ರಷ್ಯಾಕ್ಕೆ ಇಸ್ರೇಲ್​​ ಪ್ರಜೆಗಳ ಆಗಮನದ ವದಂತಿ: “ಅಲ್ಲಾಹು ಅಕ್ಬರ್” ಎಂದು ಘೋಷಣೆ ಕೂಗುತ್ತಾ ವಿಮಾನ ನಿಲ್ದಾಣದ ಮೇಲೆ ದಾಳಿ

|

Updated on: Oct 30, 2023 | 2:20 PM

ಇಸ್ರೇಲ್‌ನಿಂದ ರಷ್ಯಾಕ್ಕೆ ವಿಮಾನವೊಂದು ಆಗಮಿಸುತ್ತಿದೆ ಎಂಬ ವದಂತಿ ಹರಡಿದೆ. ವಿಮಾನವೊಂದು ರಷ್ಯಾದ ಡಾಗೆಸ್ತಾನ್ ಪ್ರಾಂತ್ಯದ ಮಖಚ್ಕಲಾ ವಿಮಾನ ನಿಲ್ದಾಣಕ್ಕೆ ಬಂದಿದೆ. ಈ ವಿಮಾನ ಇಸ್ರೇಲ್​​​ನಿಂದ ಬಂದಿದೆ, ವಿಮಾನದಲ್ಲಿ ಇಸ್ರೇಲ್​ ಪ್ರಜೆಗಳು ಹಾಗೂ ಯಹೂದಿಗಳಿದ್ದರೆ ಎಂಬ ಸುದ್ದಿಗಳು ಹರಡಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ರಷ್ಯಾದಲ್ಲಿದ್ದ ಪ್ಯಾಲೇಸ್ಟಿನಿಯನ್ ಬೆಂಬಲಿಗರು ಪ್ಯಾಲೇಸ್ಟಿನಿಯನ್ ಧ್ವಜವನ್ನು ಹಿಡಿದುಕೊಂಡು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದ್ದಾರೆ.

ರಷ್ಯಾಕ್ಕೆ ಇಸ್ರೇಲ್​​ ಪ್ರಜೆಗಳ ಆಗಮನದ ವದಂತಿ: ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ವಿಮಾನ ನಿಲ್ದಾಣದ ಮೇಲೆ ದಾಳಿ
ವೈರಲ್​​ ವಿಡಿಯೋ
Follow us on

ಇಸ್ರೇಲ್ ಮತ್ತು ಹಮಾಸ್​​ (Israel and Hamas) ನಡುವಿನ ಯುದ್ಧದ ಪರಿಣಾಮ ಬೇರೆ ದೇಶಗಳಿಗೆ ಬೀರುತ್ತಿದೆ. ಇಸ್ರೇಲ್​​​ ರಾಷ್ಟ್ರದ ಪ್ರಜೆಗಳನ್ನು ಗುರಿಯಾಗಿಸಿ ಅವರನ್ನು ವಿರೋಧಿಸುವ ಕೆಲಸ ನಡೆಯುತ್ತಿದೆ. ಇದೀಗ ಇಂತಹ ಘಟನೆ ರಷ್ಯಾದಲ್ಲಿ ನಡೆದಿದೆ. ರಷ್ಯಾವು ಪ್ಯಾಲೇಸ್ಟಿನಿಯನ್​ಗೆ ಬೆಂಬಲವನ್ನು ನೀಡಿತ್ತು. ಇದರ ಪರಿಣಾಮ ರಷ್ಯಾದ ನೆಲದಲ್ಲಿ ಗಟ್ಟಿಯಾಗಿ ನಿಂತಿದೆ ಎಂಬುದಕ್ಕೆ ಈ ಘಟನೆಯೆ ಸಾಕ್ಷಿ. ಇಸ್ರೇಲ್‌ನಿಂದ ರಷ್ಯಾಕ್ಕೆ ವಿಮಾನವೊಂದು ಆಗಮಿಸುತ್ತಿದೆ ಎಂಬ ವದಂತಿ ಹರಡಿದೆ. ವಿಮಾನವೊಂದು ರಷ್ಯಾದ ಡಾಗೆಸ್ತಾನ್ ಪ್ರಾಂತ್ಯದ ಮಖಚ್ಕಲಾ ವಿಮಾನ ನಿಲ್ದಾಣಕ್ಕೆ ಬಂದಿದೆ. ಈ ವಿಮಾನ ಇಸ್ರೇಲ್​​​ನಿಂದ ಬಂದಿದೆ, ವಿಮಾನದಲ್ಲಿ ಇಸ್ರೇಲ್​ ಪ್ರಜೆಗಳು ಹಾಗೂ ಯಹೂದಿಗಳಿದ್ದರೆ ಎಂಬ ಸುದ್ದಿಗಳು ಹರಡಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ರಷ್ಯಾದಲ್ಲಿದ್ದ ಪ್ಯಾಲೇಸ್ಟಿನಿಯನ್ ಬೆಂಬಲಿಗರು ಪ್ಯಾಲೇಸ್ಟಿನಿಯನ್ ಧ್ವಜವನ್ನು ಹಿಡಿದುಕೊಂಡು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದ್ದಾರೆ.

