Kenya: ಕಗ್ಗತ್ತಲೆಯಲ್ಲಿ ಮುಳುಗಿದ ಕೀನ್ಯಾ ದೇಶ: ವಿದ್ಯುತ್ ಪೂರೈಕೆ ಸ್ಥಗಿತದಿಂದ ಸಂಕಷ್ಟಕ್ಕೆ ಸಿಲುಕಿದ ಜನ

|

Updated on: Mar 05, 2023 | 7:02 AM

Kenya power outage: ವಿದ್ಯುತ್​ ಸರಬರಾಜಿನಲ್ಲಿ ಅಡಚಣೆ ಉಂಟಾಗಿ ನಿನ್ನೆ (ಮಾ.4) ಕೀನ್ಯಾ ದೇಶದ ವಿವಿಧ ಭಾಗಗಳಲ್ಲಿ ವಿದ್ಯುತ್​​​​ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

Kenya: ಕಗ್ಗತ್ತಲೆಯಲ್ಲಿ ಮುಳುಗಿದ ಕೀನ್ಯಾ ದೇಶ: ವಿದ್ಯುತ್ ಪೂರೈಕೆ ಸ್ಥಗಿತದಿಂದ ಸಂಕಷ್ಟಕ್ಕೆ ಸಿಲುಕಿದ ಜನ
ಸಾಂಧರ್ಬಿಕ ಚಿತ್ರ
Follow us on

ನೈರೋಬಿ: ವಿದ್ಯುತ್​ ಸರಬರಾಜಿನಲ್ಲಿ ಅಡಚಣೆ ಉಂಟಾಗಿ ಶನಿವಾರ (ಮಾ.4) ಕೀನ್ಯಾ (Kenya power outage) ದೇಶದ ವಿವಿಧ ಭಾಗಗಳಲ್ಲಿ ವಿದ್ಯುತ್​​​​ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಶೀಘ್ರದಲ್ಲೆ ಸಮಸ್ಯೆ ಬಗೆಹರಿಸಿ ಮತ್ತೆ ವಿದ್ಯುತ್​ ಸರಬರಾಜನ್ನು ಸುಗಮಗೊಳಿಸುತ್ತೇವೆ ಎಂದು ಕಿನ್ಯಾ ವಿದ್ಯುತ್ ಸರಬರಾಜು ಇಲಾಖೆ (KPCL.co.ke) ಹೇಳಿದೆ. ಅನಾನುಕೂಲತೆಗಾಗಿ ನಾವು ನಮ್ಮ ಗ್ರಾಹಕರಿಗೆ ಕ್ಷಮೆಯಾಚಿಸುತ್ತೇವೆ ಎಂದಿದೆ. ಸಂಜೆ 6:00 ಗಂಟೆಯಿಂದಲೇ ವಿದ್ಯುತ್​ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ ವಿದ್ಯುತ್ ಸರಬರಾಜು ಸದ್ಯಕ್ಕೆ ರಾಜಧಾನಿ ನೈರೋಬಿಯದ ಕನಿಷ್ಠ ಒಂದು ಭಾಗಕ್ಕೆ ಮಾತ್ರ ಮರಳಿದೆ. ಇನ್ನು 2022ರ ಜನವರಿಯಲ್ಲಿ ಕೀನ್ಯಾದ ಜಲವಿದ್ಯುತ್ ಉತ್ಪಾದನಾ ಘಟಕದ ಹೈ-ವೋಲ್ಟೇಜ್ ಪ್ರಸರಣ ಮಾರ್ಗಕ್ಕೆ ಹಾನಿಯುಂಟಾಗಿದ್ದಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಮತ್ತಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:01 am, Sun, 5 March 23