Operation Ajay: ಇಸ್ರೇಲ್‌ನಿಂದ ದೆಹಲಿಗೆ ಆಗಮಿಸಿದ ಭಾರತೀಯರ ಮೂರನೇ ತಂಡ, 197 ಮಂದಿಯನ್ನು ಹೊತ್ತು ಬಂದ ವಿಮಾನ
ಆಪರೇಷನ್ ಅಜಯ್ ಅಡಿಯಲ್ಲಿ ಮೂರನೇ ವಿಮಾನವು ಶನಿವಾರ ತಡರಾತ್ರಿ ಇಸ್ರೇಲ್‌ನಿಂದ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿತು. ಈ ವಿಮಾನದಲ್ಲಿ 197 ಭಾರತೀಯ ನಾಗರಿಕರಿದ್ದು, ಅವರನ್ನು ಇಸ್ರೇಲ್‌ನಿಂದ ಸುರಕ್ಷಿತವಾಗಿ ಕರೆತರಲಾಗಿದೆ. ಆಪರೇಷನ್ ಅಜಯ್ ಅಡಿಯಲ್ಲಿ ಇದುವರೆಗೆ 644 ಜನರನ್ನು ಇಸ್ರೇಲ್‌ನಿಂದ ಸ್ಥಳಾಂತರಿಸಲಾಗಿದೆ.
ಆಪರೇಷನ್ ಅಜಯ್ ಅಡಿಯಲ್ಲಿ ಮೂರನೇ ವಿಮಾನವು ಶನಿವಾರ ತಡರಾತ್ರಿ ಇಸ್ರೇಲ್‌ನಿಂದ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿತು. ಈ ವಿಮಾನದಲ್ಲಿ 197 ಭಾರತೀಯ ನಾಗರಿಕರಿದ್ದು, ಅವರನ್ನು ಇಸ್ರೇಲ್‌ನಿಂದ ಸುರಕ್ಷಿತವಾಗಿ ಕರೆತರಲಾಗಿದೆ. ಆಪರೇಷನ್ ಅಜಯ್ ಅಡಿಯಲ್ಲಿ ಇದುವರೆಗೆ 644 ಜನರನ್ನು ಇಸ್ರೇಲ್‌ನಿಂದ ಸ್ಥಳಾಂತರಿಸಲಾಗಿದೆ.
ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರು ಇಸ್ರೇಲ್ ನಿಂದ ಹಿಂದಿರುಗಿದ ನಾಗರಿಕರನ್ನು ಸ್ವಾಗತಿಸಿದರು. ಕೇಂದ್ರ ಸಚಿವ ಕೌಶಲ್ ಕಿಶೋರ್ ಮಾತನಾಡಿ, ನಾನು ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಧನ್ಯವಾದ ಮತ್ತು ಅಭಿನಂದನೆ ಸಲ್ಲಿಸುತ್ತೇನೆ. ಪ್ರಧಾನಿ ಮೋದಿ ಅವರು ದೇಶದ ನಾಗರಿಕರಿಗೆ ಸಮರ್ಪಿತರಾಗಿದ್ದಾರೆ ಮತ್ತು ಭಾರತೀಯ ನಾಗರಿಕರನ್ನು ಇಸ್ರೇಲ್‌ನಿಂದ ಸುರಕ್ಷಿತವಾಗಿ ಇಲ್ಲಿಗೆ ಕರೆತರಲಾಗುತ್ತಿದೆ. ತನ್ನ ದೇಶಕ್ಕೆ ಮರಳಿದ ನಂತರ ಅವರು ಸಂತೋಷವಾಗಿರುತ್ತಾರೆ.
ಇಸ್ರೇಲ್‌ನಿಂದ ಹಿಂದಿರುಗಿದ ಭಾರತೀಯ ಪ್ರಜೆ ಪ್ರೀತಿ ಶರ್ಮಾ ಮಾತನಾಡಿ, ಇಸ್ರೇಲ್‌ನಲ್ಲಿ ಭಾರತೀಯ ಮೂಲದ ಅನೇಕ ಜನರಿದ್ದಾರೆ ಮತ್ತು ಈ ಕಾರ್ಯಾಚರಣೆಯ ಅಡಿಯಲ್ಲಿ ಅಲ್ಲಿ ಸಿಕ್ಕಿಬಿದ್ದ ಜನರನ್ನು ಸ್ಥಳಾಂತರಿಸಿದ್ದಕ್ಕಾಗಿ ನಾನು ಭಾರತ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಮತ್ತಷ್ಟು ಓದಿ: ಇಸ್ರೇಲ್ ವೈಮಾನಿಕ ದಾಳಿ: ಹಮಾಸ್ ಉಗ್ರರ ಒತ್ತೆಯಾಳಾಗಿದ್ದ 13 ಇಸ್ರೇಲಿಗರು ಸಾವು
ಇಸ್ರೇಲ್‌ನಿಂದ ಭಾರತಕ್ಕೆ ಮರಳಿದ ಲಲಿತ್ ಮಾತನಾಡಿ ನಾನು ಅಲ್ಲಿ ಸಿಲುಕಿಕೊಂಡಿದ್ದೆ, ನನ್ನ ಅಧ್ಯಯನ ಮುಗಿದಿದೆ, ಆರು ವಿಮಾನಗಳು ರದ್ದುಗೊಂಡಿತ್ತು. ನನ್ನ ಜೊತೆ ನನ್ನ ಮಗಳು ಮತ್ತು ಹೆಂಡತಿ ಕೂಡ ಇದ್ದರು. ಅವರನ್ನು ಭಾರತಕ್ಕೆ ಕರೆತಂದ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಇಸ್ರೇಲ್‌ನಿಂದ ಮೊದಲ ವಿಶೇಷ ವಿಮಾನ ಗುರುವಾರ 212 ಜನರನ್ನು ಹೊತ್ತೊಯ್ಯಿತು. 235 ಭಾರತೀಯ ನಾಗರಿಕರ ಎರಡನೇ ಬ್ಯಾಚ್ ಶುಕ್ರವಾರ ತಡರಾತ್ರಿ ಟೇಕಾಫ್ ಆಗಿದೆ. ಇಲ್ಲಿಯವರೆಗೆ, ಒಟ್ಟು 644 ಭಾರತೀಯ ನಾಗರಿಕರನ್ನು ಇಸ್ರೇಲ್‌ನಿಂದ ಸ್ಥಳಾಂತರಿಸಲಾಗಿದೆ.
ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ 1,300 ಮಂದಿಯನ್ನು ಕೊಂಡಿದ್ದರೆ, ಪ್ರತೀಕಾರದ ದಾಳಿಯಲ್ಲಿ ಇಸ್ರೇಲ್ ಗಾಜಾದಲ್ಲಿ 1,900 ಮಂದಿಯನ್ನು ಕೊಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:13 am, Sun, 15 October 23