ಇಸ್ರೇಲ್- ಹಮಾಸ್ ಸಂಘರ್ಷ; ಶೆಲ್ ದಾಳಿಯಲ್ಲಿ ರಾಯಿಟರ್ಸ್ ಪತ್ರಕರ್ತ ಸಾವು, 6 ಮಂದಿಗೆ ಗಾಯ

|

Updated on: Oct 14, 2023 | 2:32 PM

ಪತ್ರಕರ್ತರ ಗುಂಪು ಇಸ್ರೇಲ್ ಗಡಿಗೆ ಸಮೀಪವಿರುವ ಅಲ್ಮಾ ಅಲ್-ಶಾಬ್ ಬಳಿ ಕೆಲಸ ಮಾಡುತ್ತಿದೆ, ಅಲ್ಲಿ ಇಸ್ರೇಲಿ ಮಿಲಿಟರಿ ಮತ್ತು ಲೆಬನಾನಿನ ಮಿಲಿಷಿಯಾ ಹಿಜ್ಬುಲ್ಲಾ ಗಡಿಯಲ್ಲಿ ಸಂಘರ್ಷ ನಡೆಸುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.ಲೆಬನಾನಿನ ಪ್ರಧಾನಿ ನಜೀಬ್ ಮಿಕಾಟಿ ಮತ್ತು ಹಿಜ್ಬುಲ್ಲಾ ಶಾಸಕರು ಘಟನೆಯನ್ನು ಇಸ್ರೇಲ್ ಮೇಲೆ ಆರೋಪಿಸಿದ್ದಾರೆ.

ಇಸ್ರೇಲ್- ಹಮಾಸ್ ಸಂಘರ್ಷ; ಶೆಲ್ ದಾಳಿಯಲ್ಲಿ ರಾಯಿಟರ್ಸ್ ಪತ್ರಕರ್ತ ಸಾವು, 6 ಮಂದಿಗೆ ಗಾಯ
ಇಸಾಮ್ ಅಬ್ದುಲ್ಲಾ
Image Credit source: Reuters via AP
Follow us on

ಲೆಬನಾನ್ ಅಕ್ಟೋಬರ್ 14: ಇಸ್ರೇಲ್‌ (Israel )ಕಡೆಯಿಂದ ಕ್ಷಿಪಣಿಗಳು ಹಾರಿದ್ದು, ಶುಕ್ರವಾರ ದಕ್ಷಿಣ ಲೆಬನಾನ್‌ನಲ್ಲಿ (Lebanon) ರಾಯಿಟರ್ಸ್ ವಿಡಿಯೊ ಪತ್ರಕರ್ತ ಇಸಾಮ್ ಅಬ್ದುಲ್ಲಾ (Issam Abdallah) ಈ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಅದೇ ವೇಳೆ ಇತರ ಆರು ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ (Reuters) ವರದಿ ಮಾಡಿದೆ. ದೃಶ್ಯದಲ್ಲಿದ್ದ ಅಸೋಸಿಯೇಟೆಡ್ ಪ್ರೆಸ್ ಫೋಟೋಗ್ರಾಫರ್ ರಾಯಿಟರ್ಸ್ ವಿಡಿಯೊಗ್ರಾಫರ್ ಅಬ್ದುಲ್ಲಾ ಅವರ ಶವವನ್ನು ಮತ್ತು ಗಾಯಗೊಂಡಿದ್ದ ಅಲ್ ಜಜೀರಾ ಮತ್ತು ಏಜೆನ್ಸ್ ಫ್ರಾನ್ಸ್-ಪ್ರೆಸ್ ಪತ್ರಕರ್ತರು ಸೇರಿದಂತೆ ಆರು ಮಂದಿ ಗಾಯಗೊಂಡಿರುವುದನ್ನು ನೋಡಿದ್ದಾರೆ. ಅವರಲ್ಲಿ ಕೆಲವರನ್ನು ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗಳಿಗೆ ರವಾನಿಸಲಾಯಿತು. ದೃಶ್ಯದ ಚಿತ್ರಗಳು ಸುಟ್ಟ ಕಾರನ್ನು ತೋರಿಸಿದೆ.

