
ಢಾಕಾ, ಜನವರಿ 13: ಬಾಂಗ್ಲಾದೇಶ(Bangladesh)ದ ಪೊಲೀಸ್ ಕಸ್ಟಡಿಯಲ್ಲಿದ್ದ ಶೇಖ್ ಹಸೀನಾರ ಪಕ್ಷದ ಹಿಂದೂ ನಾಯಕ ಪ್ರಳಯ್ ಚಾಕಿ ಸಾವನ್ನಪ್ಪಿದ್ದಾರೆ. ಜೈಲು ಅಧಿಕಾರಿಗಳು ಅವರಿಗೆ ವೈದ್ಯಕೀಯ ಆರೈಕೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಅವರ ಕುಟುಂಬದಿಂದ ಆರೋಪ ಕೇಳಿಬಂದಿದೆ. ಗಾಯಕರೂ ಆಗಿದ್ದ 60 ವರ್ಷದ ಪ್ರಳಯ್ ಚಾಕಿ, ಅವಾಮಿ ಲೀಗ್‌ನ ಪಬ್ನಾ ಜಿಲ್ಲಾ ಘಟಕದ ಸಾಂಸ್ಕೃತಿಕ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದರು, ಜೈಲು ಕಸ್ಟಡಿಯಲ್ಲಿದ್ದಾಗ ರಾಜ್‌ಶಾಹಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಬಾಂಗ್ಲಾದೇಶದ ದಿನಪತ್ರಿಕೆ ದಿ ಡೈಲಿ ಸ್ಟಾರ್ ವರದಿ ಮಾಡಿದೆ.
ಪಬ್ನಾ ಜೈಲಿನ ಸೂಪರಿಂಟೆಂಡೆಂಟ್ ಎಂಡಿ ಒಮೋರ್ ಫಾರೂಕ್ ಮಾತನಾಡಿ, ಚಾಕಿ ಮಧುಮೇಹ ಮತ್ತು ಹೃದ್ರೋಗ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ಕಾರಣದಿಂದಾಗಿ, ಜೈಲು ವೈದ್ಯರು ಮೊದಲು ಅವರನ್ನು ಪಬ್ನಾ ಸದರ್ ಆಸ್ಪತ್ರೆಗೆ ಕಳುಹಿಸಲಾಗಿತ್ತು, ಮತ್ತು ಅಲ್ಲಿಂದ ಶುಕ್ರವಾರ ರಾತ್ರಿ ಅವರನ್ನು ರಾಜಶಾಹಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪಬ್ನಾ ಜಿಲ್ಲಾ ಜೈಲಿನ ಸೂಪರಿಂಟೆಂಡೆಂಟ್ ಓಮೋರ್ ಫಾರೂಕ್ ಹೇಳಿದರು.
ಅವರು ಭಾನುವಾರ ರಾತ್ರಿ 9 ಗಂಟೆಯ ನಂತರ ರಾಜಶಾಹಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ ಎಂದು ಫಾರೂಕ್ ಹೇಳಿದರು. ಪ್ರಸಿದ್ಧ ಗಾಯಕ ಮತ್ತು ಸಂಗೀತ ನಿರ್ದೇಶಕರಾಗಿದ್ದರು. ಅವರು ಪಬ್ನಾದ ಶ್ರೀ ಶ್ರೀ ರಾಮ ಕೃಷ್ಣ ಸೇವಾಶ್ರಮದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದರು. ಆ ಸಮಯದಲ್ಲಿ ಯಾವುದೇ ಪ್ರಕರಣದಲ್ಲಿ ಹೆಸರಿಲ್ಲದಿದ್ದರೂ ಅವರ ತಂದೆಯನ್ನು ಬಂಧಿಸಲಾಗಿದೆ ಎಂದು ಅವರ ಮಗ ಸೋನಿ ಚಾಕಿ ಆರೋಪಿಸಿದ್ದಾರೆ.
ಮತ್ತಷ್ಟು ಓದಿ: ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ಕಾರ್ಮಿಕನ ಮೇಲೆ ಮಾರಣಾಂತಿಕ ಹಲ್ಲೆ!
ಆಗಸ್ಟ್ 4 ರ ಹಿಂಸಾಚಾರಕ್ಕೆ ಸಂಬಂಧಿಸಿದ ಸ್ಫೋಟಕ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ನಂತರ ತೋರಿಸಲಾಗಿದೆ ನನ್ನ ತಂದೆ ಬಹಳ ದಿನಗಳಿಂದ ಮಧುಮೇಹ ಮತ್ತು ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ಜೈಲಿನಲ್ಲಿ ಅವರ ಸ್ಥಿತಿ ಹದಗೆಟ್ಟಿತು, ಆದರೆ ಅಧಿಕಾರಿಗಳು ನಮಗೆ ಅಧಿಕೃತವಾಗಿ ಮಾಹಿತಿ ನೀಡಲಿಲ್ಲ ಎಂದು ಸೋನಿ ಆರೋಪಿಸಿದ್ದಾರೆ.
ಇತರರು ತಿಳಿಸಿದ ನಂತರ ನಾವು ಆಸ್ಪತ್ರೆಗೆ ಹೋದೆವು, ಆದರೆ ಅವರಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ, ಅದು ಅವರ ಸಾವಿಗೆ ಕಾರಣವಾಯಿತು. ಆರೋಪಗಳನ್ನು ತಿರಸ್ಕರಿಸಿದ ಫಾರೂಕ್, ಚೌಕಿಯ ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ ಅವರಿಗೆ ಔಷಧಿಗಳನ್ನು ನೀಡಲಾಗಿದೆ ಎಂದು ಒತ್ತಿ ಹೇಳಿದರು. ಅವರ ಸ್ಥಿತಿ ಗಂಭೀರವಾದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅವರು ಹೇಳಿದರು. ಕಳೆದ ಕೆಲವು ತಿಂಗಳುಗಳಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂಸಾಚಾರದ ಸರಣಿ ನಡೆದಿದೆ.