ನವದೆಹಲಿ: ಕೇರಳ ಮೂಲದ ಆರ್ಚ್‌ಬಿಷಪ್ ಮೊನ್ಸಿಂಜರ್ ಜಾರ್ಜ್ ಜಾಕೋಬ್ ಕೂವಕಾಡ್ ಅವರನ್ನು ಪೋಪ್ ಫ್ರಾನ್ಸಿಸ್ ಅವರು ಇಂದು ರಾತ್ರಿ ವ್ಯಾಟಿಕನ್ ಸಿಟಿಯ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ನಡೆದ ಸಮಾರಂಭದಲ್ಲಿ ಕಾರ್ಡಿನಲ್ ಶ್ರೇಣಿಗೆ ಏರಿಸಿದ್ದಾರೆ. ಜಾಗತಿಕ ಕ್ಯಾಥೋಲಿಕ್ ಚರ್ಚ್‌ಗೆ ಈ ಮಹತ್ವದ ಸಂದರ್ಭದಲ್ಲಿ ಕೂವಕಾಡ್ ಜೊತೆಗೆ ಇತರ 20 ಹೊಸ ಕಾರ್ಡಿನಲ್‌ಗಳು ಕೂಡ ಸೇರಲಿದ್ದಾರೆ. ಆರ್ಚ್‌ಬಿಷಪ್ ಮೊನ್ಸಿಂಜರ್ ಜಾರ್ಜ್ ಜಾಕೋಬ್ ಕೂವಕಾಡ್ ಅವರಿಗೆ ಈ ಮನ್ನಣೆ ಸಿಕ್ಕಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ದೀಕ್ಷೆಯ ನಂತರ, ಹೊಸದಾಗಿ ನೇಮಕಗೊಂಡ ಕಾರ್ಡಿನಲ್‌ಗಳು ಪೋಪ್ ಅವರ ಆಶೀರ್ವಾದವನ್ನು ಪಡೆಯಲು ವ್ಯಾಟಿಕನ್ ಅರಮನೆಗೆ ಭೇಟಿ ನೀಡಲಿದ್ದಾರೆ. ಭಾನುವಾರ ಮಧ್ಯಾಹ್ನ 1 ಗಂಟೆಗೆ (ಭಾರತೀಯ ಕಾಲಮಾನದ ಪ್ರಕಾರ) ಅವರು ಪ್ರಮುಖ ಧಾರ್ಮಿಕ ಕೂಟವಾದ ಯೂಕರಿಸ್ಟಿಕ್ ಆಚರಣೆಗಾಗಿ ಪೋಪ್ ಫ್ರಾನ್ಸಿಸ್ ಅವರ ಜೊತೆ ಸೇರಲಿದ್ದಾರೆ.
ಇಂದು ನಡೆದ ಸಮಾರಂಭದಲ್ಲಿ ಭಾಗವಹಿಸಲು ಕೇಂದ್ರ ಸಚಿವ ಜಾರ್ಜ್ ಕುರಿಯನ್ ಮತ್ತು ಭಾರತೀಯ ಕ್ರಿಶ್ಚಿಯನ್ ಸಮುದಾಯದ ಧರ್ಮಗುರುಗಳು ಕೂಡ ತೆರಳಿದ್ದಾರೆ. ಕೂವಕಾಡ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಜೀವ ಬೆದರಿಕೆ: ಮುಂಬೈ ಪೊಲೀಸರಿಗೆ ಐಎಸ್‌ಐ ಸಂಚಿನ ಬಗ್ಗೆ ಮೆಸೇಜ್
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ನೇತೃತ್ವದ ಏಳು ಸದಸ್ಯರ ಭಾರತೀಯ ನಿಯೋಗವು ಈ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಿದೆ. ಈ ನಿಯೋಗದಲ್ಲಿ ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್, ಸಂಸದರಾದ ಕೋಡಿಕುನ್ನಿಲ್ ಸುರೇಶ್ ಮತ್ತು ಡಾ. ಸತ್ನಮ್ ಸಿಂಗ್ ಸಂಧು, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಿಲ್ ಆಂಟೋನಿ, ಮಾಜಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಅನೂಪ್ ಆಂಟೋನಿ, ಬಿಜೆಪಿ ಮಾಜಿ ರಾಷ್ಟ್ರೀಯ ವಕ್ತಾರ ಟಾಮ್ ವಡಕ್ಕನ್ ಕೂಡ ಇದ್ದಾರೆ.
It is a matter of immense pride for India that Archbishop George Koovakad will be created as a Cardinal by His Holiness Pope Francis.