ಈ ಸಮಯದಲ್ಲಿ ಇಸ್ರೇಲ್​​ ಪ್ರಜೆಗಳು ಎಂದು ಭಾವಿಸಿ ಪ್ರಯಾಣಿಕರನ್ನು ತಡೆದಿದ್ದಾರೆ ಹಾಗೂ ತಮ್ಮ ರಾಷ್ಟ್ರಕ್ಕೆ ವಾಪಸ್ಸು ಹೋಗುವಂತೆ ಹೇಳಿದ್ದಾರೆ. ಈ ಘಟನೆಯ ನಂತರ ಇಸ್ರೇಲ್​​ ತನ್ನ ಪ್ರಜೆಗಳನ್ನು ರಷ್ಯಾ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರಷ್ಯಾ ಡಾಗೆಸ್ತಾನ್ ಗವರ್ನರ್ ಘಟನೆಗೆ ಕಾರಣರಾದವರನ್ನು ಶಿಕ್ಷಿಸಲಾಗುವುದು ಎಂದು ಹೇಳಿದೆ. ಈ ವಿಮಾನ ನಿಲ್ದಾಣಕ್ಕೆ ಸುಮಾರು ಜನ ಪ್ಯಾಲೇಸ್ಟಿನಿಯನ್ ಬೆಂಬಲಿಗರು ಧಾವಿಸಿದರು ಎಂದು ಹೇಳಲಾಗಿದೆ.

ಇಲ್ಲಿದೆ ವಿಡಿಯೋ

ಪ್ರತಿಭಟನೆ ಮಾಡುವ ವೇಳೆ “ಅಲ್ಲಾಹು ಅಕ್ಬರ್” ಎಂಬ ಘೋಷಣೆ ಹಾಕುತ್ತಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಒಂದು ವಿಡಿಯೋ ಕೂಡ ಎಕ್ಸ್​​ನಲ್ಲಿ (ಈ ಹಿಂದಿನ ಟ್ವಿಟರ್​) ವೈರಲ್​​​ ಆಗಿದೆ. ಈ ವಿಡಿಯೋದಲ್ಲಿ ವಿಮಾನದಲ್ಲಿ ಬಂದ ಪ್ರಯಾಣಿಕರನ್ನು ಪ್ರತಿಭಟನೆಕಾರರು ಪ್ರಶ್ನೆ ಮಾಡಿದ್ದಾರೆ, ನೀವು ಯಾರು? ಎಲ್ಲಿಂದ ಬಂದಿದ್ದು?, ಇನ್ನು ಪಾಸ್​​ಪೋರ್ಟ್​​ಗಳನ್ನು ತೋರಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಹಮಾಸ್, ಇಸ್ರೇಲ್​ ಯುದ್ಧದ ಬಗ್ಗೆ ಕಳವಳ, ಪ್ರಧಾನಿ ಮೋದಿ ಈಜಿಪ್ಟ್​ ಅಧ್ಯಕ್ಷ ಅಬ್ದೆಲ್ ನಡುವೆ ಚರ್ಚೆ

