಡ ವ್ಯಕ್ತಿ, ಹುಳುಗಳು ತೆವಳುತ್ತಿರುವ ಚಿತ್ರಗಳನ್ನು ಮತ್ತು ಹುಳುಗಳ ವೀಡಿಯೊ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾನು ನೈಕ್‌ನಿಂದ ಕೆಲವು ಬಟ್ಟೆಗಳನ್ನು ಖರೀದಿಸಿದ್ದೆ. ತಮಾಷೆಯೆಂದರೆ ಬಟ್ಟೆಗಳ ಜೊತೆಗೆ ಡಜನ್​ಗಟ್ಟಲೆ ಜೀವಂತ ಹುಳುಗಳೂ […]

Online ನಲ್ಲಿ ಬಟ್ಟೆ ಖರೀದಿಸಿದ ವ್ಯಕ್ತಿಗೆ ಕಾದಿತ್ತು ಬೀಗ್​ ಶಾಕ್​, ಏನದು?
ಸಾಧು ಶ್ರೀನಾಥ್​
|

Updated on: Aug 25, 2020 | 12:39 PM

Share

ಅಮೇರಿಕಾದ ನ್ಯೂಯಾರ್ಕ್​ನಲ್ಲಿ ವ್ಯಕ್ತಿಯೊಬ್ಬರು ನೈಕ್ ಕಂಪನಿಯಿಂದ ಕೆಲವೊಂದು ವಸ್ತುಗಳನ್ನು ಆನ್​​ಲೈನ್​ ಮುಖಾಂತರ ಖರೀದಿ ಮಾಡಿದ್ದರು. ಆದರೆ ಖರೀದಿ ಮಾಡಿದ ವಸ್ತುಗಳ ಪಾರ್ಸಲ್​ ಬಾಕ್ಸನ್ನು ತೆರೆದು ನೋಡಿದ್ದಾಗ ವ್ಯಕ್ತಿಗೆ ಶಾಕ್​ ಕಾದಿತ್ತು.

ಪಾರ್ಸಲ್​ ಬಾಕ್ಸ್​ನಲ್ಲಿದ್ದ ಬಟ್ಟೆಗಳ ಜೊತೆ ಹುಳುಗಳು ಸಹ ಕಂಡು ಬಂದಿವೆ. ಇದರಿಂದ ಆಶ್ಚರ್ಯಗೊಂಡ ವ್ಯಕ್ತಿ, ಹುಳುಗಳು ತೆವಳುತ್ತಿರುವ ಚಿತ್ರಗಳನ್ನು ಮತ್ತು ಹುಳುಗಳ ವೀಡಿಯೊ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಾನು ನೈಕ್‌ನಿಂದ ಕೆಲವು ಬಟ್ಟೆಗಳನ್ನು ಖರೀದಿಸಿದ್ದೆ. ತಮಾಷೆಯೆಂದರೆ ಬಟ್ಟೆಗಳ ಜೊತೆಗೆ ಡಜನ್​ಗಟ್ಟಲೆ ಜೀವಂತ ಹುಳುಗಳೂ ಪತ್ತೆಯಾಗಿವೆ ಎಂದು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಘಟನೆಯ ನಂತರ ಅವರು ನೈಕ್ ಕಂಪನಿಗೆ ನೈಜತೆಯನ್ನು ವಿವರಿಸಿದ್ದಾರೆ. ತಮ್ಮ ತಪ್ಪಿನ ಅರಿವಾದ ಕೂಡಲೇ ನೈಕ್ ಕಂಪನಿ ಸಂಪೂರ್ಣ ಹಣವನ್ನು ಮರುಪಾವತಿ ಮಾಡಿದಲ್ಲದೆ, ಬದಲಿ ವಸ್ತುಗಳನ್ನು ನೀಡಿದೆ.

https://www.facebook.com/BenjaminSmitheePersonal/posts/10104424746304984

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More