ಪತ್ರಕರ್ತರ ಗುಂಪು ಇಸ್ರೇಲ್ ಗಡಿಗೆ ಸಮೀಪವಿರುವ ಅಲ್ಮಾ ಅಲ್-ಶಾಬ್ ಬಳಿ ಕೆಲಸ ಮಾಡುತ್ತಿದೆ, ಅಲ್ಲಿ ಇಸ್ರೇಲಿ ಮಿಲಿಟರಿ ಮತ್ತು ಲೆಬನಾನಿನ ಮಿಲಿಷಿಯಾ ಹಿಜ್ಬುಲ್ಲಾ ಗಡಿಯಲ್ಲಿ ಸಂಘರ್ಷ ನಡೆಸುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.ಲೆಬನಾನಿನ ಪ್ರಧಾನಿ ನಜೀಬ್ ಮಿಕಾಟಿ ಮತ್ತು ಹಿಜ್ಬುಲ್ಲಾ ಶಾಸಕರು ಘಟನೆಯನ್ನು ಇಸ್ರೇಲ್ ಮೇಲೆ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ವಿನಂತಿಸಿದಾಗ ಇಸ್ರೇಲ್ ರಕ್ಷಣಾ ಪಡೆಗಳು ಅಥವಾ IDF ತಕ್ಷಣವೇ ಪ್ರತಿಕ್ರಿಯಿಸಲಿಲ್ಲ. ಇಸ್ರೇಲ್‌ನ UN ರಾಯಭಾರಿ ಗಿಲಾಡ್ ಎರ್ಡಾನ್ ಸುದ್ದಿಗೋಷ್ಠಿಯನ್ನುದ್ದೇಶಿಸಿ, ನಿಸ್ಸಂಶಯವಾಗಿ, ನಾವು ಎಂದಿಗೂ ತನ್ನ ಕೆಲಸವನ್ನು ಮಾಡುತ್ತಿರುವ ಯಾವುದೇ ಪತ್ರಕರ್ತರನ್ನು ಹೊಡೆಯಲು ಅಥವಾ ಕೊಲ್ಲಲು ಅಥವಾ ಶೂಟ್ ಮಾಡಲು ಬಯಸುವುದಿಲ್ಲ. ಆದರೆ ನಿಮಗೆ ತಿಳಿದಿದೆ, ನಾವು ಯುದ್ಧದ ಸ್ಥಿತಿಯಲ್ಲಿದ್ದೇವೆ, ಏನಾದರೂ ಸಂಭವಿಸಬಹುದು ಘಟನೆಯ ಬಗ್ಗೆ ಇಸ್ರೇಲ್ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.

ಲೈವ್ ವಿಡಿಯೊ ಮಾಡುತ್ತಿರುವಾಗ ಅಬ್ದುಲ್ಲಾನನ್ನು ಕೊಲ್ಲಲಾಗಿದೆ ಎಂದು ರಾಯಿಟರ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಒಂದು ದೊಡ್ಡ ಸ್ಫೋಟದ ಸದ್ದು ಕ್ಯಾಮರಾವನ್ನು ಅಲುಗಾಡಿಸಿತು,  ಗಾಳಿಯಲ್ಲಿ ಹೊಗೆ ತುಂಬಿಕೊಂಡಿತು. ಕಿರುಚಾಟಗಳು ಕೇಳಿದಾಗ ಕ್ಯಾಮೆರಾ ಬೆಟ್ಟದ ಕಡೆಗೆ ತಿರುಗುವುದು ವಿಡಿಯೊದಲ್ಲಿ ಕಾಣುತ್ತದೆ.

ನಮ್ಮ ವಿಡಿಯೋಗ್ರಾಫರ್ ಇಸ್ಸಾಮ್ ಅಬ್ದುಲ್ಲಾ ಹತ್ಯೆಯಾಗಿದೆ ಎಂದು ತಿಳಿದು ನಮಗೆ ಅತೀವ ದುಃಖವಾಗಿದೆ ಎಂದು ಸುದ್ದಿ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.  “ನಾವು ತುರ್ತಾಗಿ ಹೆಚ್ಚಿನ ಮಾಹಿತಿಯನ್ನು ಹುಡುಕುತ್ತಿದ್ದೇವೆ, ಈ ಪ್ರದೇಶದಲ್ಲಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಇಸಾಮ್ ಅವರ ಕುಟುಂಬ ಮತ್ತು ಸಹೋದ್ಯೋಗಿಗಳನ್ನು ಬೆಂಬಲಿಸುತ್ತೇವೆ ಎಂದು ಅದು ಹೇಳಿದೆ.

