42 ವರ್ಷದ ರಿಷಿ ಸುನಕ್ (Rishi Sunak) ಅವರು ಸೋಮವಾರ ಬ್ರಿಟಿಷ್ ಪ್ರಧಾನಿಯಾದ (UK PM) ಮೊದಲ ಭಾರತ ಮೂಲದ ವ್ಯಕ್ತಿಯಾಗಿದ್ದಾರೆ. ಪ್ರಪಂಚದಾದ್ಯಂತದ ದೀಪಾವಳಿ ಸಂಭ್ರಮಾಚರಣೆ ಹೊತ್ತಲ್ಲೇ 42 ನೇ ವಯಸ್ಸಿನ ರಿಷಿ ಸುನಕ್ ಯುನೈಟೆಡ್ ಕಿಂಗ್ಡಂನ ಪ್ರಧಾನಿ ಪಟ್ಟಕ್ಕೇರಿದ್ದಾರೆ. ಈ ಮೂಲಕ ವಿಶ್ವದ ಇತರ ದೇಶಗಳಲ್ಲಿ ಪ್ರಧಾನ ಹುದ್ದೆಗೇರಿದ ಭಾರತೀಯ ಮೂಲದವರ ಪಟ್ಟಿಯಲ್ಲಿ ರಿಷಿ ಸುನಕ್ ಸ್ಥಾನಪಡೆದಿದ್ದಾರೆ.
ವಿಶ್ವದಾದ್ಯಂತ ಪ್ರಧಾನ ಹುದ್ದೆಗಳಲ್ಲಿರುವ ಭಾರತ ಮೂಲದವರು
ಕಮಲಾ ಹ್ಯಾರಿಸ್
ಯುಎಸ್ ಉಪಾಧ್ಯಕ್ಷರಾಗಿರುವ ಕಮಲಾ ಹ್ಯಾರಿಸ್ ಅವರ ಪೋಷಕರು ಭಾರತ ಮತ್ತು ಜಮೈಕಾದಿಂದ ವಲಸೆ ಬಂದವರು. ಕಮಲಾ ಹುಟ್ಟಿದ್ದು ಕ್ಯಾಲಿಫೋರ್ನಿಯಾದಲ್ಲಿ. ಅಮೆರಿಕದ ಉಪಾಧ್ಯಕ್ಷೆ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಮತ್ತು ಕಪ್ಪು ಬಣ್ಣದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು . ಕಮಲಾ ಹ್ಯಾರಿಸ್ 2019 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ವಿಮರ್ಶಕರು ಹೇಳುವ ಪ್ರಕಾರ ಕಮಲಾ ಅವರ ಸಾಧನೆಗಳು,ರಾಜಕೀಯದಲ್ಲಿ ಕಪ್ಪು ಮಹಿಳಾ ನಾಯಕರ ಹೊಸ ಪೀಳಿಗೆಯನ್ನು ಉತ್ತೇಜಿಸುತ್ತದೆ.
ಪ್ರವಿಂದ್ ಜುಗ್ನಾಥ್
2017 ರಿಂದ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರ ಪೂರ್ವಜರು ಉತ್ತರ ಪ್ರದೇಶದಿಂದ ಬಂದವರು. ಜುಗ್ನಾಥ್ ಅವರು ಅಹಿರ್ಸ್ ಹಿಂದೂ ಕುಟುಂಬದಲ್ಲಿ ಜನಿಸಿದರು.
ಆಂಟೋನಿಯೊ ಕೋಸ್ಟಾ
2015 ರಿಂದ ಪೋರ್ಚುಗಲ್‌ನ ಪ್ರಧಾನ ಮಂತ್ರಿ ಆಂಟೋನಿಯೊ ಕೋಸ್ಟಾ ಪೋರ್ಚುಗೀಸ್ ಮತ್ತು ಭಾರತೀಯ ಮೂಲದವರು. ಗೋವಾದಲ್ಲಿ ಕೋಸ್ಟಾ ಅವರನ್ನು ಪ್ರೀತಿಯಿಂದ ಬಾಬುಷ್ ಎಂದು ಕರೆಯುತ್ತೆ
ಪೃಥ್ವಿರಾಜ್‌ಸಿಂಗ್ ರೂಪನ್
ಪೃಥ್ವಿರಾಜ್‌ಸಿಂಗ್ ರೂಪನ್ ಅವರು 2019 ರಿಂದ ಮಾರಿಷಸ್‌ನ ಏಳನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೂಪನ್ ಭಾರತೀಯ ಆರ್ಯ ಸಮಾಜ ಹಿಂದೂ ಕುಟುಂಬದಲ್ಲಿ ಜನಿಸಿದವರು
ಚಾನ್ ಸಂತೋಖಿ
ಚಂದ್ರಿಕಾಪರ್ಸಾದ್ “ಚಾನ್” ಸಂತೋಖಿ ಒಬ್ಬ ಸುರಿನಾಮಿ ರಾಜಕಾರಣಿ ಮತ್ತು ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಅವರು 2020 ರಿಂದ ಸುರಿನಾಮ್‌ನ 9 ನೇ ಅಧ್ಯಕ್ಷರಾಗಿದ್ದಾರೆ. ಅವರು 1959 ರಲ್ಲಿ ಸುರಿನಾಮ್ ಜಿಲ್ಲೆಯ ಲೆಲಿಡಾರ್ಪ್‌ನಲ್ಲಿ ಇಂಡೋ-ಸುರಿನಾಮಿಸ್ ಹಿಂದೂ ಕುಟುಂಬದಲ್ಲಿ ಜನಿಸಿದರು.
ಮೊಹಮ್ಮದ್ ಇರ್ಫಾನ್ ಅಲಿ
ಮೊಹಮದ್ ಇರ್ಫಾನ್ ಅಲಿ ಅವರು ಗಯಾನಾದ ಒಂಬತ್ತನೇ ಕಾರ್ಯಕಾರಿ ಅಧ್ಯಕ್ಷರಾಗಿ ಆಗಸ್ಟ್ 2, 2020 ರಂದು ಪ್ರಮಾಣ ವಚನ ಸ್ವೀಕರಿಸಿದರು. ಅವರು ವೆಸ್ಟ್ ಕೋಸ್ಟ್ ಡೆಮಾರಾರಾದಲ್ಲಿನ ಲಿಯೊನೊರಾದಲ್ಲಿ ಮುಸ್ಲಿಂ, ಇಂಡೋ-ಗಯಾನೀಸ್ ಕುಟುಂಬದಲ್ಲಿ ಜನಿಸಿದರು.
Published On - 7:54 pm, Mon, 24 October 22