ಇನ್ನು ವಿಮಾನ ನಿಲ್ದಾಣಕ್ಕೆ ಹಠತ್​​ ಆಗಿ ಬಂದ ಜನರಲ್ಲಿ ಕೆಲವರು ಮಕ್ಕಳನ್ನು ಕೊಂದವರಿಗೆ ಇಲ್ಲಿ ಜಾಗವಿಲ್ಲ ಎಂಬ ಫಲಕಗಳನ್ನು ಹಿಡಿದುಕೊಂಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇನ್ನೊಂದು ವಿಡಿಯೋದಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್‌ನೊಳಗೆ ಗುಂಪೊಂದು ಬಾಗಿಲುಗಳನ್ನು ಹೊಡೆಯಲು ಮುಂದಾಗಿದೆ. ಈ ವಿಮಾನ ನಿರಾಶ್ರಿತ ಪ್ರಯಾಣ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಇಲ್ಲಿಗೆ ಯಹೂದಿ ನಿರಾಶಿತರು ಬರಬಾರದು ಎಂದು ಹೇಳಿದ್ದಾರೆ.

ಇನ್ನು ಇಸ್ರೇಲ್​​ ಪ್ರಜೆಗಳು ರಷ್ಯಾಕ್ಕೆ ಬರುತ್ತಿದ್ದರೆ ಎಂಬ ವದಂತಿಯನ್ನು ಟೆಲಿಗ್ರಾಮ್ ಖಾತೆಯಲ್ಲಿ ಹಬ್ಬಿಸಲಾಗಿದೆ. ಇದರಲ್ಲಿ ಇಸ್ರೇಲ್​​​​ನಿಂದ ಬರುತ್ತಿರುವ ಯಹೂದಿ ಪ್ರಜೆಗಳನ್ನು ತಡೆಯುವಂತೆ ಹಾಗೂ ಗಾಜಾದಲ್ಲಿ ಇಸ್ರೇಲಿ ಕ್ರಮಗಳನ್ನು ಖಂಡಿಸುವಂತೆ ಪೋಸ್ಟ್​​ ಮಾಡಲಾಗಿದೆ. ಈ ಘಟನೆಯ ನಂತರ ರಷ್ಯಾ ಏವಿಯೇಷನ್ ​​​​ಏಜೆನ್ಸಿ ರೊಸಾವಿಯಾಟ್ಸಿಯಾ ಮಖಚ್ಕಲಾ ವಿಮಾನ ನಿಲ್ದಾಣದಿಂದ ಒಳಬರುವ ಮತ್ತು ಹೊರಹೋಗುವ ವಿಮಾನಗಳನ್ನು ನಿರ್ಬಂಧಿಸಲಾಗಿದೆ. ಜತೆಗೆ ಸ್ಥಳಕ್ಕೆ ಭದ್ರತಾ ಪಡೆಗಳು ಬಂದಿದೆ ಎಂದು ಹೇಳಲಾಗಿದೆ. ಭಾನುವಾರ ರಾತ್ರಿಯೆ ರೋಸಾವಿಯಾಟ್ಸಿಯಾ ವಿಮಾನ ನಿಲ್ದಾಣದಲ್ಲಿದ್ದ ಜನರನ್ನು ಹೊರಗೆ ಕಳುಹಿಸಲಾಗಿದೆ ಹಾಗೂ ಈ ವಿಮಾನ ನಿಲ್ದಾಣವನ್ನು ನ.6ಎವರಗೆ ಮುಚ್ಚಲಾಗುವುದು ಎಂದು ಹೇಳಿದೆ. ಈ ಘಟನೆಯಿಂದ ಅನೇಕರಿಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:53 pm, Mon, 30 October 23