ಇನ್ನಿಬ್ಬರು ರಾಯಿಟರ್ಸ್ ಪತ್ರಕರ್ತರು, ಥಾರ್ ಅಲ್-ಸುಡಾನಿ ಮತ್ತು ಮಹೇರ್ ನಝೆಹ್ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ವೈದ್ಯಕೀಯ ಆರೈಕೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ರಾಯಿಟರ್ಸ್ ಮತ್ತು ಇತರ ಎರಡು ಸುದ್ದಿ ಸಂಸ್ಥೆಗಳು ಇಸ್ರೇಲ್‌ನ ದಿಕ್ಕಿನಿಂದ ಬರುತ್ತಿರುವ ಕ್ಷಿಪಣಿ ಗುಂಡಿನ ಚಿತ್ರೀಕರಣ ಮಾಡುತ್ತಿದ್ದಾಗ, ಗುಂಪಿನ ಉಳಿದವರ ಸಮೀಪವಿರುವ ತಗ್ಗು ಕಲ್ಲಿನ ಗೋಡೆಯ ಮೇಲೆ ಕುಳಿತುಕೊಂಡಿದ್ದ ಅಬ್ದುಲ್ಲಾಗೆ ತಾಗಿದೆ ಎಂದು ನಾಝೆ ಹೇಳಿದರು.

ಕೆಲವು ಸೆಕೆಂಡುಗಳ ನಂತರ, ಮತ್ತೊಂದು ಕ್ಷಿಪಣಿಯು ಗುಂಪು ಬಳಸುತ್ತಿದ್ದ ಕಾರಿಗೆ ಬಡಿದು ಬೆಂಕಿ ಹೊತ್ತಿಕೊಂಡಿತು.
ಎಪಿ ಮತ್ತು ಅಲ್ ಜಜೀರಾ ಸುದ್ದಿಸಂಸ್ಥೆ ಶೆಲ್‌ಗಳು ಇಸ್ರೇಲಿ ಎಂದು ಹೇಳಿಕೊಂಡರೆ, ಕ್ಷಿಪಣಿಗಳನ್ನು ಇಸ್ರೇಲ್ ನಿಜವಾಗಿಯೂ ಹಾರಿಸಿದೆಯೇ ಎಂದು ಸ್ಥಾಪಿಸಲು ಸಾಧ್ಯವಿಲ್ಲ ಎಂದು ರಾಯಿಟರ್ಸ್ ಹೇಳಿದೆ.

ಎಎಫ್‌ಪಿ ತನ್ನ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ. ಆದರೆ ಸಂಸ್ಥೆ ಅವರ ಹೆಸರನ್ನು ಬಹಿರಂಗಪಡಿಸಲಿಲ್ಲ. ಅಲ್ ಜಜೀರಾ ತನ್ನ ಇಬ್ಬರು ಪತ್ರಕರ್ತರಾದ ಎಲೀ ಬ್ರಾಖ್ಯಾ ಮತ್ತು ವರದಿಗಾರ ಕಾರ್ಮೆನ್ ಜೌಖಾದರ್ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಅವರನ್ನು ಪತ್ರಕರ್ತರು ಎಂದು ಸಲಭವಾಗಿ ಗುರುತಿಸಬಹುದಾಗಿದೆ ಎಂದು ಹೇಳಿದೆ. ಘಟನೆಗೆ ಇಸ್ರೇಲ್ ಅನ್ನು ದೂಷಿಸಿದ ಸುದ್ದಿಸಂಸ್ಥೆ, ಈ ಅಪರಾಧದ ಕೃತ್ಯಕ್ಕೆ ಎಲ್ಲರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದೆ.

ಒಪ್ಪಿಗೆಯ ಸ್ಥಳದಲ್ಲಿ ಉಳಿದ ಅಂತರರಾಷ್ಟ್ರೀಯ ಮಾಧ್ಯಮ ಸಿಬ್ಬಂದಿಯೊಂದಿಗೆ ನಮ್ಮ ತಂಡವು ಹತ್ತಿರದಲ್ಲಿ/ಪಕ್ಕದಲ್ಲಿಯೇ ಇದ್ದರೂ ಪ್ರಸಾರ ವಾಹನವನ್ನು ಬಾಂಬ್ ನಿಂದ ಸ್ಫೋಟಿಸಿ ಸಂಪೂರ್ಣವಾಗಿ ಸುಟ್ಟುಹಾಕಲಾಗಿದೆ ಎಂದು ಅಲ್ ಜಜೀರಾ ಹೇಳಿಕೆಯಲ್ಲಿ ತಿಳಿಸಿದೆ.