The Government of India sent a delegation led by Union Minister Shri George Kurian to witness this Ceremony.
Prior to the Ceremony, the Indian… pic.twitter.com/LPgX4hOsAW
— PMO India (@PMOIndia) December 7, 2024
ಪೋಪ್ ಫ್ರಾನ್ಸಿಸ್ ಅವರು ಅಕ್ಟೋಬರ್ 25ರಂದು ಟರ್ಕಿಯ ನಿಸಿಬಿಸ್‌ನ ನಾಮಸೂಚಕ ಆರ್ಚ್‌ಬಿಷಪ್ ಆಗಿ ಕೂವಕಾಡ್ ಅವರನ್ನು ನೇಮಿಸಿದರು. ವ್ಯಾಟಿಕನ್ನ ರಾಜತಾಂತ್ರಿಕ ದಳದ ಸದಸ್ಯರಾಗಿರುವ ಕೂವಕಾಡ್ ಅವರು ಅಲ್ಜೀರಿಯಾ, ಕೊರಿಯಾ, ಇರಾನ್ ಮತ್ತು ಕೋಸ್ಟರಿಕಾದಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾರ್ಡಿನಲ್ ಆಗಿ ಅವರ ಈ ಪದವಿ ಐತಿಹಾಸಿಕವಾಗಿದೆ. ಏಕೆಂದರೆ ಅವರು ವಿಶಿಷ್ಟವಾದ ಕೆಂಪು ಬಿರೆಟ್ಟಾವನ್ನು ಸ್ವೀಕರಿಸುವ ಮೂಲಕ ನೇರವಾಗಿ ಈ ಶ್ರೇಣಿಗೆ ಏರಿದದ ಏಕೈಕ ಭಾರತೀಯ ಕ್ಯಾಥೋಲಿಕ್ ಪಾದ್ರಿಯಾಗಿದ್ದಾರೆ.
ಇದನ್ನೂ ಓದಿ: 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ದೇಶವಾಗಿ ಮಾಡೋಣ; ಬಿಎಪಿಎಸ್ ಸ್ವಯಂಸೇವಕರನ್ನು ಹುರಿದುಂಬಿಸಿದ ಮೋದಿ
ಜಾರ್ಜ್ ಕೂವಕಾಡ್ ಯಾರು?:
51 ವರ್ಷದ ಪಾದ್ರಿ ಜಾರ್ಜ್ ಜಾಕೋಬ್ ಕೂವಕಾಡ್ ಕೇರಳದಲ್ಲಿ ಹುಟ್ಟಿ ಬೆಳೆದವರು. ಅವರು ಪ್ರಮುಖ ಸಮುದಾಯವಾದ ಚಂಗನಾಚೆರಿಯ ಸಿರೋ-ಮಲಬಾರ್ ಆರ್ಚ್‌ಡಯಾಸಿಸ್‌ಗೆ ಸೇರಿದವರು. ಜುಲೈ 24, 2004ರಂದು ಪಾದ್ರಿಯಾಗಿ ನೇಮಕಗೊಂಡ ಕೂವಕಾಡ್ ಅವರು ಕ್ಯಾನನ್ ಕಾನೂನಿನಲ್ಲಿ ಡಾಕ್ಟರೇಟ್ ಹೊಂದಿದ್ದಾರೆ.
ಕೂವಕಾಡ್ ಅವರು ವಿಶ್ವದಾದ್ಯಂತ ಚರ್ಚ್‌ಗಳಲ್ಲಿ ಈ ಮಿಷನ್‌ಗಳಲ್ಲಿ ಸಲಹೆಗಾರರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2020ರಲ್ಲಿ ಜಾರ್ಜ್ ಕೂವಕಾಡ್ ಅವರು ಪೋಪ್ ಫ್ರಾನ್ಸಿಸ್ ಅವರ ಅಂತರರಾಷ್ಟ್ರೀಯ ಪ್ರಯಾಣವನ್ನು ನೋಡಿಕೊಳ್ಳುವ ಸವಾಲಿನ ಸ್ಥಾನವಾದ ವ್ಯಾಟಿಕನ್ ರಾಜ್ಯ ಸಚಿವಾಲಯಕ್ಕೆ ನೇಮಕಗೊಂಡರು. ಈಗ ವೆಟಿಕನ್ ನಗರದಲ್ಲಿ ಕಾರ್ಡಿನಲ್ ಆಗುತ್ತಿರುವ ಜಾರ್ಜ್ ಕೂವಕಾಡ್ ಭಾರತಕ್ಕೆ ಐತಿಹಾಸಿಕ ಕ್ಷಣವಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:21 pm, Sat, 7 December 24