ಅಲ್ಮಾ ಅಲ್-ಶಾಬ್ ಗ್ರಾಮವು ಇಸ್ರೇಲ್ ಮತ್ತು ಹೆಜ್ಬೊಲ್ಲಾ ಜೊತೆ ನಿಕಟ ಸಂಬಂಧ ಹೊಂದಿರುವ ಪ್ಯಾಲೆಸ್ತೇನಿಯನ್ ಉಗ್ರರ ಗುಂಪು ಹಮಾಸ್ ನಡುವೆ ಮತ್ತಷ್ಟು ದಕ್ಷಿಣಕ್ಕೆ ಯುದ್ಧ ಪ್ರಾರಂಭವಾದಾಗಿನಿಂದ ಪುನರಾವರ್ತಿತ ಘರ್ಷಣೆಗಳ ತಾಣವಾಗಿದೆ. ಅಬ್ದುಲ್ಲಾನನ್ನು ಕೊಲ್ಲುವ ಸ್ವಲ್ಪ ಸಮಯದ ಮೊದಲು, ಅವರು ಹೆಲ್ಮೆಟ್ ಮತ್ತು ಫ್ಲಾಕ್ ಜಾಕೆಟ್ ಅನ್ನು ಧರಿಸಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಅವರ ಜಾಕೆಟ್  ಮೇಲೆ “ಪ್ರೆಸ್” ಎಂದು ಬರೆದಿರುವುದು ಕಾಣಿಸುತ್ತದೆ.

ಇದನ್ನೂ ಓದಿಜನರ ಕಣ್ಣೆದುರೇ ಚೀನಾದಲ್ಲಿ ಇಸ್ರೇಲ್ ರಾಜತಾಂತ್ರಿಕ ಅಧಿಕಾರಿಗೆ ಚಾಕು ಇರಿತ

ವಿಶ್ವಸಂಸ್ಥೆಯಲ್ಲಿ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರಸ್ ಹತ್ಯೆಗೀಡಾದ ಪತ್ರಕರ್ತರ ಕುಟುಂಬಕ್ಕೆ ಸಂತಾಪ ಸೂಚಿಸಿದರು. ಎಲ್ಲರಿಗೂ ಸತ್ಯವನ್ನು ತಲುಪಿಸಲು ಹಲವಾರು ಪತ್ರಕರ್ತರು ತಮ್ಮ ಜೀವನವನ್ನು ಮುಡಿಪಾಗಿಡುತ್ತಿದ್ದಾರೆ ಎಂದು ಅವರು ಹೇಳಿದರು.

ಅಲ್ಲಿ ಏನಾಗಿದೆ ಎಂಬುದರ ಕುರಿತು ತನಿಖೆಗಾಗಿ ವಿಶ್ವ ಸಂಸ್ಥೆ ಆಶಿಸುತ್ತಿದೆ ಎಂದು ಯುಎನ್ ವಕ್ತಾರ ಸ್ಟೀಫನ್ ಡುಜಾರಿಕ್ ಈ ಹಿಂದೆ ಹೇಳಿದ್ದಾರೆ. ಪತ್ರಕರ್ತರಿಗೆ ರಕ್ಷಣೆ ನೀಡಬೇಕು ಮತ್ತು ಅವರ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಅವರು ಹೇಳಿದ್ದಾರೆ. ಶುಕ್ರವಾರದ ನಂತರ, ಲೆಬನಾನ್ ಮೂಲದ ಡಜನ್ಗಟ್ಟಲೆ ಪತ್ರಕರ್ತರು ಮತ್ತು ಹಕ್ಕುಗಳ ಕಾರ್ಯಕರ್ತರು ಬೈರೂತ್‌ನ ರಾಷ್ಟ್ರೀಯ ವಸ್ತು ಸಂಗ್ರಹಾಲಯದ ಹೊರಗೆ ಅಬ್ದುಲ್ಲಾ ಅವರ ಸಾವು ಮತ್ತು ಪತ್ರಕರ್ತರ ಗಾಯದ ಬಗ್ಗೆ ವಿಷಾದ ವ್ಯಕ್ತಪಡಿಸಲು ಜಮಾಯಿಸಿದ್ದರು.

ಲೆಬನಾನ್-ಇಸ್ರೇಲ್ ಗಡಿಯಲ್ಲಿ ಇಸ್ರೇಲಿ ಪಡೆಗಳು ಮತ್ತು ಲೆಬನಾನ್‌ನ ಉಗ್ರಗಾಮಿ ಹಿಜ್ಬುಲ್ಲಾ ಗುಂಪಿನ ಸದಸ್ಯರ ನಡುವಿನ ಗುಂಡಿನ ವಿನಿಮಯದ ಸಂದರ್ಭದಲ್ಲಿ ಶೆಲ್ ದಾಳಿ ಸಂಭವಿಸಿದೆ. ಲೆಬನಾನ್-ಇಸ್ರೇಲ್ ಗಡಿಯು ದಕ್ಷಿಣ ಇಸ್ರೇಲ್ ಮೇಲೆ ಉಗ್ರಗಾಮಿ ಪ್ಯಾಲೆಸ್ತೀನಿಯನ್ ಗುಂಪು ಹಮಾಸ್ ಶನಿವಾರದ ದಾಳಿಯ ನಂತರ ವಿರಳವಾದ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:31 pm, Sat, 14 October 23